ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಕನ್ನಡಿಗ ರಾಹುಲ್ ಅವರನ್ನು ಇಷ್ಟಪಡದೇ ಇರೋರು ಯಾರು ಇಲ್ಲ. ದ್ರಾವಿಡ್ ನಡೆ-ನುಡಿ ಎಲ್ಲರಿಗೂ ಆದರ್ಶ. ಕ್ರಿಕೆಟ್ ಅಂಗಣದಿಂದಾಚೆಗೂ ದ್ರಾವಿಡ್ ಅವರನ್ನು ಎಲ್ಲರೂ ಗೌರವಿಸ್ತಾರೆ. ಅಂಥಾ ದೊಡ್ಡ ವ್ಯಕ್ತಿತ್ವ ದ್ರಾವಿಡ್ ಅವರದ್ದು. ದ್ರಾವಿಡ್ ಆಟದಂತೆ ಆಡೋ ಮಾತಲ್ಲೂ ತೂಕವಿದೆ.
ದ್ರಾವಿಡ್ ಅವರ ಮಾತಿಗೆ ಡಬ್ಲ್ಯೂ ಡಬ್ಲ್ಯೂ ಇ ನ ಖ್ಯಾತ ರೆಸ್ಲರ್ ಜಾನ್ ಸೆನಾ ಕೂಡ ತಲೆಬಾಗಿದ್ದಾರೆ. ದ್ರಾವಿಡ್ ಅವರು ‘ಯು ಡೋಂಟ್ ಪ್ಲೇ ಫಾರ್ ರಿವೇಂಜ್. ಯು ಪ್ಲೇ ಫಾರ್ ರೆಸ್ಪೆಕ್ಟ್ ಅಂಡ್ ಪ್ರೈಡ್ (ನೀವು ಸೇಡಗಿಗಾಗಿ ಆಡಬೇಕಿಲ್ಲ. ಗೌರವ ಹಾಗೂ ಹೆಮ್ಮೆಯ ಸಲುವಾಗಿ ಆಡಿ) ಎಂದು ಇನ್ಸ್ಟ್ರಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆದ ಡಬ್ಲ್ಯೂ ಡಬ್ಲ್ಯೂ ಇ ಲೈವ್ ಇವೆಂಟ್ ನಲ್ಲಿ ಟ್ರಿಪಲ್ ಎಚ್ ವಿರುದ್ಧ ಗೆಲುವು ಸಾಧಿಸಿದ ಜಾನ್ ಸೆನಾ ದ್ರಾವಿಡ್ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ ಲಕ್ಷಕ್ಕೂ ಅಧಿಕ ಲೈಕ್ಸ್, ಸಾವಿಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ.