ಜನಾರ್ಧನರೆಡ್ಡಿ ಸಕ್ರಿಯ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಸಂಸದ ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಸಕ್ರಿಯ ರಾಜಕಾರಣಕ್ಕೆ ಬರೋ ಸೂಚನೆ ನೀಡಿದ್ದಾರೆ.
ಜನಾರ್ಧನ ರೆಡ್ಡಿಯವರು ಮನಸ್ಸು ಮಾಡಿದರೆ ಬಳ್ಳಾರಿಯ ಎಲ್ಲಾ ಒಂಭತ್ತು ವಿಧಾನ ಸಭಾಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಸಾಧಿಸಬಹುದು. ಬಳ್ಳಾರಿಯೊಂದರಲ್ಲೆ ಮಾತ್ರವಲ್ಲದೆ ಬಿಜೆಪಿ ಗದಗ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕೂಡ ಗೆಲುವು ಸಾಧಿಸಲಿದೆ. ಎಂದು ಶ್ರೀರಾಮಲು ಆಭಿಪ್ರಾಯ ಪಟ್ಟಿದ್ದಾರೆ.
ಜನಾರ್ಧನ ರೆಡ್ಡಿ ರಾಜಕೀಯಕ್ಕೆ ಮರಳುವ ಕುರಿತು ಹೈಕಮಾಂಡ್ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಿದೆ. ನನ್ನಿಂದ ಆರಂಭವಾದ ರಾಜಕೀಯ ನನ್ನಿಂದಲೇ ಅಂತ್ಯಗೊಳ್ಳಲಿದೆ. ಪತ್ನಿ ಭಾಗ್ಯಲಕ್ಷಿ ಚುನಾವಣೆಗೆ ಸ್ಪರ್ದಿಸುವುದಿಲ್ಲ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಇಳಿಯುದಿಲ್ಲವೆಂದು ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಿದೆ. ಕಾಂಗ್ರೇಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಎಲ್ಲಾ ಮತೀಯ ಹಿಂಸಾಚಾರಗಳಿಗೆ ಪಿಎಪ್.ಐ, ಎಸ್.ಡಿ.ಪಿ.ಐ. ಸಂಘಟನೆಗಳೇ ಕಾರಣ. ಈ ಸಂಘಟನೆಗಳನ್ನು ನಿಷೇಧಿಸುವ ಬದಲು ಸರ್ಕಾರ ಆರ್.ಎಸ್.ಎಸ್. ಅನ್ನು ನಿಷೇಧಿಸಲು ಮುಂದಾಗುತ್ತಿದೆ. ಪಿ.ಎಪ್.ಐ. ಎಸ್.ಡಿ.ಪಿ.ಐ. ಸಂಘಟನೆಗಳೊಂದಿಗೆ ಕಾಂಗ್ರೆಸ್ ಸಂಬಂಧ ಹೊಂದಿದೆ. ಈ ಕುರಿತು ಕೇಂದ್ರ ಗೃಹಮಂತ್ರಿಗಳಿಗೆ ದೂರು ನೀಡಿದ್ದೇನೆ. ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸುವಂತೆ ರಾಜನಾಥ್ ಸಿಂಗ್ ರವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದರು.
ಸಿಎಂ ಸಿಧ್ದರಾಮಯ್ಯ ಜಾತಿ ಜಾತಿಗಳ ನಡುವೆ ವಿಷಬಿತ್ತುವ ಕೀಳುಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಳ್ಳಾರಿಯ ಜನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.