ಸುದ್ದಿಮನೆಯ ಕಿರಿಕ್ ಹುಡುಗಿ…ಹಾಗಂತ ಸುಮ್ ಸುಮ್ನೆ ಬೇರೆಯವರನ್ನು ಹರ್ಟ್ ಮಾಡೋ ಕಿರಿಕ್ ಇವರದ್ದಲ್ಲ…! ತಮಾಷೆಯ ಕಿರಿಕ್… ಮನಸ್ಸಿಗೆ ಕಚಗುಳಿ ಕೊಡೋ ಕಿರಿಕ್…! ಈಗ ಸುದ್ದಿಮನೆ ಪ್ರವೇಶಿಸಿದ್ದರಿಂದ ಸ್ವಲ್ಪ ತರ್ಲೆ ಕಡಿಮೆ ಮಾಡಿದ್ದಾರೆ…! ಕಾಲೇಜು ದಿನಗಳಲ್ಲಿ ಫ್ರೆಂಡ್ಸ್ ಅನ್ನು ಸಿಕ್ಕಾಪಟ್ಟೆ ಗೋಳ್ ಹೊಯ್ದುಕೊಳ್ತಿದ್ದ ಹುಡುಗಿ ಇವರು.
ಶ್ರುತಿ ಕಿತ್ತೂರು, ದಿಗ್ವಿಜಯ ಸುದ್ದಿವಾಹಿನಿಯ ನಿರೂಪಕಿ. ಯಾವಾಗಲೂ ಖುಷಿ ಖುಷಿಯಿಂದ ಇರೋಕೆ ಇಷ್ಟಪಡೋ ಹುಡುಗಿ. ತಮಾಷೆ ಮಾಡ್ತಾ ಫ್ರೆಂಡ್ಸ್ ಜೊತೆ ಕಾಲ ಕಳೀತಾರೆ. ಸೀರಿಯಸ್ ಆಗಿ ಆಕಾಶ ಕಳಚಿ ತಲೆ ಮೇಲೆ ಬಿದ್ದವರಂತೆ ಇರೋ ಜಾಯಮಾನ ಇವರದ್ದಲ್ಲ. ಮೊದಲಿಂದಲೂ ಅಷ್ಟೇ…!
ಇವರು ಸಾಮಾನ್ಯವಾಗಿ ಯಾರಿಗೂ ಹರ್ಟ್ ಮಾಡಲ್ಲ, ತನಗೂ ಬೇರೆಯವರು ನೋಯಿಸ ಬಾರದು ಅಂತ ಬಯಸ್ತಾರೆ. ಸ್ವಲ್ಪವೇ ಸ್ವಲ್ಪ ಮನಸ್ಸಿಗೆ ನೋವಾದ್ರು ತಡೆದುಕೊಳ್ಳೋ ಶಕ್ತಿ ಇವರಿಗಿಲ್ಲ. ತುಂಬಾ ಮುಗ್ದೆ, ಹಾಗಂತ ಸಿಟ್ಟು ಬರಲ್ಲ , ತಿರುಗಿಸಿ ಮಾತಾಡಲ್ಲ ಅಂತ ಮಾತ್ರ ಅನ್ಕೊಳ್ಳಕ್ಕೇ ಹೋಗಲೇ ಬೇಡಿ.
ಸರಿ, ಶ್ರುತಿ ಕಿತ್ತೂರು ಅವರ ಲೈಫ್ ಜರ್ನಿ ಹೇಗಿದೆ ಅಂತ ಹೇಳ್ತೀನಿ, ಕೇಳಿ…! ಕ್ಷಮಿಸಿ, ಬರೀತಿನಿ ಓದ್ಕೊಂಡು ಹೋಗಿ. ಶ್ರುತಿ ಅವರ ಹೆಸರಿನ ಮುಂದೆ ಕಿತ್ತೂರು ಸೇರಿದೆ ಅಂತ ಅವ್ರು ಕಿತ್ತೂರಿನವರೆಂದು ಅನ್ಕೊಳ್ಬೇಡಿ. ಅದು ಅವರ ಸರ್ ನೇಮ್.
ಶ್ರುತಿ ಅವರೂರು ಬಾಗಲಕೋಟೆ. ಹುಟ್ಟಿದ್ದು ಬೆಳೆದಿದ್ದೆಲ್ಲಾ ಅಲ್ಲೇ. ತಂದೆ ಕೃಷ್ಣ, ತಾಯಿ ನೀಲಾ, ಅಣ್ಣ ಸುನೀಲ್. ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಡಿಪ್ಲೋಮ ಕೋರ್ಸ್‍ವರೆಗೂ ಓದಿದ್ದು ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲೇ.
ಇವರಿಗೆ ಚಿಕ್ಕಂದಿನಿಂದಲೂ ನಿರೂಪಕಿ ಆಗೋ ಕನಸು. ಮನೆಯಲ್ಲಿ ಟಿವಿ ನೋಡುವಾಗ ತಾನು ನಿರೂಪಕಿ ಆಗ್ಬೇಕು ಅಂತ ಅಪ್ಪ-ಅಮ್ಮನ ಹತ್ತಿರ ಹೇಳಿಕೊಳ್ತಿದ್ರು. ಹಳ್ಳಿಯವರು ನಿರೂಪಕಿ ಆಗೋದು ಕಷ್ಟ, ಕನ್ನಡ ಉಚ್ಛರಣೆ ಸ್ಪಷ್ಟವಾಗಿರ್ಬೇಕು ಎಂಬ ಮಾತುಗಳು ಕೇಳಿಬಂದಿದ್ವು. ಆದ್ರೆ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋ ಹುಡ್ಗಿ ಶ್ರುತಿ ಅಲ್ವಲ್ಲ…!?
ನಾನು ನಿರೂಪಕಿ ಆಗೇ ಆಗ್ತೀನಿ ಅಂತ ಹಠ ಹಿಡಿದ್ರು. ನ್ಯೂಸ್ ಪೇಪರ್ ಇಟ್ಕೊಂಡು ಡೈಲಿ ನ್ಯೂಸ್ ಆ್ಯಂಕರಿಂಗ್ ತಯಾರಿ ನಡೆಸಿದ್ರು. ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡ್ತಿದ್ರು…! ನಿದ್ರೆಗಣ್ಣಲ್ಲೂ ಒಂದಿಷ್ಟು ಸುದ್ದಿಗಳನ್ನು ಗೊಣಗುಟ್ಟಿದ್ದೂ ಇದೆ…!
ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಜನಶ್ರೀಯಲ್ಲಿ ನೇಮಕಾತಿ ನಡೀತಾ ಇದೆ ಅಂತ ಗೊತ್ತಾಗಿ, ಸರಿ ಒಂದ್ ಪ್ರಯತ್ನ ಪಡುವ ಅಂತ ಯೋಚಿಸಿದ್ರು. ಎಂದೂ ಮನೆಬಿಟ್ಟು ಇರದ ಮುದ್ದಿನ ಮಗಳು ಶ್ರುತಿಯನ್ನು ಬೆಂಗಳೂರಿಗೆ ಕಳಿಸೋಕೆ ಅಪ್ಪ, ಅಮ್ಮ, ಅಣ್ಣ ಮೂವರಿಗೂ ಇಷ್ಟವಿರ್ಲಿಲ್ಲ. ಆದ್ರೆ, ಈಕೆಯ ಕನಸಿಗೆ ತಣ್ಣೀರೆರಚಲು ಅವರ ಮನಸ್ಸು ಒಪ್ಪಲಿಲ್ಲ…!
ಸರಿ, ಇದೊಂದ್ಸಲ ಪ್ರಯತ್ನ ಮಾಡೆಂದು ಹೇಳಿ ಹಣಕೊಟ್ಟು ಬೆಂಗಳೂರಿಗೆ ಕಳುಹಿಸಿಕೊಟ್ರು. ಮೊದಲ ಪ್ರಯತ್ನದಲ್ಲೇ ಶ್ರುತಿ ಪಾಸ್ ಆದ್ರು. 2015ರಲ್ಲಿ ಜನಶ್ರೀ ಚಾನಲ್ ಮೂಲಕ ಮಾಧ್ಯಮ ರಂಗ ಪ್ರವೇಶಿಸಿಯೇ ಬಿಟ್ಟರು.
ಕೆಲಸ ಏನೋ ಸಿಗ್ತು, ಆದ್ರೆ ಇಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋದು ಅಷ್ಟು ಸುಲಭದ ಮಾತಾಗಿರ್ಲಿಲ್ಲ. ಕೆಲಸಕ್ಕೆ ಸೇರಿದ್ಮೇಲೆ ಎದುರಾಗಿದ್ದು ನಿಜವಾದ ಚಾಲೆಂಜ್. ಆರಂಭದಲ್ಲಿ ನಾಲ್ಕೈದು ತಿಂಗಳು, ಸ್ಕ್ರಿಪ್ಟ್ ಬರೆಯೋದು, ಸೆಗ್ಮೆಂಟ್, ಪ್ಯಾಕೇಜ್ ರೆಡಿ ಮಾಡೋದು, ವಾಯ್ಸ್ ವೋವರ್ ಕೊಡೋದೆ ಆಗೋಯ್ತು.
ನಿರೂಪಣೆ ಪ್ರಾಕ್ಟಿಸ್ ಮಾಡ್ತಿದ್ರೆ , ಕೆಲವು ಹಿರಿತಲೆ ನಿರೂಪಕರೆನಿಸಿಕೊಂಡವರು ಅರ್ಥಾತ್ ಸೀನಿಯರ್ಸ್ ನಿಂಗೆ ಸರಿಯಾಗಿ ಓದೋಕೆ ಬರಲ್ಲ, ಏನಿಲ್ಲ, ಅದು-ಇದು, ಹಂಗೆ-ಹಿಂಗೆ ಅಂತ ಅರಚಾಡಿ ಮನಸ್ಸಿಗೆ ಗಾಯಗೊಳಿಸೋ ಕೆಲಸ ಮಾಡಿದ್ರು.
ಆ ಒಂದ್ ಕ್ಷಣ ನನ್ನಿಂದ ಇದು ಆಗಲ್ಲ ಅಂತ ಶ್ರುತಿ ನೆಗಿಟೀವ್ ಥಿಂಕ್ ಮಾಡಿದ್ದು ಸಹಜ. ಅಕಸ್ಮಾತ್ ನಾನು ವಾಪಸ್ಸು ಹೋದ್ರೆ, ಇನ್ನೂ ಅವಮಾನ ಆಗುತ್ತೆ. ಆಗಲ್ಲ ಅಂತ ಮಂದಿ ನಗಾಡ್ತಾರೆ ಎಂದು ಅರಿತು ಅವಮಾನಗಳನ್ನು ಸವಾಲುಗಳೆಂದು ಪ್ರೀತಿಯಿಂದ ಸ್ವೀಕರಿಸಿದ್ರು.
ಮತ್ತೆ ಮನೆಯಲ್ಲಿ ನಿರೂಪಣೆ ಅಭ್ಯಾಸ ಶುರುವಾಯ್ತು. ಫ್ಯಾಮಿಲಿಯಲ್ಲಿ ಎಲ್ರಿಗೂ ತಲೆಬಿಸಿ, ಎಲ್ಲಿ ಹುಚ್ಚಿ ಆಗ್ತೋಳೋ ಎಂಬ ಭಯ…! ಯಾರ್ ಏನ್ ಹೇಳಿದ್ರೂ ಶ್ರುತಿಗೆ ನಾನ್ ಆ್ಯಂಕರ್ ಆಗೇ ಆಗ್ತೀನಿ ಅನ್ನೋ ಛಲ… ಆತ್ಮವಿಶ್ವಾಸ.
ಇಷ್ಟಲ್ಲಾ ಹಠ ಇದ್ರೆ ಗೆಲುವು ಹೇಗ್ ತಾನೆ ಬರಲ್ಲ ಅನ್ನುತ್ತೆ…! ಕೊನೆಗೂ ನಿರೂಪಕಿ ಆಗಿಯೇ ಬಿಟ್ರು. ಅಂದು ಜನಶ್ರೀಯ ಮುಖ್ಯಸ್ಥರಾಗಿದ್ದ ಅನಂತ ಚಿನಿವಾರ ಅವರು ಶ್ರುತಿಗೆ ಸಪೋರ್ಟ್ ಮಾಡಿದ್ರು.
ಸಿನಿಮಾ ಕಾರ್ಯಕ್ರಮಗಳು, ಇಂಟರ್ ವ್ಯೂ ಗಳನ್ನು ಮಾಡ್ತಿದ್ದ ಶ್ರುತಿ ಅವರಿಗೆಂದೇ ‘ಸೀರಿಯಲ್ ಸ್ಟಾರ್’ ಎಂಬ ಕಾರ್ಯಕ್ರಮವನ್ನು ಜನಶ್ರಿಯಲ್ಲಿ ಪರಿಚಯಿಸಿದ್ರು.
2017ರ ಜನವರಿಯಲ್ಲಿ ಶರತ್ ಅವರಿಂದ ದಿಗ್ವಿಜಕ್ಕೆ ಆಫರ್ ಬಂತು. ಹೊಸ ಬದಲಾವಣೆ ಬಯಸಿ ‘ದಿಗ್ವಿಜಯ’ದ ಹಾದಿಯಲಿ ನಡೆದ್ರು. ಇಲ್ಲಿ ‘ಕಾಲೇಜ್ ಕ್ಯಾಂಪಸ್’ ಇವರ ಸಿಗ್ನೇಚರ್ ಪ್ರೋಗ್ರಾಂ.
ಮೊದಲ ಹೇಳಿದಂತೆ ಶ್ರುತಿ ಕಾಲೇಜು ದಿನಗಳಲ್ಲಿ ಕಿರಿಕ್ ಹುಡುಗಿ. ಹುಡುಗರ ಜೊತೆ ಜಗಳ ಮಾಡದೇ ಇರೋ ದಿನಗಳೇ ಇಲ್ಲ ಅನಿಸುತ್ತೆ. ಬೈಕ್ ಟೈಯರ್ ಪಂಚರ್ ಮಾಡೋದು ಇವರಿಗೇನೋ ಒಂಥರಾ ಖುಷಿ ಇತ್ತಂತೆ…!
ತುಂಬಾ ಸಪೋರ್ಟೀವ್ ಆಗಿದ್ದ ಅಜ್ಜಿ ತೀರಿಕೊಂಡಿದ್ದು ಶ್ರುತಿ ಅವರಿಗೆ ಮರೆಯಲಾಗದ ನೋವು.
ಕಥೆ, ಸಂಗೀತ ಇವರಿಗಿಷ್ಟ. ಸುವರ್ಣ ವಾಹಿನಿ ‘ಅಂಬಾರಿ’ ಸೀರಿಯಲ್ ನಲ್ಲಿ ನಟಿಸಿದ್ದರು. ‘ಅಗ್ನಿ ಸಾಕ್ಷಿ’, ‘ಶಾಂತಂ ಪಾಪಂ’ ಮೊದಲಾದ ಧಾರವಾಹಿಗಳಲ್ಲಿ ನಟಿಸಲು ಆಫರ್ ಬಂದಿತ್ತು. ಸಿನಿಮಾ ರಂಗ ಕೂಡ ಕೆ ಬೀಸಿ ಕರೆಯುತ್ತಿದೆ. ಆದ್ರೆ, ಸಧ್ಯ ಸುದ್ದಿ ನಿರೂಪಕಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಮುಂದುವರೆಯಲು ಬಯಸಿದ್ದಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು