ಪ್ರೇರಣೆ ನೀಡಿದ ಚಾನಲ್‍ನಲ್ಲೇ ನ್ಯೂಸ್ ಆ್ಯಂಕರ್ ಆಗೋ ಭಾಗ್ಯ…!

Date:

ನಗುಮೊಗದ ನಿರೂಪಕಿ…ಕೋಪ ಎಷ್ಟು ಬೇಗ ಬರುತ್ತೋ ಅಷ್ಟೇ ಬೇಗ ತಣ್ಣಗಾಗ್ತಾರೆ…! ಯಾರಾದ್ರು ಮನಸ್ಸಿಗೆ ನೋವಾಗುವಂತೆ ನಡೆದು ಕೊಂಡರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ…! ಮೌನ, ತಾಳ್ಮೆ ಇವರ ಶ್ರೀಮಂತಿಕೆ…! ಮಾಧ್ಯಮ ಲೋಕಕ್ಕೆ ಬರಲು ಪ್ರೇರಣೆ ನೀಡಿದ ಚಾನಲ್‍ನಲ್ಲೇ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡ ಪ್ರತಿಭಾವಂತೆ…! ಇವರೇ ಟಿವಿ9 ನ ನಿರೂಪಕಿ ನಿಶಾ ಶೆಟ್ಟಿ.

ಶಾಲಾ-ಕಾಲೇಜು ದಿನಗಳಲ್ಲಿ ನ್ಯೂಸ್ ಅಂದ್ರೆ ಇವರಿಗೆ ಅಲರ್ಜಿ…! ಟಿವಿ ನೋಡುವಾಗ ಮಧ್ಯದಲ್ಲಿ ನ್ಯೂಸ್ ಬಂತು ಅಂತಾದ್ರೆ ಅಯ್ಯೋ… ಇದೊಳ್ಳೆ ಕಿರಿಕಿರಿ ಅಂತ ಗೊಣಗುಟ್ಟುತ್ತಿದ್ದವರು…! ಹೀಗಿದ್ದ ಇವರನ್ನು ನ್ಯೂಸ್ ನೋಡುವಂತೆ ಮಾಡಿದ್ದೇ ಟಿವಿ9…!
ನಿಶಾ ಹುಟ್ಟಿ ಬೆಳೆದಿದ್ದೆಲ್ಲಾ ಧರ್ಮಸ್ಥಳದಲ್ಲಿ.

ತಂದೆ ಹೋಟೆಲ್ ಉದ್ಯಮಿ ದಿ. ಹೊನ್ನಯ್ಯ ಶೆಟ್ಟಿ. ತಾಯಿ ಜಯಂತಿ, ಸಹೋದರ ನಿತಿನ್, ಪತಿ ನವೀನ್ ಶೆಟ್ಟಿ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಕಲಿತಿದ್ದೆಲ್ಲಾ ಧರ್ಮಸ್ಥಳ ಮತ್ತು ಉಜಿರೆಯ ಎಸ್‍ಡಿಎಂ ಸಂಸ್ಥೆಯಲ್ಲಿಯೇ.


ಚಿಕ್ಕಂದಿನಿಂದಲೂ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸೇರಿದಂತೆ ಎಲ್ಲಾ ಪ್ರಕಾರದ ಕಲೆಗಳ ಬಗ್ಗೆ ಆಸಕ್ತಿ. ಬಿಡುವಿನ ವೇಳೆಯಲ್ಲಿ ಅಡುಗೆ ಮಾಡೋದು ಇಷ್ಟ. ಪಿಯುಸಿ ದಿನಗಳಲ್ಲಿ ನ್ಯೂಸ್ ಪೇಪರ್ ಓದ್ತಿದ್ರು. ಆದ್ರೆ, ಟಿವಿಯಲ್ಲಿ ನ್ಯೂಸ್ ನೋಡ್ತಿರ್ಲಿಲ್ಲ. ಆದ್ರೆ ಪದವಿಯ ಆರಂಭದ ದಿನಗಳಿಂದ ಟೆಲಿವಿಷನ್ ವಾಹಿನಿಗಳಲ್ಲಿ ನ್ಯೂಸ್ ನೋಡೋಕೆ ಶುರುಮಾಡಿದ್ರು…! ಇದಕ್ಕೆ ಕಾರಣವಾಗಿದ್ದೇ ಟಿವಿ9…!

ಟಿವಿ9ನ ನ್ಯೂಸ್ ಪ್ರೆಸೆಂಟೇಷನ್, ಆ ಶೈಲಿ ಇವರ ಗಮನ ಸೆಳೆಯಿತು. ಅಷ್ಟೇ ಅಲ್ಲ ಮಾಧ್ಯಮ ಕ್ಷೇತ್ರದತ್ತ ಆಕರ್ಷಿತರಾಗುವಂತೆ ಮಾಡಿತ್ತು. ನಾನೂ ಕೂಡ ಪತ್ರಕರ್ತೆ ಆಗ್ಬೇಕು. ಒಂದಲ್ಲ ಒಂದು ದಿನ ಟಿವಿ9ನಲ್ಲಿ ಕೆಲಸ ಮಾಡಲೇ ಬೇಕು ಎಂಬ ಕನಸಿತ್ತು, ಮುಂದೆ ನನಸಾಯಿತು.


ನೀನು ಕೂಡ ಪತ್ರಕರ್ತೆ ಆಗಬಹುದು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡಿ ಎಂದು ಸ್ನೇಹಿತರು ಹೇಳಿದ್ರು. ಇವರ ಪ್ರೇರಣೆಯಿಂದ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಮಾಡಲು ಮುಂದಾದ ನಿಶಾ, ‘ಇವತ್ತು ಮೀಡಿಯಾದಲ್ಲಿ ವರ್ಕ್ ಮಾಡ್ತಿದ್ದೀನಿ ಅಂತಾದ್ರೆ ನನ್ನ ಸ್ನೇಹಿತರೇ ಕಾರಣ’ ಅಂತಾರೆ.


ಎಸ್‍ಡಿಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ ಟಿವಿ9 ಹೊಸಬರನ್ನು ನಮ್ಮ ಬಳಗಕ್ಕೆ ಸೇರಿಸಿಕೊಳ್ಳಲು ಇಚ್ಚಿಸಿದ್ದೇವೆ. ಆಸಕ್ತ ವಿದ್ಯಾರ್ಥಿಗಳನ್ನು ಇಂಟರ್ ವ್ಯೂ ಗೆ ಕಳುಹಿಸಿ ಕೊಡಿ ಎಂದು ಎಸ್‍ಡಿಎಂ ಕಾಲೇಜಿಗೆ ಕರೆಬಂದಿತ್ತು.  ಟಿವಿ9ನ ಇಂಟರ್ ವ್ಯೂಗೆ ನಿಶಾ ಸೇರಿದಂತೆ 15 ಮಂದಿ ಎಸ್‍ಡಿಎಂ ವಿದ್ಯಾರ್ಥಿಗಳು ಹೋದ್ರು. ಆಗಿನ್ನೂ ಅಂತಿಮ ಸೆಮಿಸ್ಟರ್ ಎಕ್ಸಾಮ್ ಆಗಿರ್ಲಿಲ್ಲ.


ಇಲ್ಲಿ ಕೆಲಸ ಸಿಗುತ್ತೆ ಎಂಬ ಆಸೆ ಇಟ್ಕೊಂಡು ನಿಶಾ ಇಂಟರ್ ವ್ಯೂಗೆ ಹೋಗಿದ್ದಲ್ಲ…! ಪ್ರತಿಷ್ಠಿತ ಸಂಸ್ಥೆ ಟಿವಿ9 ಹೇಗಿರುತ್ತೆ, ಅದರ ಕಚೇರಿ ಹೆಂಗಿರುತ್ತೆ ಅಂತ ನೋಡ್ಕೊಂಡು ಬರೋಣ…! ಜೊತೆಗೆ ಇಂಟರ್ ವ್ಯೂ ಬಗ್ಗೆ ಅನುಭವ ಆಗುತ್ತೆ ಎಂದುಕೊಂಡು ಹೋದವರು. ಎಕ್ಸಾಮ್ ಬರೆದ್ರು…! ಸೆಲೆಕ್ಟ್ ಆಗಿಯೇ ಬಿಟ್ಟರು. ಟಿವಿ9ನಲ್ಲಿಯೇ ವೃತ್ತಿ ಜೀವನ ಆರಂಭಿಸ್ತೀನಿ ಅಂತ ಕನಸು ಮನಸ್ಸಲ್ಲೂ ಅಂದುಕೊಂಡಿರದ ನಿಶಾಗೆ ಅದು ಆಶ್ಚರ್ಯದ ಸುದ್ದಿಯಾಗಿತ್ತು.


ಕೊನೆಯ ಸೆಮಿಸ್ಟರ್ ಎಕ್ಸಾಮ್ ಮುಗಿಸಿ 2012 ಜೂನ್ 20ರಂದು ಟಿವಿ9ನಲ್ಲಿ ಕೆಲಸ ಆರಂಭಿಸಿದ್ರು. ಕಾಪಿ ರೈಟರ್ ಆಗಿ, ವಾಯ್ಸ್ ವೋವರ್ ನೀಡುವವರಾಗಿ ಬಳಿಕ ನಿರೂಪಕರಾಗಿದ್ದಾರೆ. ಬೇರೆ ಚಾನಲ್‍ಗಳಿಂದ ಅವಕಾಶಗಳು ಬಂದರೂ ಎಲ್ಲೂ ಹೋಗಲಿಲ್ಲ. ಟಿವಿ9ನಲ್ಲಿ ಕೆಲಸ ಮಾಡೋದು ಹೇಳಿಕೊಳ್ಳಕಾಗದ ಖುಷಿ. ಇಲ್ಲಿ ಇವರಿಗೆ ತೃಪ್ತಿ ಇದೆ.


ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ತುಂಬಾ ಭಯ ಆಗ್ತಿತ್ತು. ಆಗ ಟಿವಿ9ನಲ್ಲಿದ್ದ ರವಿಕುಮಾರ್ ಸರ್ ತುಂಬಾ ಸಪೋರ್ಟ್ ಮಾಡಿದ್ರು. ಸ್ಕ್ರಿಪ್ಟ್ ಬರೆಯೋದು, ವಾಯ್ಸ್ ವೋವರ್ ಕೊಡೋದು, ಕಾಪಿ ಎಡಿಟ್ ಮಾಡೋದು ಎಲ್ಲವನ್ನು ಕಲಿಯಲು ನೆರವಾದ್ರು. ತಪ್ಪುಗಳಾದಾಗ ತಾಳ್ಮೆಯಿಂದ ತಿದ್ದಿ ಹೇಳ್ತಿದ್ರು. ಅವರನ್ನೆಂದೂ ಮರೆಯಲಾರೆ ಅಂತಾರೆ ನಿಶಾ.


ನ್ಯೂಸ್ ರೀಡಿಂಗ್, ಸ್ಪೆಷಲ್ ಪ್ರೋಗ್ರಾಮ್ಸ್, ಚಿಟ್ ಚಾಟ್, ಪ್ರೋಗ್ರಂ ಪ್ರಡ್ಯುಸ್ ಎಲ್ಲವನ್ನೂ ಮಾಡಿರುವ ನಿಶಾ ಅವರಿಗೆ ಸದಾ ಹೊಸತನ್ನು ಕಲಿಯಲು ಬಯಸುತ್ತಾರೆ. ನಾನೇನೂ ಕಲಿತಿಲ್ಲ, ಇನ್ನೂ ಕಲಿಯಲಿಕ್ಕೆ ಬಹಳಷ್ಟು ಇದೆ ಎಂದು ಹೇಳುತ್ತಾರೆ.


ಯಾವುದೇ ಕಾರ್ಯಕ್ರಮವಿರಲಿ ನಮ್ಮದು ಟೀಂ ವರ್ಕ್. ಎಲ್ಲಾ ಪ್ರೋಗ್ರಾಂಗಳನ್ನು ಎಂಜಾಯ್ ಮಾಡಿದ್ದೇನೆ. ಟಿವಿ9ನಲ್ಲಿ ಇಂತಹದ್ದೇ ಕಾರ್ಯಕ್ರಮ ಹೆಚ್ಚು, ಇದು ಕಡಿಮೆ ಅನ್ನೋ ಭಾವನೆ ನನ್ನಲ್ಲಿಲ್ಲ. ಕಾರಣ, ಇಲ್ಲಿ ಚೆನ್ನಾಗಿ ಮೂಡಿಬರದ ಕಾರ್ಯಕ್ರಮಗಳು ಪ್ರಸಾರವೇ ಆಗಲ್ಲ…! ದಿ ಬೆಸ್ಟ್ ಅಂತ ಒಂದು ಪ್ರೋಗ್ರಾಂ ಅನ್ನು ಹೇಳಕ್ಕಾಗಲ್ಲ. ಎಲ್ಲವೂ ಸೂಪರ್. ಅದಕ್ಕಾಗಿಯೇ ಇಂದಿಗೂ ಟಿವಿ9 ನಂಬರ್ 1 ಎನ್ನೋದು ನಿಶಾ ಅವರ ಅಭಿಪ್ರಾಯ.


ಬಾಲ್ಯದ ದಿನಗಳು ಮತ್ತೆಂದೂ ಬರಲ್ಲ. ಆ ಸುಂದರ ಕ್ಷಣಗಳು ನಿಶಾ ಅವರಿಗೆ ಪದೇ ಪದೇ ನೆನಪಾಗ್ತಿರುತ್ತವಂತೆ ಕುಟುಂಬವದರು, ಸಂಬಂಧಿಕರು, ಊರವರು, ಸ್ನೇಹಿತರು ತುಂಬಾ ಪ್ರೀತಿಸ್ತಾರೆ ಇದಕ್ಕಿಂತ ಖುಷಿ ಮತ್ತೊಂದಿಲ್ಲ. ತನ್ನೆಲ್ಲಾ ಕನಸು, ಗುರಿಗೆ ಬೆನ್ನುಲುಬಾಗಿದ್ದ ತಂದೆಯ ಅಗಲುವಿಕೆ ಮಾತ್ರ ಎಂದೂ ಮರೆಯಲಾಗದ ನೋವು ಎನ್ನೋದು ನಿಶಾ ಮನದಾಳದ ಮಾತು.


“ಛಲ ಮತ್ತು ತಾಳ್ಮೆ ಇರಲಿ. ಗುರಿ ತಲುಪಲು ಕಾಯಿರಿ. ಆದ್ರೆ, ತಕ್ಷಣಕ್ಕೆ ಸಾಧ್ಯವಾಗಿಲ್ಲ ಅಂತ ಗುರಿಯನ್ನೇ ಬದಲಾಯಿಸ ಬೇಡಿ’’ ಎನ್ನುವುದು ಹೊಸಬರಿಗೆ ನಿಶಾ ಅವರ ಕಿವಿಮಾತು.

ಐದು ವರ್ಷಗಳ ಜರ್ನಿಯಲ್ಲಿ ವರ್ಷದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರೋ ನಿಶಾ ಅವರು ಆಕಾಶದೆತ್ತರಕ್ಕೆ ಬೆಳೆಯಲಿ. ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಲಿ ಎಂಬ ಶುಭ ಹಾರೈಕೆಯೊಂದಿಗೆ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)11ಡಿಸೆಂಬರ್ 2017 : ನಿಶಾ ಶೆಟ್ಟಿ

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...