ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗಡಿನಾಡು ಮಂಜೇಶ್ವರದಲ್ಲಿ ನಡೆದಿದೆ.
ಮಂಜೇಶ್ವರದ ಉಪ್ಪಳಜೋಡುಕಲ್ ಕಯ್ಯಾರದ ನಾರಾಯಣ ಎಂಬುಬವವರ ಮಗ ಪದ್ಮನಾಭ್ (29) ಮೃತ ದುರ್ದೈವಿ. ಮಂಜೇಶ್ವರದಲ್ಲಿ ಇಂದು ಮಿಯಪದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನಡೆಯುವಾಗ ಜೋಡುಕಲ್ ತಂಡದ ಪರ ಬೌಲಿಂಗ್ ಮಾಡುತ್ತಿದ್ದ ಪದ್ಮನಾಭ್ ಕೊನೆ ಎಸೆತ ಎಸೆಯುವ ಮುನ್ನ ಕುಸಿದು ಬಿದ್ದಿದ್ದಾನೆ. ಕೂಡಲೇ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಉರಿಬಿಸಿಲಿತ್ತು, ಹೃದಯಘಾತದಿಂದ ಪದ್ಮನಾಭ್ ಸಾವು ಸಂಭವಿಸಿದೆ. ಇದರ ವೀಡಿಯೋ ಇಲ್ಲಿದೆ. ಇಂಥಾ ಸಾವು ಯಾರಿಗೂ ಬರದಿರಲಿ.