ಭರವಸೆಯ ಬೆಳಕಿನಲ್ಲಿ ಕಾವ್ಯೋದಯ…!

Date:

ವಿದ್ಯಾರ್ಥಿ ಜೀವನದಲ್ಲಿ ಎದುರಾದ ದುಡಿಮೆಯ ಅನಿವಾರ್ಯತೆ ಇವರನ್ನು ಮಾಧ್ಯಮ ಕ್ಷೇತ್ರಕ್ಕೆ ಕರೆತಂದಿತು. ಅಕಸ್ಮಾತ್ ಆ ಕಷ್ಟದ ದಿನಗಳು ಇವರ ಬದುಕಿನಲ್ಲಿ ಬರದೇ ಇದ್ದಿದ್ದರೆ ಇವತ್ತಿವರು ಮಾಧ್ಯಮ ರಂಗದಲ್ಲಿ ಇರುತ್ತಿರಲಿಲ್ಲ. ಇವರ ಸುಂದರ ಬದುಕು ಈ ಕ್ಷೇತ್ರದಲ್ಲಿಯೇ ಎನ್ನುವುದು ಪೂರ್ವ ನಿಶ್ಚಿಯವಾಗಿತ್ತೇನೋ…? ಕಷ್ಟದಲ್ಲಿ ಕೈ ಹಿಡಿದ ಕ್ಷೇತ್ರದಲ್ಲಿಂದು ಭರವಸೆ ಮೂಡಿಸಿದ್ದಾರೆ, ಕನ್ನಡಿಗರ ಮನಗೆದ್ದಿದ್ದಾರೆ.


ಭರವಸೆಯ ಬೆಳಕಿನಲ್ಲೀಗ ಕಾವ್ಯೋದಯ…! ಹೌದು, ಇವರು ಬಿ.ಟಿವಿಯ ನಿರೂಪಕಿ ಕಾವ್ಯ. ಮಧ್ಯಮ ವರ್ಗದ ಕುಟುಂಬದಲ್ಲಿ ಕಷ್ಟದ ದಿನಗಳಲ್ಲಿ ಅರಳಿದ ಪ್ರತಿಭೆ. ಬಾಲ್ಯದಲ್ಲಿ ಮಾತ್ರವಲ್ಲ, ವೃತ್ತಿ ಜೀವನಕ್ಕೆ ಕಾಲಿಟ್ಟಮೇಲೂ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ…! ಆದರೆ, ಅವಮಾನಿಸಿದವರೇ ನಾಚುವಂತೆ ಗೆದ್ದಿದ್ದಾರೆ…ಸಾಧಿಸಿದ್ದಾರೆ. ಇವರ ಸಾಧನೆಯೇ ಅಂದು ಅವಮಾನಿಸಿದ ಮಹಾನುಭಾವರಿಗೆ ಸಿಕ್ಕಿರೋ ಬಹುಮಾನ…!


ಕಾವ್ಯ ಹಾಸನದವರು. ಇವರ ತಂದೆ ಗೋಪಿ,ವೃತ್ತಿಯಲ್ಲಿ ದರ್ಜಿ (ಟೈಲರ್). ತಾಯಿ ಯಶೋಧ, ತಮ್ಮ ಕಾರ್ತಿಕ್. ಹಾಸನದ ಸೆಂಟ್ ಫಿನೋಮಿನಾದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು, ಎವಿಕೆ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದಾರೆ.


ತಮ್ಮ ಕಷ್ಟವನ್ನು ಮಕ್ಕಳಿಗೆ ತೋರಿಸದೇ, ಯಾವುದಕ್ಕೂ ಇಲ್ಲ ಎನ್ನದೆ ಬೆಳೆಸಿದ್ರು. ಆದ್ರೆ, ಶಾಲಾ ದಿನಗಳಲ್ಲಿ ಒಂದೊಂದು ಸಲ ಶುಲ್ಕ ಪಾವತಿಸಲು ತಡವಾಗಿದ್ದೂ ಉಂಟು. ಆಗ ಫೀಸ್ ಕಟ್ಟಿಲ್ಲ ಅಂತ ಶಾಲೆಯಿಂದ ಕಾವ್ಯ ಅವರನ್ನು ಸಾಕಷ್ಟು ಬಾರಿ ಮನೆಗೆ ಕಳುಹಿಸಿದ್ದರು. ಅಷ್ಟೇ ಅಲ್ಲದೆ ಮನೆಯಿಂದ ಶಾಲೆಗೆ ಸುಮಾರು 5 ಕಿ.ಮೀ ದೂರ. ಆದ್ದರಿಂದ ಆ ಭಾಗದ ಮಕ್ಕಳೆಲ್ಲಾ ಒಟ್ಟಾಗಿ ಆಟೋದಲ್ಲಿ ಹೋಗ್ತಿದ್ರು. ತಂದೆ ಕಾವ್ಯ ಅವರನ್ನೂ ಕೂಡ ಅದೇ ಆಟೋದಲ್ಲಿ ಕಳುಹಿಸುತ್ತಿದ್ದರು. ಒಂದು ತಿಂಗಳ ಬಾಡಿಗೆ ತಡವಾಗಿದ್ದಕ್ಕೆ ಆಟೋದವ ನಡುರಸ್ತೆಯಲ್ಲಿ ಬಾಲಕಿ ಕಾವ್ಯರನ್ನು ಇಳಿಸಿ ಹೋಗಿದ್ದ…! ಶಾಲೆಗೆ ಹೋಗುವ ದಾರಿ ಕೂಡ ಈಕೆಗೆ ಗೊತ್ತಿರ್ಲಿಲ್ಲ…! ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬ ಪುಣ್ಯಾತ್ಮರು ಶಾಲೆಗೆ ಬಿಟ್ಟಿದ್ದರು…!


ಪಿಯುಸಿಗೆ ಹೋಗುವಾಗ ಏನಾದ್ರು ಪಾರ್ಟ್ ಟೈಮ್ ಕೆಲಸ ಮಾಡಿ ತಕ್ಕಮಟ್ಟಿಗಾದ್ರು ತಂದೆಯ ಭಾರ ಕಡಿಮೆ ಮಾಡೋಣ ಅಂತ ಯೋಚಿಸಿದ್ರು. ಪಿಯುಸಿ ಮುಗಿಸಿ ಡಿಗ್ರಿಗೆ ಜಾಯಿನ್ ಆಗುವ ವೇಳೆಯಲ್ಲಿ ಮನೆಯಲ್ಲಿ ಟೀವಿ ನೋಡ್ತಿರುವಾಗ ‘ಅಮೋಘ’ ಚಾನಲ್ ನಲ್ಲಿ ನಿರೂಪಕರು ಬೇಕಿದ್ದಾರೆ ಎಂಬ ಜಾಹಿರಾತನ್ನು ಗಮನಿಸಿದ್ರು. ಪಾರ್ಟ್ ಟೈಮ್ ಕೆಲಸದ ಬಗ್ಗೆ ಯೋಚಿಸುತ್ತಿದ್ದ ಇವರು ಇಂಟರ್ ವ್ಯೂ ಫೇಸ್ ಮಾಡಿದ್ರು. ಸ್ಕ್ರೀನ್ ಟೆಸ್ಟ್ ನಲ್ಲೂ ಪಾಸ್ ಆದ್ರು.


2008 ರಿಂದ 2009ರವರೆಗೆ ಒಂದು ವರ್ಷಗಳ ಕಾಲ ಮನರಂಜನಾ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ಕಾವ್ಯ, 2009ರಿಂದ 2011ರವರೆಗೆ ಎರಡು ವರ್ಷ ನ್ಯೂಸ್ ರೀಡರ್ ಆಗಿ ಕೆಲಸ ಮಾಡಿದ್ರು. ಅವರೇ ಹೇಳುವಂತೆ ಇಲ್ಲಿ ಪತ್ರಕರ್ತ ಮದನ್ ಗೌಡ ಅವರು ಪ್ರೋತ್ಸಾಹ ನೀಡಿ ಬೆಳೆಸಿದ್ರು.


ಮುಂದೆ ಪದವಿ ವ್ಯಾಸಂಗ ಮುಗಿಯುತ್ತಿದ್ದಂತೆ ಮದನ್ ಗೌಡ ಅವರೇ ಕಸ್ತೂರಿ ಹೋಗಿ ಸ್ಕ್ರೀನ್ ಟೆಸ್ಟ್ ಕೊಡು ಅಂತ ಹೇಳಿದ್ರು. ಅವರ ಮಾತಿನಂತೆ ಕಸ್ತೂರಿ ಚಾನಲ್ ಗೆ ಹೋಗಿ ಸ್ಕ್ರೀನ್ ಟೆಸ್ಟ್ ಕೊಟ್ಟ ಕಾವ್ಯ ಸೆಲೆಕ್ಟ್ ಆಗಿಯೇ ಬಿಟ್ರು…! 2011ರಲ್ಲಿ ಕಸ್ತೂರಿ ವಾಹಿನಿ ಮುಖೇನ ವೃತ್ತಿ ಬದುಕು ಆರಂಭಿಸಿದ್ರು.


ಸ್ಥಳಿಯ ಚಾನಲ್ ನಿಂದ ಸ್ಯಾಟಲೈಟ್ ಚಾನಲ್ ಗೆ ಹೋದ ಕಾವ್ಯಗೆ ಆರಂಭದಲ್ಲಿ ತುಂಬಾ ಭಯ ಇತ್ತು. ಏನಾಗುತ್ತೋ? ಹೆಂಗೋ ಅಂತ ಯೋಚಿಸ್ತಿದ್ರು. ಹಿರಿಯರಾದ ಗಜಾನನ ಹೆಗ್ಡೆ, ಚೇತನ ಹರೀಶ್, ಸ್ವಪ್ನ, ಆನಂದ್, ಮನೋಜ್ , ಶಿಲ್ಪ ಕಿರಣ್, ಚನ್ನಕೇಶವ್ ಪ್ರೋತ್ಸಾಹ, ಸಲಹೆ, ಸೂಚನೆಗಳನ್ನು ನೀಡಿದ್ರು. ಇಂದು ನ್ಯೂಸ್ 18ನಲ್ಲಿರೋ ನಿರೂಪಕಿ ಸೌಮ್ಯ ಮಳಲಿ ಅವರು ಕಾವ್ಯ ಅವರಲ್ಲಿದ್ದ ಭಯವನ್ನು ದೂರ ಮಾಡಿದ್ರು.


ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ತೀರಿಕೊಂಡಾಗ ಕಾವ್ಯ ನೈಟ್ ಶಿಫ್ಟ್ ನಲ್ಲಿದ್ರು. ಬೆಳಗ್ಗೆ ಫಸ್ಟ್ ಬುಲೆಟಿನ್ ಇವರೇ ನಡೆಸಿಕೊಡಬೇಕಿತ್ತು…! ಉದಯ, ಸುವರ್ಣ, ಟಿವಿ9ನಲ್ಲಿ ಸೀನಿಯರ್ ಗಳು ಇರ್ತಾರೆ…! ನನ್ನಿಂದ ಇಲ್ಲಿ ಈ ಬುಲೆಟಿನ್ ನಡೆಸಿಕೊಡೋಕೆ ಆಗುತ್ತಾ..? ಅಂತ ತಲೆಮೇಲೆ ಕೈ ಹೊತ್ತು ಕುಳಿತ್ರು…! ಬೇರೆ ಯಾವ ನಿರೂಪಕರೂ ಇರಲಿಲ್ಲ. ಅಪ್ಪನಿಗೆ ಫೋನ್ ಮಾಡಿ, ‘ಅಪ್ಪಾ ಹೀಗಾಗಿದೆ…! ಏನ್ ಮಾಡ್ಲಿ ಗೊತ್ತಾಗ್ತಿಲ್ಲ…! ಭಯ ಆಗ್ತಿದೆ’ ಎಂದ್ರು. ‘ನಿನ್ನಿಂದ ಆಗುತ್ತೆ…ಏನೂ ಆಗಲ್ಲ ಮಾಡು ಅಂತ ಅಪ್ಪ ಧೈರ್ಯ ತುಂಬಿದ್ರು.


ಸತತ 5 ಗಂಟೆಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟ ಕಾವ್ಯ ಮುಖ್ಯಸ್ಥರ ಮೆಚ್ಚುಗೆಗೆ ಪಾತ್ರರಾದ್ರು…! 2012ರ ಡಿಸೆಂಬರ್ ನಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯ ಸಮಸ್ಯೆ ಎದುರಾಯ್ತು. ಕೆಲಸ ಬಿಟ್ಟು ಊರಿಗೆ ಮರಳಬೇಕಾಯಿತು. ಹಾಸನದಲ್ಲಿ ಚಿಕಿತ್ಸೆ ಪಡೆದರು. ಬಳಿಕ ಎಂಬಿಎ ಮಾಡಿದ್ರು. ಮತ್ತೆ ಅಮೋಘ್ ಚಾನಲ್ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಕೆಲಸ.


ನಾಲ್ಕು ವರ್ಷದ ಬಳಿಕ ಪುನಃ ಮೀಡಿಯಾ ಸೆಳೆಯಿತು. ಅಂದು ಕಸ್ತೂರಿಯಲ್ಲಿದ್ದ ಆನಂದ್, ಮನೋಜ್, ಗಜಾನನ ಹೆಗ್ಡೆ ಅವರನ್ನೊಳಗೊಂಡ ತಂಡವೇ ಪ್ರಜಾದಲ್ಲಿತ್ತು. ಪ್ರಜಾ ಟಿವಿ ಸೇರಿ ಮಾಧ್ಯಮ ರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ರು. ಹೆಚ್ಚು ಕಡಿಮೆ ಅಲ್ಲಿ 1 ವರ್ಷ ಕೆಲಸ ಮಾಡಿ, 2017ರ ಜೂನ್ ನಲ್ಲಿ ಬಿಟಿವಿಗೆ ಸೇರಿದ್ದಾರೆ. ಅಂದು ಇಲ್ಲಿದ್ದ ಚಂದನ್ ಶರ್ಮಾ ತುಂಬಾ ಪ್ರೋತ್ಸಾಹ ನೀಡಿದ್ರು. ಅವರಿಂದ ಸಾಕಷ್ಟು ಕಲಿತೆ. ಜೊತೆಗೆ ಬಿಟಿವಿ ಕುಟುಂಬ ಚೆನ್ನಾಗಿದೆ. ಇಲ್ಲಿ ಕೆಲಸ ಮಾಡ್ತಿರೋದಕ್ಕೆ ಖುಷಿ ಇದೆ ಎಂದು ಹೇಳುತ್ತಾರೆ ಕಾವ್ಯ.


ಕಸ್ತೂರಿಯಲ್ಲಿ ಇವರು ನಡೆಸಿಕೊಡ್ತಿದ್ದ ಪ್ರಮುಖ ಕಾರ್ಯಕ್ರಮ ‘ಬೆಂಗಳೂರು ಸೆಂಟ್ರಲ್’. ಪ್ರಜಾದಲ್ಲಿ ‘ಪ್ರಜಾನಾಡು’. ಈಗ ಬಿಟಿವಿಯಲ್ಲಿ ‘ಮಾರ್ನಿಂಗ್ ಶೋ’ ನಡೆಸಿಕೊಡ್ತಿದ್ದಾರೆ. ಇವುಗಳನ್ನು ಹೊರತು ಪಡಿಸಿ ಮಾಮೂಲಿ ನ್ಯೂಸ್ ರೀಡಿಂಗ್, ಅದು-ಇದು ಡಿಸ್ಕಷನ್ಸ್ ಎಲ್ಲಾ ಇದ್ದಿದ್ದೇ.


ಪದವಿ ವ್ಯಾಸಂಗದ ಸಂದರ್ಭದಲ್ಲಿ ಅಮೋಘ ಚಾನಲ್ ನಲ್ಲಿ ಕೆಲಸ ಮಾಡುತ್ತಿರುವಾಗ, 2009ರ ಹೊಸವರ್ಷದ ದಿನ ಮೊದಲ ಶೋ ಅನ್ನು ಇವರೇ ನಡೆಸಿಕೊಡಬೇಕಿತ್ತು…! ಕಾವ್ಯ ಅದನ್ನು ಮರೆತಿದ್ರು. ಬೆಳಗ್ಗೆ ಆಫೀಸಿಂದ ಫೋನ್ ಬಂದ್ಮೇಲೆ ಅದು ನೆನಪಾಗಿದ್ದು…! ಕೂಡಲೇ ಎದ್ದು, ಕೈಗೆ ಸಿಕ್ಕ ಬಟ್ಟೆ ಹಾಕ್ಕೊಂಡು ಬ್ರೆಶ್ ಕೂಡ ಮಾಡದೇ ಗಡಿಬಿಡಿ ಇಂದ ಆಫೀಸಿಗೆ ಹೋಗಿ ಕೂಡಲೇ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟಿದ್ದರಂತೆ…! ಇದನ್ನು ನೆನದು ಯಾವಾಗಲೂ ತನ್ನಷ್ಟಕ್ಕೆ ತಾನೇ ನಗ್ತಿರ್ತೀನಿ ಅಂತಾರೆ ಕಾವ್ಯ.


ಕಾವ್ಯ ಅವರಿಗೆ ಚಿಕ್ಕಂದಿನಿಂದಲೂ ನ್ಯೂಸ್ ಅಂದ್ರೆ ಇಷ್ಟ…! ಉದಯ ವಾರ್ತೆಗಳನ್ನು ತಪ್ಪದೇ ನೋಡ್ತಿದ್ರಂತೆ. ಆದರೆ, ಮೀಡಿಯಾದಲ್ಲಿ ಕೆಲಸ ಮಾಡ್ತೀನಿ ಅಂತ ಅಂದುಕೊಂಡಿರ್ಲಿಲ್ಲ. ತಂದೆಗೆ ಇವರನ್ನು ಸರ್ಕಾರಿ ಉದ್ಯೋಗಿ ಮಾಡ್ಬೇಕು ಎಂಬ ಆಸೆ. ಸಧ್ಯ ಮೀಡಿಯಾದಲ್ಲಿ ಬ್ಯುಸಿ ಆಗಿರೋ ಕಾವ್ಯ ಖಂಡಿತಾ ಅಪ್ಪನ ಆಸೆಯನ್ನು ಈಡೇರಿಸಿಯೇ ಈಡೇರಿಸ್ತೀನಿ. ಸರ್ಕಾರಿ ಉದ್ಯೋಗಿ ಆಗ್ತೀನಿ ಎನ್ನುತ್ತಿದ್ದಾರೆ.


ಕಾವ್ಯ ಸಂಗೀತ ಕಲಿತಿದ್ದಾರೆ, ಡ್ಯಾನ್ಸ್ ಕೂಡ ಮಾಡ್ತಾರೆ. ಟ್ರಾವೆಲಿಂಗ್ ಅಂದ್ರೆ ತುಂಬಾ ಇಷ್ಟ. ತುಂಬಾ ಪಾಸಿಟೀವ್. ಎಲ್ಲವನ್ನೂ ಕೂಲ್ ಆಗಿ ತಗೊಳ್ತಾರೆ. ವೃತ್ತಿಜೀವನಕ್ಕೆ ಕಾಲಿಟ್ಟ ಪ್ರಾರಂಭದಲ್ಲಿ ಸೀನಿಯರ್ ಒಬ್ಬರು ‘ಯಾಕಾಗಿ ಬರ್ತೀರಾ ಸುಮ್ನೆ..? ನಿಮ್ಮಿಂದ ಆಗಲ್ಲ’ ಅಂತ ಅವಮಾನ ಮಾಡಿದ್ರು…! ಅದನ್ನು ಸಹಿಸಿಕೊಂಡು ಅವರೆದುರೇ ತಾನು ಏನೆಂದು ತೋರಿಸಿದ್ರು, ತನ್ನ ಸಾಮರ್ಥ್ಯದಿಂದಲೇ ಬೆಳೆಯುತ್ತಿದ್ದಾರೆ. ಇನ್ನೂ ದೊಡ್ಡ ಯಶಸ್ಸು ಹಾಸನದ ಈ ಬೆಡಗಿಗೆ ಸಿಗಲಿ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...