ಉದ್ಯಮಿಗಳ ಕಾರನ್ನ ಅಡ್ಡಗಟ್ಟಿ ದರೋಡೆ ಮಾಡೋಕೆ ರೆಡಿಯಾಗಿ ಕುಂತಿದ್ದ ಬೆತ್ತನಗೆರೆಯ ನರಹಂತಕ ಬೆತ್ತನಗೆರೆ ಶಂಕರ ಹಾಗೂ ಆತನ ಟೀಂ ಇದೀಗ ಬೆಂಗಳೂರು ಸಿಸಿಬಿ ಪೊಲೀಸ್ರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಬೆತ್ತನಗೆರೆ ಶಂಕರ, ಬಂಡೆ ಮಂಜ, ನಾರಾಯಣಸ್ವಾಮಿ, ಶ್ರೀಧರ ಹಾಗೂ ಶ್ರೀಕಾಂತ ಬಂಧಿತರು. ಬಂಧಿತರು ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಶ್ರೀಗಂಧನಗರದಿಂದ ಪಿಳ್ಳಪ್ಪನಕಟ್ಟೆಗೆ ಹೋಗುವ ಉದ್ಯಮಿಗಳ ಕಾರನ್ನ ಅಡ್ಡಗಟ್ಟಿ ಮರದ ದೊಣ್ಣೆಯನ್ನ ಹಿಡಿದು ಬೆದರಿಸೋದಕ್ಕೆ ಮುಂದಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ರೌಡಿಸ್ಕ್ವಾರ್ಡ್ ನ ತಂಡ ಆರೋಪಿಗಳನ್ನ ಬಂಧಿಸಿ ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಬೆತ್ತನಗೆರೆ ಶಂಕರನ ಮೇಲೆ ಕೊಲೆ-ಕೊಲೆಯತ್ನ ,ಸುಲಿಗೆ , ದರೋಡೆ ಪ್ರಕರಣ ಸೇರಿ ಸರಿಸುಮಾರು 40 ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿ ರೌಡಿಸಂನಿಂದ ತೆರೆಮರೆಸರಿದಿದ್ದ ಶಂಕರ ಇದೀಗ ಮತ್ತೆ ಬಾಲ ಬಿಚ್ಚೋದಕ್ಕೆ ರೆಡಿಯಾಗಿದ್ದ. ಅದಕ್ಕೆ ಸಿಸಿಬಿ ಪೊಲೀಸ್ರು ಸರಿಯಾಗೇ ಬ್ರೇಕ್ ಹಾಕಿದ್ದಾರೆ.