ಇಷ್ಟದ ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಕನಸು ಗಾಯದ ಸಮಸ್ಯೆಯಿಂದ ಸಾಕಾರಗೊಳ್ಳದೇ ಹೋಯಿತು. ಆ ನೋವು ಇವತ್ತಿಗೂ ಇವರನ್ನು ಕಾಡುತ್ತಿದೆ…ಇದು ನಿರಂತರ ಕಾಡುವ ನೋವು…! ಅನುಭವಿಸಿದವರಿಗೆ ಮಾತ್ರ ಈ ಯಾತನೆ ಗೊತ್ತಾಗೋದು. ಕ್ರೀಡೆ ಕೈ ಹಿಡಿಯಲ್ಲಿಲ್ಲ ಎಂದು ಬದುಕಿನ ಆಟವನ್ನು ಮುಂದುವರೆಸದೇ ಇರಲಾಗುತ್ತದೆಯೇ…? ಅನಿವಾರ್ಯವಾಗಿ ಕ್ರೀಡಾಕ್ಷೇತ್ರಕ್ಕೆ ಗುಡ್ ಬೈ ಹೇಳಿ ಮಾಧ್ಯಮವನ್ನು ಜೀವನದಾಟಕ್ಕೆ ಆಯ್ಕೆಮಾಡಿಕೊಂಡ ಮಲೆನಾಡ ಹೆಣ್ಣಿನ ಕಥೆಯಿದು.
ನಿಮಗೆ ಖಂಡಿತಾ ಇವರ ಪರಿಚಯ ಇದ್ದೇ ಇದೆ. ದಿಗ್ವಿಜಯ ಚಾನಲ್ ನ ವರದಿಗಾರ್ತಿ, ನಿರೂಪಕಿ ಸುಮ ಸಾಲಿಯಾನ್. ಅಪ್ಪಟ ಮಲೆನಾಡಿನ ಪ್ರತಿಭೆ. ವಾಲಿಬಾಲ್ ರಾಷ್ಟ್ರೀಯ ಆಟಗಾರ್ತಿ. 15ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಹೆಮ್ಮೆಯ ಕನ್ನಡತಿ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಿದ್ಧರ ಮಠದ ಲೋಕೇಶ್ ಮತ್ತು ಶಾರದ ದಂಪತಿಯ ಮುದ್ದಿನ ಮಗಳು. ಅಕ್ಕ ಶಾಮಲ, ಅಣ್ಣ ವಸಂತ್, ಪತಿ ಪ್ರಕಾಶ್, ಮಾವ ಮಹಲಿಂಗ ಪೂಜಾರಿ, ಅತ್ತೆ ಗಿರಿಜಾ.
ಸುಮ ಅವರದ್ದು ರೈತ ಕುಟುಂಬದ ಹಿನ್ನೆಲೆ. ಚಿಕ್ಕ ವಯಸ್ಸಿನಿಂದಲೂ ಪಠ್ಯೇತರ ಚಟುವಟಿಗಳಲ್ಲಿ ಆಸಕ್ತಿ. ಅದರಲ್ಲೂ ಆಟ ಎಂದರೆ ಪ್ರಾಣ. ಹುಟ್ಟೂರು ಸಿದ್ಧರಮಠದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಜೊತೆ ಕ್ರೀಡಾ ಶಿಕ್ಷಣವನ್ನೂ ಪಡೆಯುವ ಅವಕಾಶ ಸಿಗುತ್ತೆ. ಸಿದ್ಧರ ಮಠ ಶಾಲೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡಲ್ಲೂ ಇವತ್ತಿಗೂ ನಂಬರ್ 1..!
ಇಲ್ಲಿ ಶಿಕ್ಷಕರಾದ ಹೊನ್ನಪ್ಪ, ರತ್ನಾಕರ್, ಗಿರಿಜಾ ಅವರು ತುಂಬಾ ಸಪೋರ್ಟ್ ಮಾಡಿದ್ರು. ಒಳ್ಳೆಯ ಮಾರ್ಗದರ್ಶನ ನೀಡಿ ಯಶಸ್ಸಿನ ದಾರಿ ತೋರಿಸಿಕೊಟ್ರು.
ನಂತರ ಮೈಸೂರಿನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಡೆದು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಪದವಿ (ಬಿಎ) ಪಡೆದ್ರು.
ವಾಲಿಬಾಲ್ ಪ್ಲೇಯರ್ ಆಗಿದ್ದ ಸುಮ ಅವರಿಗೆ ಡಿಸ್ಟ್ರಿಕ್ಟ್ ಯೂತ್ ಸ್ಪೋಟ್ಸ್ ಸರ್ವಿಸ್ ಗೆ ಆಯ್ಕೆಯಾಗಿ, ಅದಾದ ಬಳಿಕ ಕೇಂದ್ರ ಸರ್ಕಾರದ ಸ್ಪೋರ್ಟ್ಸ್ಅಥಾರಿಟಿ ಆಫ್ ಇಂಡಿಯಾ (ಸಾಯಿ)ಯಲ್ಲಿ ಕಲಿಯುವ ಅವಕಾಶ ಕೂಡ ಲಭಿಸಿತು. ಇಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಆಗಿರೋ ಸೈನಾ ನೆಹ್ವಾಲ್ ಅವರೊಡನೆ ಸಾಯಿಯಲ್ಲಿ ಸುಮಾ ಕೂಡ ಕಲಿತಿದ್ದರು.
ಪಶ್ವಿಮ ಬಂಗಾಳದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ಮೊಟ್ಟದ ಮೊದಲ ಬಾರಿಗೆ ಗೋಲ್ಡ್ ಮೆಡಲ್ ಗೆ ಮುತ್ತಿಕ್ಕಿತ್ತು. ಆತಿಥೇಯ ಪ.ಬಂಗಾಳ ತಂಡವನ್ನು ಅವರ ತವರಲ್ಲಿ ಫೈನಲ್ ಪಂದ್ಯದಲ್ಲಿ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಕರ್ನಾಟಕ ಮಹಿಳೆಯರ ಜೂನಿಯರ್ ತಂಡದಲ್ಲಿ ಸುಮ ಸಹ ಇದ್ದರು.
ಕಿರಿಯರ ತಂಡ ಹಾಗೂ ಹಿರಿಯರ ತಂಡ ಸೇರಿದಂತೆ ಹತ್ತಾರು ಸರಣಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸುಮ ಅವರು ಅನೇಕ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಕೊರಳಿಗಾಕಿಸಿಕೊಂಡಿದ್ದಾರೆ.
ವಾಲಿಬಾಲ್‍ನಲ್ಲಿ ಹಂತ ಹಂತವಾಗಿ ಹೆಸರು, ಕೀರ್ತಿ ಪಡೆಯುತ್ತಾ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿದ್ದ ಸುಮ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಗಾಯದ ಸಮಸ್ಯೆ ಎದುರಾಯಿತು. ಆದ್ದರಿಂದ ಅನಿವಾರ್ಯವಾಗಿ ಊರಿಗೆ ಮರಳಿದರು.
ಮಗಳ ಆಸೆಯಂತೆ ದೂರದೂರಿಗೆ ಕಳುಹಿಸಿ ವಾಲಿಬಾಲ್ ಪಟುವನ್ನಾಗಿ ಮಾಡಿದ್ದ ತಂದೆ-ತಾಯಿಗೆ ಮಗಳಿಂದ ನಿರೀಕ್ಷಿಸಿದ ಸಾಧನೆ ಮಾಡಲಾಗಿಲ್ಲ ಎಂಬ ಕೊರಗು ಇವತ್ತಿಗೂ ಇರಬಹುದು. ಬೇರೆ ಬೇರೆ ಸ್ಟಾರ್ ಆಟಗಾರರನ್ನು ನೋಡಿದಾಗ ಅವರ ‘ಮೌನ’ ಅವರೊಳಗಿನ ನೋವಿನ ಸೂಚಕದಂತಾಗುತ್ತದೆ. ಈ ನೋವು ಸ್ವತಃ ಸುಮ ಅವರಿಗೂ ಕಾಡುತ್ತಿದೆ.
ಗಾಯದ ದೆಸೆಯಿಂದ ತವರಿಗೆ ಮರಳಿದ ಸುಮ ಅವರನ್ನು ತೀರ್ಥಹಳ್ಳಿಯ ಹೊನಸ ಗದ್ದೆಯ ಪ್ರಕಾಶ್ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಯಿತು. ಪ್ರಕಾಶ್ ಅವರು ಅಂದು ಟಿವಿ9ನಲ್ಲಿ ವೀಡಿಯೋ ಎಡಿಟರ್ ಆಗಿದ್ದರು. ಇಂದು ದಿಗ್ವಿಜಯದಲ್ಲಿದ್ದಾರೆ.
ಮದುವೆ ಬಳಿಕ ನೀನು ಏನ್ ಓದುತ್ತಿಯೋ ಓದು. ಎಲ್‍ಎಲ್‍ಬಿ ಮಾಡು ಎಂದು ಪ್ರಕಾಶ್ ಹೇಳಿದ್ರು. ಆದರೆ, ಮಾಧ್ಯಮಕ್ಕೆ ಬರುವ ಆಸೆಯನ್ನು ಸುಮ ವ್ಯಕ್ತಪಡಿಸಿದ್ರು. ಈ ಕ್ಷೇತ್ರದ ಅನುಭವವಿದ್ದ ಪ್ರಕಾಶ್, ನಿನಗೆ ಕಷ್ಟವಾದೀತು, ಬೇರೆ ಏನಾದ್ರು ಪ್ರಯತ್ನ ಮಾಡು ಎಂದು ಸಲಹೆ ನೀಡಿದ್ರು. ಎಷ್ಟು ಹೇಳಿದರೂ ಸುಮ ಹಠ ಬಿಡಲಿಲ್ಲ.
ಅದು 2014ನೇ ಇಸವಿ ಕನ್ನಡ ಸುದ್ದಿವಾಹಿನಿಗಳ ಪ್ರಪಂಚಕ್ಕೆ ‘ಪ್ರಜಾ ಟಿವಿ’ ಹೊಸ ಸೇರ್ಪಡೆಯಾಗುತ್ತಿತ್ತು. ಹೊಸಬರನ್ನು ತಂಡಕ್ಕೆ ಸೇರಿಸಿಕೊಳ್ತಿದ್ದರು. ಸುಮ ಸಹ ಇಂಟರ್ ವ್ಯೂ ಅಟೆಂಡ್ ಮಾಡಿದ್ರು. ದೃಶ್ಯ ಮಾಧ್ಯಮದ ಬಗ್ಗೆ ಎಳ್ಳಷ್ಟೂ ಗೊತ್ತಿರದಿದ್ದರೂ ಸುಮ ಆಯ್ಕೆಯಾದ್ರು.
ಸಹೋದ್ಯೋಗಿಗಳು ಜರ್ನಲಿಸಂ ಡಿಗ್ರಿ, ಮಾಸ್ಟರ್ ಡಿಗ್ರಿಗಳನ್ನು ಮಾಡಿಕೊಂಡು ಬಂದಿದ್ದಾರೆ. ನನಗೆ ಇವರ ನಡುವೆ ಗುರುತಿಸಿಕೊಳ್ಳೋಕೆ ಆಗುತ್ತಾ ಎಂಬ ಅಳುಕು ಸುಮ ಅವರಲ್ಲಿತ್ತು. 2 ತಿಂಗಳು ನೋಡೋಣ, ಆಗಲ್ಲ ಅಂತಾದ್ರೆ ಪತಿ ಹೇಳಿದಂತೆ ಎಲ್‍ಎಲ್‍ಬಿಗೆ ಜಾಯಿನ್ ಆಗೋಣ ಅಂತ ಅನ್ಕೊಂಡ್ರು.
ಹೊಸಬರಿಗೆ ಟ್ರೈನಿಂಗ್ ನೀಡುವಾಗ ಇನ್ನೂ ಡೆಸಿಗ್ನೇಶನ್ ಕೊಟ್ಟಿರ್ಲಿಲ್ಲ. ಆಗ ಎಲ್ಲವನ್ನೂ ಕಲಿಯುವ ಅವಕಾಶ ಸಿಕ್ತು.
ಒಂದು ದಿನ ಎಲ್ಲರೂ ತಮ್ ತಮ್ಮ ಪರಿಚಯ ಮಾಡಿಕೊಳ್ತಿದ್ರು. ಆಗ ಸುಮ ಅವರ ಸರಿದಿ ಬಂದಾಗ, ತಾನು ಕ್ರೀಡಾಕ್ಷೇತ್ರದ ಹಿನ್ನೆಲೆಯಿಂದ ಬಂದಿರೋದನ್ನು ಹೇಳಿಕೊಂಡ್ರು. ಇದರಿಂದಾಗಿ ಕ್ರೀಡಾ ವರದಿಗಾರಿಕೆ ನಿಭಾಯಿಸೋ ಹೊಣೆ ಸುಮ ಅವರದ್ದಾಯ್ತು.
ಕ್ರೀಡಾಪಟುವಾಗಿ ಮುಂದುವರೆಯಲು ಸಾಧ್ಯವಾಗಿಲ್ಲ ಎಂಬ ಕೊರಗಿನಲ್ಲಿದ್ದ ಸುಮರವರಿಗೆ ಕ್ರೀಡಾ ವರದಿಗಾರಿಕೆ ಮಾಡೋದು ಇಷ್ಟವಿರಲಿಲ್ಲ. ಸಾಧಕ ಕ್ರೀಡಾಪಟುಗಳ ಇಂಟರ್ ವ್ಯೂ ಮಾಡುವಾಗ ಹಳೆಯ ನೆನಪುಗಳು ಮರುಕಳುಹಿಸುತ್ತಿದ್ದವು. ಇಂಟರ್ ವ್ಯೂ ಬಳಿಕ ಒಬ್ಬರೇ ಮರೆಯಲ್ಲಿ ಅತ್ತಿದ್ದೂ ಉಂಟು.
ಮೇರಿ ಕೋಮ್ ಸೇರಿದಂತೆ ಅನೇಕ ಮಂದಿ ಕ್ರೀಡಾ ಸಾಧಕರ ಸಂದರ್ಶನವನ್ನು ಸುಮ ಮಾಡಿದ್ದಾರೆ.
ಪ್ರಜಾದಲ್ಲಿ ಆನಂದ್, ಸುರೇಶ್, ಮನೋಜ್, ದಿವಕಾರ್ ಅವರ ಪ್ರೋತ್ಸಾಹ ಮಾರ್ಗದರ್ಶನದಿಂದ ಸಾಕಷ್ಟು ಕಲಿಯಲು ಸಾಧ್ಯವಾಯ್ತು. ಸುಮ ಅವರ ತಪ್ಪುಗಳನ್ನು ತಿದ್ದಿದ್ರು. ದಾಮೋದರ್ ದೊಂಡೋಲೆ ಅವರು ಕ್ರೀಡಾ ಸ್ಕ್ರಿಪ್ಟ್ ಬರೆಯೋದನ್ನು ಕಲಿಸಿಕೊಟ್ಟರು.
ಪ್ರಜಾದಲ್ಲಿ ವರದಿಗಾರಿಕೆ ಜೊತೆ ಕ್ರೀಡಾ ಕಾರ್ಯಕ್ರಮಗಳ ನಿರೂಪಣೆ ಮಾಡಿ ನಿರೂಪಕಿಯಾಗಿಯೂ ಸೈ ಎನಿಸಿಕೊಂಡ ಸುಮ, 2.5 ವರ್ಷದ ಬಳಿಕ 2016ರಲ್ಲಿ ಸುಮ ಅವರು ದಿಗ್ವಿಜಯ ಚಾನಲ್ ಗೆ ಸೇರಿದ್ದಾರೆ.
ಇಲ್ಲಿ ವರದಿಗಾರರಾಗಿ ನಿರೂಪಕಿಯಾಗಿಯೂ ಸೇವೆಯಲ್ಲಿ ಮುಂದುವರೆದಿದ್ದಾರೆ. ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಸ್ಪೋರ್ಟ್ಸ್ ಗೆ ಸಂಬಂಧಿಸಿದ ಡಿಸ್ಕಷನ್ ಹಾಗೂ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಿಕೊಡ್ತಾರೆ. ದಿಗ್ವಿಜಯದ ಅಂದಿನ ಮುಖ್ಯಸ್ಥರಾಗಿದ್ದ ಶರತ್ ನೀಡಿದ ಪ್ರೋತ್ಸಾಹ ಹಾಗೂ ಇಂದಿನ ಮುಖ್ಯಸ್ಥರಾಗಿರೋ ಚೇತನ್ ಅವರು ನೀಡುವ ಪ್ರೋತ್ಸಾಹವನ್ನು ಸುಮ ಸ್ಮರಿಸಿಕೊಳ್ಳುತ್ತಾರೆ.
ಜೊತೆಗೆ ಪ್ರೊಡಕ್ಷನ್ ವಿಭಾಗದ ಪರಶುರಾಮ್, ರುದ್ರೇಶ್ ಹಾಗೂ ಅಂದು ಪ್ರಜಾದಲ್ಲಿ ಮಾರ್ಗದರ್ಶನ ನೀಡಿ, ಇಂದು ದಿಗ್ವಿಜಯದಲ್ಲೂ ಮಾರ್ಗದರ್ಶನ ನೀಡುತ್ತಿರೋ ದಾಮೋದರ್ ದೊಂಡೋಲೆ ಅವರನ್ನು ಸಹ ನೆನೆಯುತ್ತಾರೆ.
ಕಷ್ಟದಲ್ಲೂ ಓದಿಸಿ, ಬೆಳೆಸಿದ ಅಪ್ಪ-ಅಮ್ಮ, ತಾಯಿಯ ಪ್ರೀತಿಯನ್ನೇ ನೀಡುವ ಅಕ್ಕ, ಪತಿ, ಅತ್ತೆ-ಮಾವ ಎಲ್ಲರ ಪ್ರೋತ್ಸಾಹಕ್ಕೆ ತಾನು ಚಿರ ಋಣಿ ಎನ್ನುತ್ತಾರೆ.
ನಾನಿನ್ನೂ ಏನೂ ಸಾಧಿಸಿಲ್ಲ… ಏನಾದರು ಸಾಧಿಸ ಬೇಕು ಎನ್ನುವ ಸುಮ, ‘ತನ್ನಿಂದ ಕ್ರೀಡಾಪಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಗಿಲ್ಲ. ಆದ್ರೆ, ಯಾರಾದರೊಬ್ಬರು ಸ್ಟಾರ್ ಆಟಗಾರರ ಉದಯಕ್ಕೆ ತಾನು ಸಾಥ್ ನೀಡಬೇಕು. ತನ್ನ ಕುಟುಂಬ ಅಥವಾ ಯಾರಾದರೂ ಬಡ ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಇದ್ದವರಿದ್ದರೆ ಅವರಿಗೆ ಪ್ರೋತ್ಸಾಹ ನೀಡಿ, ನೆರವಾಗಿ ಸ್ಟಾರ್ ಆಟಗಾರರನ್ನಾಗಿ ರೂಪಿಸಬೇಕು’ ಎಂಬ ಆಸೆ ಇರುವಾದಾಗಿ ಹೇಳುತ್ತಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್