ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗಿಂದು ನಾಯಕನಾಗಿ ಕೊನೆಯ ಪಂದ್ಯ…!?
ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ಮತ್ತು ಟಿ20 ಪಂದ್ಯಕ್ಕೆ ವಿರಾಟ್ ಅಲಭ್ಯರಾಗಿದ್ದ ಕಾರಣ ತಂಡದ ಚುಕ್ಕಾಣಿಯನ್ನು ರೋಹಿತ್ ಹಿಡಿದಿದ್ದರು. ಏಕದಿನ ಸರಣಿಯನ್ನು ಗೆದ್ದಿರೋ ರೋಹಿತ್ ಪಡೆ ಈಗಾಗಲೇ 3 ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಇಂದು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರೋ ಟಿ20 ಪಂದ್ಯ ನಾಯಕನಾಗಿ ರೋಹಿತ್ ಗೆ ಕೊನೆಯ ಪಂದ್ಯ ಎನ್ನಬಹುದು.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ವಿರಾಟ್ ವಾಪಸ್ಸಾಗುತ್ತಿದ್ದಾರೆ. ಮುಂದಿನ ಸರಣಿಗಳಲ್ಲಿ ವಿರಾಟ್ ಲಭ್ಯರಿರುತ್ತಾರೆ. ಇದೇ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ ರೋಹಿತ್ ‘ನಾನು ಮತ್ತೆ ಯಾವಾಗ ನಾಯಕನಾಗುತ್ತೇನೋ ಗೊತ್ತಿಲ್ಲ. ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯ ಕೊನೆಯ ನಾಯಕತ್ವದ ಪಂದ್ಯವಾಗಿದ್ದು, ಮೈದಾನದಲ್ಲಿ ಕಳೆಯುವ ಪ್ರತಿಕ್ಷಣವೂ ನನಗೆ ಮಹತ್ವದ್ದು ಎಂದು ರೋಹಿತ್ ಹೇಳಿದ್ದಾರೆ.
ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಶ್ರೀಲಂಕಾದ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯ.