ಸುದ್ದಿವಾಹಿನಿಯ ನಿರೂಪಕರಲ್ಲಿ ಹೆಸರಾಂತ ಹೆಸರು ವಸಂತ್ ಕುಮಾರ್ ಗಂಗೊಳ್ಳಿ ಅವರದ್ದು. ನೇರ ನುಡಿಯ ನಿರೂಪಕರು. ನೇರ ಪ್ರಶ್ನೆಗಳ ಮೂಲಕ ರಾಜಕಾರಣಿಗಳ ಬೆವರಳಿಸೋ ನಿಷ್ಠುರವಾದಿ. ಅಜಾತಶತ್ರುವೂ ಹೌದು. ಇವರ ದಿಟ್ಟತನದ ಮಾತನ್ನು ಎಲ್ರೂ ಇಷ್ಟ ಪಡ್ತಾರೆ. ರಾಜಕಾರಣಿಗಳು ಆ ಕ್ಷಣಕ್ಕೆ ಕಕ್ಕಾಬಿಕ್ಕಿ ಆಗ್ತಾರೆ, ಹಾಗಂತ ನಂತರ ದ್ವೇಷ ಸಾಧಿಸಲ್ಲ…! ಮರುಕ್ಷಣ ವಸಂತ್ ಅವರೆದುರು ಮುಗ್ಧರಾಗಿ ಬಿಡ್ತಾರೆ. ಯಾಕಂದ್ರೆ, ವಸಂತ್ ಅವರ ಮುಖದ ವರ್ಚಸ್ಸು, ಹೃದಯ ವೈಶಾಲ್ಯತೆ ಅಂತಹದ್ದು.
ವಸಂತ್‍ಕುಮಾರ್ ಅವರು ಕುಂದಾಪುರದ ನೇರಳಕಟ್ಟೆಯ ಅಣ್ಣಪ್ಪ ಬಿಲ್ಲವ ಮತ್ತು ಗಂಗೊಳ್ಳಿ ಗೌರಿ ಪೂಜಾರ್ತಿ ಅವರ ನಾಲ್ಕು ಜನ ಮಕ್ಕಳಲ್ಲಿ ಹಿರಿಯರು. ಇವರ ಪತ್ನಿ ನಾಗಜ್ಯೋತಿ, ಮಗಳು ಅಕ್ಷರ.
1975ರ ಫೆಬ್ರವರಿ 11ರಂದು ಜನಸಿದ ವಸಂತ್, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಮತ್ತು ಡಿಪ್ಲೋಮವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪೂರೈಸ್ತಾರೆ. ಬಿಎ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಕರೆಸ್ಪಾಂಡೆನ್ಸ್ ನಲ್ಲಿ.
ತಂದೆ ಗಜಾನನ ಟ್ರಾವೆಲ್ಸ್ ಮಾಲೀಕರು. ವಸಂತಕುಮಾರ್ ಅವರು ಕಾಲೇಜು ದಿನಗಳಲ್ಲಿಯೇ ಟ್ರಾವೆಲ್ಸ್ ಜವಬ್ದಾರಿ ಹೊತ್ತಿದ್ದರು. ತಮ್ಮ ಬಸ್ ನಲ್ಲಿ ಡ್ರೈವರ್ ಆಗಿ, ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ರು…! ರಜಾದಿನಗಳಲ್ಲಿ ಬೆಂಗಳೂರಿಗೆ ಬಂದು ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ರು.
ಬೆಂಗಳೂರಿನ ಬಸವೇಶ್ವರ ನಗರದ ನಿಸರ್ಗ ಹೋಟೆಲ್ ಮಾಲೀಕರು ಇವರ ಬಾವ. ಈ ಹೋಟೆಲ್ ನಲ್ಲಿ ವಸಂತ್ ಅವರು ಮೇಲ್ವಿಚಾರಕರಾಗಿ ಕೆಲಸ ಮಾಡ್ತಿದ್ದಾಗ ಬಾಲಾಜಿ ಟೆಲಿ ಫಿಲಮ್ಸ್ ನ ಭಗವಾನ್ ಸಾರಂಗ್ ಅವರ ಪರಿಚಯ ಆಗುತ್ತೆ.
2006ರ ಒಂದ್ ದಿನ ಭಗವಾನ್ ಅವರ ಕಾದಂಬರಿ ಧಾರವಾಹಿ ಕಲಾವಿದರೊಬ್ಬರು ಕೈಕೊಟ್ಟಿರುತ್ತಾರೆ. ಆಗ ವಸಂತ್ ಅವರನ್ನು ಹಾಗೇ ಸುಮ್ಮನೆ ಮಾತಾಡೋಕೆ ಅಂತ ಸೆಟ್ ಗೆ ಕರೆದ ಭಗವಾನ್ ಅವರು ಪಾತ್ರವೊಂದನ್ನು ಮಾಡುವಂತೆ ಹೇಳ್ತಾರೆ…! ದಿಢೀರನೆ ಒದಗಿ ಬಂದ ಅವಕಾಶವನ್ನು ಇಲ್ಲ ಎನ್ನದೆ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ವಸಂತ್. ಅದು ವಸಂತ್ ಅವರು ಮೊದಲ ಬಾರಿ ಕ್ಯಾಮೆರಾ ಫೇಸ್ ಮಾಡಿದ್ದು. ಅದಾದ ಮೇಲೆ ಜಾಹಿರಾತು ಒಂದರಲ್ಲಿ ನಟಿಸೋ ಅವಕಾಶ ಸಿಗುತ್ತೆ.
ನಂತರ ರೆಡ್‍ಎಫ್ ಎಂ 93.5ನಲ್ಲಿ ಆರ್ ಜೆ ಯಾಗಿ ಹೊಸ ಇನ್ನಿಂಗ್ಸ್ ಆರಂಭಿಸ್ತಾರೆ. ಒಟ್ಟು 1872 ಮಂದಿ ಆರ್ ಜೆ ಕೆಲಸಕ್ಕೆ ಇಂಟರ್ ವ್ಯೂ ಗೆ ಬಂದಿದ್ದರು..! ಅವರುಗಳಲ್ಲಿ ವಸಂತ್ ಅವರು ಆಯ್ಕೆಯಾಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪೈಪೋಟಿ ಇತ್ತು, ವಸಂತ್ ಎದುರಿಸಿ ಗೆದ್ದೇ ಬಿಟ್ರು.
ತಂದೆಯ ಆರೋಗ್ಯ ಸಮಸ್ಯೆಯಿಂದಾಗಿ ವಸಂತ್ ಮಂಗಳೂರಿಗೆ ಟ್ರಾನ್ಸ್ ಫರ್ ಮಾಡಿಸಿಕೊಳ್ತಾರೆ. 2007ರಿಂದ 10ರವರೆಗೆ ಮೂರುವರ್ಷಗಳ ಕಾಲ ಮಂಗಳೂರಲ್ಲಿ ರೆಡ್ ಎಫ್ ಎಂ ಆರ್ ಜೆ ಆಗಿ ಕೆಲಸ ಮಾಡಿದ್ರು. ರೆಡ್ ಎಫ್ ಎಂ ನಲ್ಲಿ ಇವರು ನಡೆಸಿಕೊಡ್ತಿದ್ದ ‘ದಿಲ್ಸೆ’, ‘ನಮ್ಮೂರ ಬಂಡಿ’ ಕಾರ್ಯಕ್ರಮಗಳ ಜನ ಮೆಚ್ಚುಗೆ ಪಡೆದಿದ್ವು.
ನಂತರ ವರದಿಗಾರ ಆಗಬೇಕೆಂದು ‘ಜನಶ್ರೀ’ ವಾಹಿನಿಗೆ ಇಂಟರ್ ವ್ಯೂಗಂತ ಹೋದ್ರು. ಅಂದು ಜನಶ್ರೀಯ ಪ್ರಧಾನ ಸಂಪಾದಕರಾಗಿದ್ದ ಅನಂತ ಚಿನಿವಾರ ಅವರು, ನಿಮ್ಮ ವಾಯ್ಸ್ ಚೆನ್ನಾಗಿದೆ. ನಿರೂಪಕರಾಗಿ ಅಂತ ಹೇಳಿದ್ರು. ಅವರ ಮಾತಿನಂತೆ ಆರ್ ಜೆ ವಸಂತ್ ಆ್ಯಂಕರ್ ವಸಂತ್ ಆದ್ರು.
ಸ್ವಲ್ಪ ಸಮಯದ ಬಳಿಕ ‘ಸಮಯ’ ಚಾನಲ್ ಗೆ ಹೋದ್ರು. ಅಲ್ಲಿ ಕೇವಲ ಮೂರು ತಿಂಗಳು ಕೆಲಸ ಮಾಡಿದ್ರು. ಇವರ ಮುಂದಿನ ಪಯಣ ‘ಪ್ರಜಾ ಟಿವಿ’ ಆಗಿತ್ತು. ಸುಮಾರು 1.5 ವರ್ಷ ಪ್ರಜಾ ಆ್ಯಂಕರ್ ಆಗಿ ಕೆಲಸ ಮಾಡಿ ಪುನಃ ಜನಶ್ರೀ ಅತ್ತ ನಡೆದ್ರು. ಇದೀಗ ಹೊಸ ಚಾನಲ್ ‘ಫೋಕಸ್’ ಟೀಂ ಸೇರಿದ್ದಾರೆ.
ಜನಶ್ರೀಯಲ್ಲಿ ಕ್ರೈಂ ನ್ಯೂಸ್ ನಡೆಸಿಕೊಡ್ತಿದ್ರು. ಆಗೊಮ್ಮೆ-ಈಗೊಮ್ಮೆ ‘ಹಲೋ ಮೇಡಂ ಏನ್ ಸಮಾಚಾರ ರೀ’ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡ್ತಿದ್ರು. ಇನ್ನುಳಿಂದಂತೆ ಸುದ್ದಿ ನಿರೂಪಣೆ, ಡಿಸ್ಕಷನ್ಸ್ ಎಲ್ಲಾ ಇದ್ದಿದ್ದೇ.
ಇಷ್ಟೇ ಅಲ್ಲದೆ ಇವರೊಬ್ಬ ಒಳ್ಳೆಯ ಅಥ್ಲಿಟ್ ಕೂಡ ಹೌದು. ಕ್ರೀಡಾ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿಯನ್ನು ಹೊಂದಿದ್ದಾರೆ. ಕ್ರಿಕೆಟ್, ವಾಲಿಬಾಲ್ ಕಬ್ಬಡಿ ಅಂದ್ರೆ ಅಚ್ಚು-ಮೆಚ್ಚು. ಸ್ಥಳಿಯ ಸಂಸ್ಥೆಗಳ ಕಾರ್ಯಕ್ರಮ ನಿರೂಪಣೆ, ವೇದಿಕೆ ಕಾರ್ಯಕ್ರಮ ನಿರೂಪಣೆಗಳನ್ನು ಮಾಡಿದ್ದಾರೆ. ರಾಜ್ಯಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆಗಳ ನಿರೂಪಕರಾಗಿಯೂ ತೀರ್ಪುಗಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.
ಎಲ್ಲಾ ಧರ್ಮದ ಆಟಗಾರರನ್ನೊಳಗೊಂಡ ಶ್ರೀ ಸ್ವಾಮಿ ಕ್ರಿಕೆಟ್ ನ ಸಕ್ರಿಯ ಸದಸ್ಯರಾಗಿ 9 ಬಾರಿ ರಾಜ್ಯಮಟ್ಟದ ಪ್ಲಡ್ ಲೈಟ್ ಮ್ಯಾಚ್ ಟೂರ್ನಿಯನ್ನು ಆಯೋಜಿಸಿದ್ದ ಹಿರಿಮೆ ಕೂಡ ಇವರದ್ದು…!
ಹೆಚ್ಚು ಕಡಿಮೆ 20-22 ಬಾರಿ ರಕ್ತದಾನ ಕೂಡ ಮಾಡಿದ್ದಾರೆ. ಇವರೂರು ಗಂಗೊಳ್ಳಿ 2011ರಲ್ಲಿ ರಕ್ತದಾನಿಗಳ ಗ್ರಾಮ ಎಂದು ಘೋಷಿಸಲ್ಪಟ್ಟಿದೆ. ಇದು ದೇಶದ ಮೊದಲ ರಕ್ತದಾನಿಗಳ ಗ್ರಾಮ. ಪ್ರತಿ ಮನೆಯಲ್ಲೂ ಒಬ್ಬೊಬ್ಬ ರಕ್ತದಾನಿಗಳಿದ್ದಾರೆ. ಇದರ ಉಸ್ತುವಾರಿ ವಸಂತ್ ಅವರ ಗೆಳೆಯ ದಿವಾಕರ್. ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರಿಂದ ರಕ್ತದಾನಿಗಳ ಗ್ರಾಮ ಎಂಬ ಪ್ರಶಸ್ತಿಯನ್ನು ದಿವಾಕರ್ ಅವರೇ ಗ್ರಾಮದ ಪರವಾಗಿ ಸ್ವೀಕರಿಸಿದ್ರು.
‘ವಸಂತ ಕಾಲ’, ‘ಸರ್ವ ಧರ್ಮ ಸೌಹಾರ್ದ ಸಮ್ಮಿಲನ’ ,`ಶ್ರೀ ಬಬ್ಬು ಸ್ವಾಮಿ ಸ್ವಯಂ ಸೇವಾ ಸಂಘ’ ಕೆವಿಕೆ ಸೇರಿದಂತೆ ನಾನಾ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಿಂದ ಒಟ್ಟಾರೆ ದಶಕಕ್ಕೂ ಹೆಚ್ಚು ವರ್ಷದ ಅನುಭವ ಇರೋ ವಸಂತ್ ಕುಮಾರ್ ಅವರು ಹೊಸ ಚಾನಲ್ ಫೋಕಸ್ ನಲ್ಲಿದ್ದಾರೆ. ಇಷ್ಟು ದಿವಸ ಮಿಂಚಿದ್ದಕ್ಕಿಂತ ಹೆಚ್ಚು ಹೆಚ್ಚು ಪ್ರಜ್ವಲಿಸಲಿ. ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿರೋ ಇವರ ಗರಡಿಯಲ್ಲಿ ಇನ್ನೂ ಅನೇಕ ಪತ್ರಕರ್ತರು ರೂಪುತಾಳಲಿ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ