ಕನ್ನಡ ಪ್ರೇಮಿ ಯುವ ಐಟಿ ಇಂಜಿನಿಯರ್ಸ್‍ಗಳ ಗುಂಪು ‘ಪ್ರಣತಿ’ ಕನ್ನಡ ಭಾಷೆಗಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಮ್ಯಾರಥಾನ್ ನಡೆಸಲು ಮುಂದಾಗಿದೆ.
ಕನ್ನಡ ಪರ ಈ ವಿನೂತನ ಕಾರ್ಯಕ್ರಮಕ್ಕೆ ನಿಮ್ಮ ‘ ದಿ ನ್ಯೂ ಇಂಡಿಯನ್ ಟೈಮ್ಸ್’ ಕೂಡ ಕೈ ಜೋಡಿಸುತ್ತಿದೆ.
ನಮ್ಮ ಹೆಮ್ಮೆಯ ಕನ್ನಡ ಭಾಷೆಯು ಅಭಿಜಾತ ಭಾಷೆ ಎಂದು ಕೇಂದ್ರ ಸರ್ಕಾರದಿಂದಲೇ ಕರೆಯಲ್ಪಟ್ಟಿದೆ. ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಶಕ್ತಿ, ಕನ್ನಡಕ್ಕಾಗಿ ನಾವೆಲ್ಲಾ ಒಂದಾಗಲೇ ಬೇಕು… ಒಂದಾಗೋಣವನ್ನಿ.
2018ರ ಜನವರಿ 7ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ‘ಕನ್ನಡಕ್ಕಾಗಿ ಓಟ…’ ಮ್ಯಾರಥಾನ್ ನಡೆಯಲಿದೆ. ನೀವು ತಪ್ಪದೇ ಬನ್ನಿ. ಇದು ಕನ್ನಡ ಜಾಗೃತಿ ಕಾರ್ಯಕ್ರಮವಾಗಿದ್ದು, ಪರಭಾಷಿಕರು ಸಹ ಪಾಲ್ಗೊಳ್ಳುವರು. ಅವರಿಗೆ ಕನ್ನಡ ಮತ್ತು ಕನ್ನಡ ಕಲಿಕೆ ಬಗ್ಗೆ ಅರಿವು ಮೂಡಿಸಲಾಗುವುದು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ದೇಶದೊಳ್ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮವಿದು. ಕನ್ನಡ ದೇಶದೊಳ್ ತಂಡವು ಜಾಗೃತಿ ಅಭಿಯಾನ ನಡೆಸುತ್ತಾ ಬಂದಿದ್ದು ಮುಂದಿನ ಹಂತವಾಗಿ ಅಭಿಯಾನವನ್ನು ಸಿನಿಮಾ ಮಾಡಲಿದೆ.
ಕನ್ನಡಕ್ಕಾಗಿ ಓಟದಲ್ಲಿ ಯಲಹಂಕದ ‘ಬೆಳಕು’ ವಿಕಲಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಕೂಡ ಪಾಲ್ಗೊಳ್ಳುತ್ತಾರೆ. ಆನ್ ಲೈನ್ ನ್ಯೂಸ್ ಪಾರ್ಟನರ್ ಆಗಿ ದಿ ನ್ಯೂ ಇಂಡಿಯನ್ ಟೈಮ್ಸ್ ಸಾಥ್ ನೀಡಿದೆ. ಮೀಡಿಯಾ ಪಾರ್ಟನರ್ ಆಗಿ ಟಿವಿ5 ಕನ್ನಡ, ರೇಡಿಯೋ ಪಾರ್ಟನರ್ ಆಗಿ ರೇಡಿಯೋ ಸಿಟಿ ಜೊತೆಗಿರುತ್ತವೆ.
ಟ್ರೋಲ್ ಹೈದ, ಕಂಕಣ, ಕನ್ನಡ ಗೊತ್ತಿಲ್ಲ, ದಿ ಗ್ರೀನ್ ಪಾತ್, ಕನ್ನಡ ಮನಸುಗಳು ಕನ್ನಡಕ್ಕಾಗಿ ಒಂದಾದವರು, ನಮ್ಮ ಕರ್ನಾಟಕ ಮೇಮ್ಸ್, ನಮ್ದು ಕನ್ನಡ, ಗಾಂಚಲಿ ಬಿಡಿ ಕನ್ನಡ ಮಾತಾಡಿ, ಪಿನಾಟ, ಗ್ಲಿನಾಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್, ಮತ್ತಿತರರು ಪ್ರಣತಿ ಜೊತೆ ಕನ್ನಡಕ್ಕಾಗಿ ಓಡಲು ತಯಾರಿದ್ದಾರೆ….ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ. ಸಮಯ ಬೆಳಗ್ಗೆ 5.45…