ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇಂಟರ್ ವ್ಯೂ ಒಂದು ಸಂಕಷ್ಟ ತಂದಿಟ್ಟಿದೆ…! ಇವರ ಜೊತೆಗೆ ಇವರನ್ನು ಸಂದರ್ಶಿಸಿದ ಸುದ್ದಿವಾಹಿನಿಗೆ ತಲೆನೋವು ಎದುರಾಗಿದೆ…!
ಗುಜರಾತ್ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಗುಜರಾತ್ ಸ್ಥಳಿಯ ಚಾನಲ್ ಒಂದಕ್ಕೆ ಚುನಾವಣಾ ವೇಳೆಯಲ್ಲಿ ಸಂದರ್ಶನ ನೀಡಿದ್ದು ನೀತಿ ಸಂಹಿತೆ ಉಲ್ಲಂಘನೆ ಎಂದು ಕೇಂದ್ರ ಚುನಾವಣ ಆಯೋಗ ಹೇಳಿದೆ. ಡಿಸೆಂಬರ್ 18ರೊಳಗೆ ಸ್ಪಷ್ಟನೆ ನೀಡಿರುವ ಆರೋಗ ನಿಮ್ಮ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ಅಂತ ಪ್ರಶ್ನಿಸಿದೆ. ಜೊತೆಗೆ ಸಂದರ್ಶನ ನಡೆಸಿದ ಚಾನಲ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಚುನಾವಣಾಧಿಕಾರಿಗೆ ಆದೇಶಿಸಿದೆ.