ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಮೌಂಟ್ ಎವರೆಸ್ಟ್ ಸುತ್ತಿ ಬಂದಿದ್ದಾರೆ.
ಸುದೀಪ್ ಸಿನಿಮಾ, ಕ್ರಿಕೆಟ್, ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಪತ್ನಿ ಮನೆಯ ಜವಬ್ದಾರಿಯನ್ನು ಹೊತ್ತಿದ್ದಾರೆ. ಜೊತೆಗೆ ಇವೆಂಟ್ ಕಂಪನಿ ಮತ್ತು ನಿರ್ಮಾಣ ಸಂಸ್ಥೆಯನ್ನು ಸಹ ನೋಡಿ ಕೊಳ್ತಿದ್ದಾರೆ.
ಬಿಡುವು ಮಾಡಿಕೊಂಡು ಮಗಳ ಜೊತೆ ಒಂದು ಟ್ರಿಪ್ ಹೋಗಿ ಬಂದಿದ್ದಾರೆ ಪ್ರಿಯಾ. ಇವರು ಇತ್ತೀಚೆಗೆ ಮಗಳೊಡನೆ ವಿಮಾನದಲ್ಲಿ ಮೌಂಟ್ ಎವರೆಸ್ಟ್ ಪವರ್ತ ಸುತ್ತಿ ಬಂದಿದ್ದು, ಸಂತಸದ ಕ್ಷಣವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.