ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತೀಯ ಬ್ಯಾಟ್ಸ್‍ಮನ್ ಗಳ ವೈಪಲ್ಯ ಮುಂದುವರೆದಿದೆ. ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದೆಡೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. 85 ರನ್ ಗಳಿಸಿರೋ ಕೊಹ್ಲಿ 3ನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದ್ದಾರೆ. ಅತ್ತ ವಿರಾಟ್ ಶತಕದ ಹೊಸ್ತಿಲ್ಲಿಲ್ಲದ್ದರೆ, ಇತ್ತ ಪತ್ನಿ ಅನುಷ್ಕಾ ಶರ್ಮಾ ಭಾರತಕ್ಕೆ ವಾಪಸ್ಸಾಗಿರುವುದರ ಕೃಪೆ ಇದು ಎಂದು ಕೆಲವರು ಕಾಲೆಳೆಯುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾದ ಹೀನಾಯ ಪ್ರದರ್ಶನ, ಅದರಲ್ಲೂ ಕೊಹ್ಲಿ ವೈಪಲ್ಯಕ್ಕೆ ಅನುಷ್ಕಾಳೇ ಕಾರಣ ಎಂದು ಕೆಲವರು ಟೀಕಿಸಿದ್ದರು. ಜೊತೆಗೆ ಇದು ಟ್ರೋಲ್ ಪೇಜ್ ಗಳಿಗೂ ಆಹಾರವಾಗಿತ್ತು. ಸತಿ-ಪತಿ ವಿರುಷ್ಕಾ ಒಟ್ಟಿಗೆ ಪ್ರವಾಸ ಹೋಗಿದ್ದೇ ಮಹಾ ತಪ್ಪೇನೋ ಎನ್ನುವ ರೀತಿಯಲ್ಲಿ ವಿರಾಟ್ ಸೋಲಿಗೆ ಅನುಷ್ಕಾಳನ್ನು ಗುರಿಯಾಗಿಸಲಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ವಿರುಷ್ಕಾ ಬಗ್ಗೆ ಟೀಕೆಗಳ ಮಹಾಪೂರವೇ ಹರಿದುಬಂದಿತ್ತು, ಇದನ್ನೇ ಪ್ರಮುಖ ಸುದ್ದಿವಾಹಿನಿಗಳು ಎತ್ತಿಕೊಂಡಿದ್ದವು…! ಇದು ಡಿಸ್ಕಷನ್ ನ ಟಾಪಿಕ್ ಕೂಡ ಆಗಿತ್ತು.
ಎರಡನೇ ಪಂದ್ಯಕ್ಕೆ ಮುನ್ನ ಅನುಷ್ಕಾ ತವರಿಗೆ ಮರಳಿದ್ದಾರೆ. ಕಾಕತಾಳಿಯ ಎಂಬಂತೆ ವಿರಾಟ್ ಕೊಹ್ಲಿ 85 ರನ್ ಗಳಿಸಿ ಶತಕಕ್ಕಾಗಿ ಕಾಯುತ್ತಿದ್ದಾರೆ.
ಲಯ ಕಳೆದುಕೊಳ್ಳೋದು, ಲಯಕ್ಕೆ ಮರಳುವುದು ಕ್ರೀಡೆಯಲ್ಲಿ ಸರ್ವೇ ಸಾಮಾನ್ಯ. ಸೋಲು-ಗೆಲುವು ಅವಿಭಾಜ್ಯ. ವಿರಾಟ್ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ, ಈ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರೋದಕ್ಕೆ ಅವರೇ ಕಾರಣ…! ಅನುಷ್ಕಾ ದ.ಆಫ್ರಿಕಾದಲ್ಲಿ ಇದ್ದಿದ್ದರೂ ವಿರಾಟ್ ಇದೇ ಆಟ ಆಡುತ್ತಿದ್ದರು.
ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿರುತ್ತಾಳೆ ಎನ್ನುತ್ತೇವೆ. ಹೀಗಿರುವಾಗ ಅನಗತ್ಯವಾಗಿ ಕಳೆದ ಪಂದ್ಯದಲ್ಲಿ ವಿರಾಟ್ ವೈಪಲ್ಯಕ್ಕೆ ಅನುಷ್ಕಾಳನ್ನು ಗುರಿಯಾಗಿಸಿ ಟೀಕಿಸಿದ್ದು ಸರಿಯಲ್ಲ.
ಇಂದು ವಿರಾಟ್ ಶತಕ ಬಾರಿಸುವುದು ಬಹುತೇಕ ಖಚಿತ. ಹಾಗಂತ ಇದು ಅನುಷ್ಕಾ ಭಾರತಕ್ಕೆ ಮರಳಿದ ಕೃಪೆಯಂತೂ ಅಲ್ಲ…! ವಿರಾಟ್ ಆಟದ ತಾಕತ್ತು.