ಈಗೀಗ ಒಬ್ಬರ ಸಹಾಯಕ್ಕೆ ಇನ್ನೊಬ್ಬರು ಹೋಗೋದು ತೀರ ವಿರಳ…! ನಮಗ್ಯಾಕೆ ಅಂತ ಸುಮ್ಮನಾಗೋರೆ ಹೆಚ್ಚು. ಹೀಗಿರುವಾಗ ಕೆಲವರು ಮಾದರಿ ಎನಿಸುತ್ತಾರೆ. ಅಂತಹ ಆದರ್ಶ ವ್ಯಕ್ತಿಗಳಲ್ಲಿ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಕೂಡ ಒಬ್ಬರು…!
ಕೆಲವು ಅಧಿಕಾರಿಗಳು ತುಂಬಾ ದುರಂಹಕಾರಿಗಳಾಗಿರ್ತಾರೆ. ತಾವು ಮಾಡ್ಬೇಕಾದ ಕೆಲಸವನ್ನೂ ಮಾಡುವುದಿಲ್ಲ. ಇಂತಹ ಅಧಿಕಾರಿಗಳ ನಡುವೆ ಎಸ್‍ಪಿ ಅಣ್ಣಾ ಮಲೈ ತುಂಬಾ ಗ್ರೇಟ್ ಅನಿಸ್ತಾರೆ.
ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಹೊರಟಿದ್ದ ಪ್ರವಾಸಿಗರ ಕಾರೊಂದು ಭಾನುವಾರ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಮತ್ತಾವರ ಎಂಬಲ್ಲಿ ಪಂಚರ್ ಆಗಿ ನಿಂತಿತ್ತು. ಪ್ರವಾಸಿಗರು ಏನ್ ಮಾಡೋದಪ್ಪ ಅಂತ ಭಯಭೀತರಾಗಿ ನಿಂತಿದ್ರು. ಅಷ್ಟೊತ್ತಿಗೆ ಕೊಪ್ಪದಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಎಸ್‍ಪಿ ಅಣ್ಣಾಮಲೈ ಬಂದ್ರು. ವಿಚಾರಿಸಿದ್ರು, ತಾವೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟಯರ್ ಬಿಚ್ಚಲು ಪ್ರಯತ್ನಿಸಿದ್ರು. ಆಗದೇ ಇದ್ದಾಗ ಮೆಕಾನಿಕ್ ಗೆ ಫೋನ್ ಮಾಡಿ ಬರಹೇಳಿದ್ದಾರೆ. ಬಳಿಕ ತಮ್ಮ ಕಾರಲ್ಲಿಯೇ ಪ್ರವಾಸಿಗರನ್ನು ಕೂರಿಸಿಕೊಂಡು ನಗರಕ್ಕೆ ಬಿಟ್ಟಿದ್ದಾರೆ.