ಮೌಲ್ವಿಯೊಬ್ಬ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಮಹಾರಾಷ್ಟ್ರದ ನಾಂದೇಡ್ ನಲ್ಲಿ ಬೆಳಕಿಗೆ ಬಂದಿದೆ.
ಸಬೆರ್ ಫರೂಕಿ ಆರೋಪಿ. ಈತ 12 ವರ್ಷದ ಬಾಲಕಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಹಿಂದೆಯೂ ಈ ಕಾಮಿ ಮೌಲ್ವಿ 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಾಂದೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿಯ ವಿರುದ್ಧ ದೂರು ನೀಡದಂತೆ ಗ್ರಾಮದ ಕೆಲವು ರಾಜಕಾರಣಿಗಳು ಬಾಲಕಿಯ ತಾಯಿಗೆ ಬೆದರಿಕೆ ಕೂಡಾ ಹಾಕಿದ್ದಾರೆ ಎನ್ನಲಾಗಿದೆ. ಬೆದರಿಕೆ ಹಾಕಿz ಆರೋಪದ ಮೇಲೆ ಖಲೀಲ್ ಪಟೇಲ್ ,ನವಾಬ್ ಪಟೇಲ್, ಐಷ್ರತ್ ಭಗವಾನ್ ಎಂಬವುರನ್ನು ಪೋಲಿಸರು ಬಂಧಿಸಿದ್ದಾರೆ.