ಕನ್ನಡ ಬಿಗ್ ಬಾಸ್ ಸೀಸನ್ 5 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈಗ ಸದ್ಯ ಉಳಿದು ಕೊಂಡವರೆಲ್ಲಾ ಪ್ರಬಲ ಸ್ಪರ್ಧಿಗಳು.ಇವರಲ್ಲಿ ಯಾರು ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂಬ ಲೆಕ್ಕಾಚಾರ, ಚರ್ಚೆ ಶುರುವಾಗಿದೆ. ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬರಲಿದ್ದು, ಅನುಪಮ ಮತ್ತು ಶ್ರುತಿ ಪ್ರಕಾಶ್ ಮನೆಯಿಂದ ಹೊರಬರುವವರು ಎನ್ನಲಾಗುತ್ತಿದೆ.
ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ನಿವೇದಿತಾ ಗೌಡ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿ ಕಾಣುತ್ತಿದ್ದು, ದಿವಾಕರ್ ಮತ್ತು ಸಮೀರ್ ಆಚಾರ್ಯ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇನ್ನೊಂದು ವಾರದದಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ.