ಸಂಪ್ರದಾಯವನ್ನು ಮೀರಿ ಬೆಳೆಯುವುದು, ಅಲಿಖಿತ ಚೌಕಟ್ಟಿನಾಚೆ ತಮ್ಮನ್ನು ತಾವು ಗುರುತಿಸಿಕೊಳ್ಳೋದು ತುಂಬಾ ಕಷ್ಟ. ಬದುಕು ತನ್ನದು, ತನ್ನಿಷ್ಟದ ಬದುಕನ್ನು ಬದುಕುತ್ತೀನಿ ಎಂದು ಸಂಪ್ರದಾಯದ ಹೆಸರಲ್ಲಿ ಹಾಕಿರೋ ಬೇಲಿಯನ್ನು ದಾಟಿದ್ರೆ ಮುಗಿದೇ ಹೋಯ್ತು…! ಧರ್ಮ, ಜಾತಿ, ಸಂಪ್ರದಾಯದ ಉಲ್ಲಂಘನೆಯ ಅಪರಾಧಿ ಪಟ್ಟ…! ಧರ್ಮ, ಜಾತಿಯಿಂದಾಚೆಗಿನ ಜೀವನ ಕಟ್ಟಿಕೊಳ್ಳುವವರನ್ನು ಮನುಕುಲ ಆದರ್ಶವಾಗಿಟ್ಟುಕೊಳ್ಳಬೇಕು.
ಇಂಥಾ ಆದರ್ಶ ವ್ಯಕ್ತಿಗಳಲ್ಲಿ ನಾಝಿಯಾ ಕೌಸರ್ ಒಬ್ಬರಾಗ್ತಾರೆ. ಕನ್ನಡ ಮಾಧ್ಯಮ ಲೋಕದಲ್ಲಿ ತನ್ನದೇಯಾದ ಹೆಸರು ಸಂಪಾದಿಸಿರೋ ಇವರು ಜೀವನದುದ್ದಕ್ಕು ಕಲ್ಲು-ಮುಳ್ಳಿನ ಹಾದೀಲಿ ನಡೆದು ಬಂದವರು. ತಂದೆ-ತಾಯಿ ಇವರಿಷ್ಟದಂತೆ ಸುಂದರ ಬದುಕುಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತರೂ ಸಮಾಜದ ಕೆಟ್ಟ ಮನಸ್ಥಿತಿಗಳು ಬಿಡಬೇಕಲ್ಲ…?
ಬುರುಕ ಹಾಕಿಕೊಳ್ಳಲ್ಲ, ಮೀಡಿಯಾದಲ್ಲಿ ಕೆಲಸ ಮಾಡ್ತಿದ್ದೀಯ ಎಂದು ಕೆಲವರು ಇವರನ್ನು ವಿರೋಧಿಸುತ್ತಲೂ ಇದ್ದಾರೆ. ಈ-ಮೇಲ್, ಪತ್ರಗಳ ಮೂಲಕ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ರೀತಿ ಮಾನಸಿಕ ಕಿರುಕುಳ ಕೊಡ್ತ ಇರೋರು ಯಾರು ಅಂತ ಗೊತ್ತಿಲ್ಲ. ಯಾವ ಕೋಮಿನವರೂ ಅಂತನೂ ತಿಳಿದಿಲ್ಲ. ಇತ್ತೀಚೆಗೆ ಇಂತಹದ್ದೊಂದು ಪತ್ರಬಂದಿತ್ತು. ಆಗ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ವಿಚಾರಣೆಯಿಂದ ಎಂ.ಜಿ ರಸ್ತೆಯ ಪೋಸ್ಟ್ ಬಾಕ್ಸ್‍ನಲ್ಲಿ ಯಾರೋ ಆ ಪತ್ರವನ್ನು ಹಾಕಿದ್ದರೆಂದಷ್ಟೇ ತಿಳಿದುಬಂದಿತ್ತು.. ನಾಝಿಯಾ ಮಾತ್ರವಲ್ಲ ಇಂತಹ ಅನೇಕರು ಇಂತಹ ಬೆದರಿಕೆ, ಕಿರುಕುಳ ಎದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.
ದಾವಣಗೆರೆ ಜಿಲ್ಲೆಯ ಹರಿಹರದವರಾದ ನಾಝಿಯಾ ಕೌಸರ್ ಅವರ ತಂದೆ ನಿವೃತ್ತ ಶಿಕ್ಷಕ, ಕವಿ ಕಲೀಂ ಬಾಷ. ತಾಯಿ ಶಾಹಿನ್ ಕೌಸರ್, ವೃತ್ತಿಯಲ್ಲಿ ಶಿಕ್ಷಕಿ. ಆಸೀಫ್ ಬಾಷ, ಆರೀಫ್ ಬಾಷ ಅಣ್ಣಂದಿರು. ಒಬ್ಬರು ಡಾಕ್ಟರ್, ಇನ್ನೊಬ್ಬರು ಇಂಜಿನಿಯರ್.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ (ಬಿಎ)ವರೆಗೂ ಹುಟ್ಟೂರು ಹರಿಹರದಲ್ಲಿ, ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜೊತೆಗೆ ಬೆಂಗಳೂರು ವಿವಿಯಲ್ಲಿ ಪಿಎಚ್‍ಡಿಯನ್ನು ಸಹ ಮಾಡ್ತಿದ್ದಾರೆ.
ನಾಝಿಯಾ ಅವರ ಇಬ್ಬರು ಅಣ್ಣಂದಿರು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದು. ಆದ್ರೆ, ನಾಝಿಯಾ ಮಾತ್ರ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದರು. ಅಣ್ಣಂದಿರನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಸಿ ತನ್ನನ್ನು ಕನ್ನಡ ಮೀಡಿಯಂಗೆ ಹಾಕಿದ್ದಕ್ಕೆ ಅಪ್ಪನ ಜೊತೆ ಅದೆಷ್ಟೋ ಬಾರಿ ಜಗಳ ನಾಝಿಯಾ ಜಗಳ ಮಾಡಿದ್ದರು.
ನಾಝಿಯಾ ಅವರಿಗೆ ಬಾಲ್ಯದಿಂದಲೂ ಬರೆಯುವ ಆಸಕ್ತಿ. ಕಥೆ, ಕವನ, ಲೇಖನಗಳನ್ನು ಗೀಚುತ್ತಿದ್ದರು. ಇದನ್ನು ಗಮನಿಸಿದ ತಂದೆ ಈಕೆ ಒಳ್ಳೆಯ ಲೇಖಕಿ, ಪತ್ರಕರ್ತೆ ಆಗ್ತಾಳೆ ಅನ್ನೋದನ್ನು ಅಂದೇ ಮನಗಂಡಿದ್ದರೇನೋ…? ಪಿಯುಸಿ ಮುಗಿಯುತ್ತಿದ್ದಂತೆ ‘ನೋಡು ನಾಝಿಯ ಡಾಕ್ಟರ್, ಇಂಜಿನಿಯರ್ ಆಗೋರು ಸಾಕಷ್ಟು ಮಂದಿ ಇದ್ದಾರೆ. ನೀನು ಪತ್ರಕರ್ತೆಯಾಗು ಅಂತ ಜರ್ನಲಿಸಂಗೆ ಸೇರಿಸಿದ್ರು.
ಪದವಿಯ ಜೊತೆ ಜೊತೆಗೆ ಕೆಎಸ್‍ಒಯುನಿಂದ ಜರ್ನಲಿಸಂ ಡಿಪ್ಲೋಮ ಪದವಿಯನ್ನು ಪಡೆದ್ರು. ಬಳಿಕ ಬೆಂಗಳೂರು ಯೂನಿವರ್ಸಿಟಿಗೆ ಸ್ನಾತಕೋತ್ತರ ಪದವಿಗೆ ಜಾಯಿನ್ ಆಗಲು ಬಂದ ನಾಝಿಯಾ ಅವರಿಗೆ ಆರಂಭದಲ್ಲಿ ಕಂಡಾಪಟ್ಟೆ ಟೆಕ್ಷನ್ ಆಗಿತ್ತು…! ಬೇರೆ ವಿವಿಯ ಕೇವಲ ಒಬ್ಬ ವಿದ್ಯಾರ್ಥಿಗೆ ಮಾತ್ರ ಅಲ್ಲಿ ಸೀಟ್ ಮೀಸಲು ಇತ್ತು…! ನಾಝಿಯಾ ಏನ್ ಆಗುತ್ತೋ ಆಗಲಿ ಅಂತ ಡಿಸೈಡ್ ಮಾಡಿ ಎಂಟ್ರೆನ್ಸ್ ಎಕ್ಸಾಮ್ ಬರೆದ್ರು…! ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ಪಡೆದು ಪಿಜಿಗೆ ಸೇರಿದ್ರು.
ಡಿಗ್ರಿ ಮುಗಿದಾಗಲೇ ಒಂದಿಷ್ಟು ಆಫರ್ ಗಳು ಬಂದಿದ್ವು. ಆದ್ರೆ, ಎಜುಕೇಶನ್ ಕಂಪ್ಲೀಟ್ ಮಾಡ್ದೇ ಕೆಲಸಕ್ಕೆ ಹೋಗ್ಬೇಡ ಅಂತ ತಂದೆಯವರು ಮಾಸ್ಟರ್ ಡಿಗ್ರಿಗೆ ಕಳುಹಿಸಿಕೊಟ್ಟಿದ್ರು. ಸ್ನಾತಕೋತ್ತರ ಪದವಿಯ ನಾಲ್ಕನೇ ಸೆಮಿಸ್ಟರ್ ಬಾಕಿ ಇರುವಾಗಲೇ ಟಿವಿ9ನಲ್ಲಿ ಅವಕಾಶ ಸಿಕ್ಕಿತ್ತು. ಅಲ್ಲಿ ಎಕ್ಸಾಮ್ ಮುಗಿಸಿ ಬನ್ನಿ ಅಂತ ಹೇಳಿದ್ರು ನಾಝಿಯಾ ಕೌಸಿರ್ ಕೆಲಸ ಮಾಡೋ ಆಸಕ್ತಿಯಿಂದ ಟಿವಿ9ಗೆ ಜಾಯಿನ್ ಆಗಿ, ಆ ಬಳಿಕ 4ನೇ ಸೆಮ್ ಎಕ್ಸಾನ್ ಕಟ್ಟಿದ್ರು. ಟಿವಿ9ನಿಂದ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದು 2010ರಲ್ಲಿ.
ಟ್ರೈನಿಯಾಗಿ ಸೇರಿದ ನಾಝಿಯಾ ಕೌಸರ್ ಆರಂಭದಲ್ಲೇ ಒಳ್ಳೊಳ್ಳೆಯ ಸುದ್ದಿಗಳನ್ನು ನೀಡಿದ್ದರು. ಒಮ್ಮೆ ಶೂಟಿಂಗ್ ಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ರಸ್ತೆ ಮಧ್ಯೆದಲ್ಲೇ ಕುಡಿದು ಬಿದ್ದು, ಬಾಯಿಗೆ ಬಂದಹಾಗೆ ಮಾತಾಡ್ತಿದ್ದ…! ಇದನ್ನು ಗಮಸಿದ ನಾಝಿಯಾ ಕೂಡಲೇ ತಮ್ಮ ಗಾಡಿಯನ್ನು ನಿಲ್ಲಿಸಿ ಆ ಮದ್ಯಪ್ರಿಯ ಪೊಲೀಸ್ ಮುಂದೆಯೇ ಪಿಟುಸಿ ಕೊಟ್ಟಿದ್ರು…! ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದು ಟಿವಿ9ನಲ್ಲಿ ಇವರು ಕೊಟ್ಟ ಮೊದಲ ಪಿಟುಸಿ ಆಗಿತ್ತು.
ಅಷ್ಟೇಅಲ್ಲದೆ ಪೊಲೀಸರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿರೋ ಬಗ್ಗೆ ವರದಿ ಮಾಡಿದ್ರು. ಶಾಲೆ-ಆಸ್ಪತ್ರೆ ಪಕ್ಕದಲ್ಲೇ ಇದ್ದ ಬಾರೊಂದರಲ್ಲಿ ಎಲ್ಲ ವ್ಯವಹಾರವೂ ನಡೀತ ಇತ್ತು…! ಈ ಬಗ್ಗೆ ವಿಸ್ತೃತ ವರದಿಯನ್ನು ಮಾಡಿದ್ರು. ಕೆಲವೇ ತಿಂಗಳಲ್ಲಿ ಆ ಬಾರಿನ ಪರವಾನಿಗೆ ರದ್ದಾಗಿತ್ತು.
ಟಿವಿ9ನಲ್ಲಿ ರಿಪೋರ್ಟರ್ ಆಗಿ, ಕಾಪಿ ಎಡಿಟರ್ ಆಗಿ, ಕಮರ್ಷಿಯಲ್ ಪ್ರೋಗ್ರಾಂ ಆ್ಯಂಕರ್ ಆಗಿಯೂ ಕೆಲಸ ಮಾಡಿದ್ದ ಇವರು ಸುಮಾರು 2.5 ವರ್ಷಗಳ ಕಾಲ ಟಿವಿ9ನಲ್ಲಿ ಕೆಲಸ ಮಾಡಿ, ಆ ಬಳಿಕ ಸಮಯ ಚಾನಲ್ ಸೇರಿದ್ರು. ಇಲ್ಲಿ ಪ್ರಧಾನ ಸಂಪಾದಕ ಮಂಜುನಾಥ್ ಅವರು ತುಂಬಾ ಪ್ರೋತ್ಸಾಹ ನೀಡಿದರಂತೆ. ಇದನ್ನು ಸ್ವತಃ ನಾಝಿಯಾ ಅವರೇ ಹೇಳಿಕೊಂಡಿದ್ದಾರೆ.
2016ರಲ್ಲಿ ಪಿಎಚ್‍ಡಿ ಮಾಡಲು ಮುಂದಾದ್ರು. 1ಈಯರ್ ಕೋರ್ಸ್ ವರ್ಕ್‍ಗಾಗಿ ಪ್ರತಿದಿನ ಯೂನಿವರ್ಸಿಟಿಗೆ ಹೋಗ್ಬೇಕಾಗಿದ್ದರಿಂದ 2016ರಲ್ಲಿ ಸಮಯ ಸುದ್ದಿವಾಹಿನಿಗೆ ರಾಜೀನಾಮೆ ನೀಡಿದ್ರು. ಈಗ ಕೋರ್ಸ್ ವರ್ಕ್ ಮುಗಿದಿದ್ದು, ಮಾಧ್ಯಮಕ್ಕೆ ವಾಪಸ್ಸಾಗಿದ್ದಾರೆ. ಶೀಘ್ರದಲ್ಲೇ ನಿಮ್ಮನ್ನು ತಲುಪಲಿರೋ `ಫೋಕಸ್’ ಟಿವಿಯಲ್ಲಿ ಸೀನಿಯರ್ ಆ್ಯಂಕರ್ ಆಗಿದ್ದಾರೆ.
2014ರಲ್ಲಿ ಕನ್ನಡ ಸೇನೆಯಿಂದ ರಾಜ್ಯೋತ್ಸವ ಸಂದರ್ಭದಲ್ಲಿ ‘ಬೆಸ್ಟ್ ನ್ಯೂಸ್ ಆ್ಯಂಕರ್’ ಅವಾರ್ಡ್, 2015ರಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬೆಸ್ಟ್ ಆ್ಯಂಕರ್’ ಪ್ರಶಸ್ತಿ, 2016ರಲ್ಲಿ ಮುದ್ದೆಬಿಹಾಳದ ಕರ್ನಾಟಕ ಪತ್ರಕರ್ತರ ಒಕ್ಕೂಟದಿಂದ ‘ಮಾಧ್ಯಮ ರತ್ನ’ ಪುರಸ್ಕಾರ, 2017ರಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ‘ಮಹಿಳಾ ಸಾಧಕಿ’ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಷ್ಟೇ ಅಲ್ಲದೆ ಇವರು ಕವಿ ಕೂಡ ಹೌದು. ಪ್ರೌಢಶಾಲಾ ದಿನಗಳಲ್ಲಿಯೇ ಇವರ ಹತ್ತಾರು ಲೇಖನಗಳು ಪ್ರಜಾವಾಣಿ, ಕನ್ನಡಪ್ರಭ ಮೊದಲಾದ ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಟಿಪ್ಪು ಸುಲ್ತಾನ್ ಕುರಿತು ಸಂಶೋಧನಾ ಕೃತಿಯನ್ನು ಬರೆದಿದ್ದಾರೆ. ಇದು ಸದ್ಯದಲ್ಲೇ ಪ್ರಕಟವಾಗಲಿದೆ. ಜೊತೆಗೆ ಭಾರತೀಯ ವಿದ್ಯಾಭವನ, ಬೆಂಗಳೂರು ಯೂನಿವರ್ಸಿಟಿಯಲ್ಲಿ ಜರ್ನಲಿಸಂ ವಿದ್ಯಾರ್ಥಿಗಳಿಗೆ ಮಾಧ್ಯಮ ಪಾಠ ಮಾಡುತ್ತಿದ್ದಾರೆ. ಇವರ ಅನೇಕ ವಿದ್ಯಾರ್ಥಿಗಳು ಇಂದು ಮಾಧ್ಯಮಕ್ಷೇತ್ರದಲ್ಲಿ ಬದುಕುಕಟ್ಟಿಕೊಂಡಿದ್ದಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್