ಬಾಲಕಿಯೊಬ್ಬಳು ಪುರುಷನ ವೇಷಧರಿಸಿ 3 ಹುಡುಗಿಯರನ್ನು ಮದುವೆಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ…!
ಕಾಶಿನಾಯನ ಮಂಡಲ್ ನ ಇಟಿಕಲಪಾಡು ಗ್ರಾಮದ ಬಿ. ರಮಾದೇವಿ ‘ಹುಡುಗಾ’ಟ ಆಡಿದ ಅಪ್ರಾಪ್ತೆ…! ಹುಡುಗನಂತೆ ವೇಷಧರಿಸಿ ರಮಾದೇವಿ ಪುಲಿವೆಂದುಲಾದ ಮಿಲ್ ಒಂದರಲ್ಲಿ ಕೆಲಸ ಮಾಡ್ತಿದ್ದ 17 ವರ್ಷದ ಹುಡುಗಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದಾಳೆ…! ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆ ಆಗಿದ್ದಾರೆ…! ರಮಾದೇವಿಯ ಈ ಹೆಂಡ್ತಿಗೆ 2 ತಿಂಗಳ ಬಳಿಕ ತಾನು ಮದ್ವೆ ಆಗಿರೋದು ಹುಡುಗಿಯನ್ನೇ ಅಂತ ಗೊತ್ತಾಗಿದೆ! ಈ ವಿಷಯವನ್ನು ಪೋಷಕರಿಗೆ ತಿಳಿಸಿ ಅವರ ಮೂಲಕ ಪೊಲೀಸ್ ಠಾಣೆ ಮೆಟ್ಟಿಲೇರಿ ರಮಾದೇವಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರಮಾದೇವಿ ಹೀಗೆ ಹುಡುಗನ ವೇಷಧರಿಸಿ ಕಡಪಾ ಜಿಲ್ಲೆಯ ಪ್ರೋದತ್ತೂರಿನ 16 ವರ್ಷದ ಹುಡುಗಿಯನ್ನು ಹಾಗೂ ಅನಂತಪುರ ಜಿಲ್ಲೆಯ ಮುದಿಗುಬ್ಬಾದ ಕತ್ತೆಚೆರುವು ಗ್ರಾಮದ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದಳು ಎಂಬ ಸತ್ಯವನ್ನು ಬಯಲಿಗೆಳೆದಿದ್ದಾರೆ…!