ಕ್ವಾರಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿ ಸಾವನ್ನಪ್ಪಿದ ಬಾಲಕಿಯೋರ್ವಳಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಲಭಿಸಿದೆ.
ಬಾಗಲಕೋಟೆಯ ಹುನಗುಂದ ತಾಲೂಕಿನ ವಡ್ಡರಹೊಸೂರು ಗ್ರಾಮದ ನೇತ್ರಾವತಿ ಚೌಹಾಣ್ ಪ್ರಶಸ್ತಿಗೆ ಆಯ್ಕೆಯಾಗಿರೋ ಬಾಲಕಿ.
ಈಕೆ 2017ರ ಮೇ 13ರಂದು ಕಲ್ಲಿನ ಕ್ವಾರಿಯ ನೀರಲ್ಲಿ ಬಿದ್ದ ತನ್ನ ಮಾವನ ಮಕ್ಕಳಾದ ಮಾಂತೇಶ್ (14) , ಗಣೇಶ್ (13) ಅವರನ್ನು ರಕ್ಷಿಸಿದ್ದಳು.