ಚಂದನವನದ ಯಾವ ಹೀರೋಯಿನ್ ಗಳಿಗೂ ಕಡಿಮೆ ಇಲ್ಲದ ಚೆಲುವು. ಚೆಲುವ ಇಮ್ಮಡಿಗೊಳಿಸೋ ಚಂದದ ನಗು. ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರು. ಸದಾ ನಗು-ನಗುತ್ತಾ ನಗಿಸುತ್ತಾ ಕಾಲ ಕಳೆಯುವ ನಿರೂಪಕಿ ಮುದ್ದು ಮುದ್ದಾಗಿರೋ ‘ಮುದ್ದು ಮೀನ’.
ಇವರೊಂಥರಾ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್. ಸಕಲ ಕಲಾ ವಲ್ಲಭೆ…! ಚಿಕ್ಕಂದಿನಿಂದೂ ಹಿಂಗೇ ಸಿಕ್ಕಾಪಟ್ಟೆ ಆ್ಯಕ್ಟಿವ್. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಇವರ ಅಭಿನಯ ಕಂಡ ಶಿಕ್ಷಕರು ನೀನು ಆ್ಯಕ್ಟರ್ ಆಗು ಅಂದ್ದಿದ್ದರು…! ಹಾಡು ಹೇಳಿದಾಗ ನೀನೊಬ್ಬ ಒಳ್ಳೆಯ ಗಾಯಕಿ ಆಗ್ತೀಯ ಅಂತ ಭವಿಷ್ಯ ನುಡಿದಿದ್ರು. ಪಟಪಟ ಮಾತು, ಮಾತಿನ ತಾಕತ್ತು ನೋಡಿ ನೀನು ವಕೀಲೆ ಆಗಬಹುದು ಅಂತ ಗುರುಗಳು ಸಲಹೆ ನೀಡಿದ್ರು.
ವಿಜ್ಞಾನ ಇವರ ನೆಚ್ಚಿನ ವಿಷ್ಯವಾಗಿತ್ತು. ಯಾವಾಗಲೂ ನೂರಕ್ಕೆ ನೂರು ಮಾಕ್ರ್ಸ್ ಪಡೀತಾ ಇದ್ರು. ವಿಜ್ಞಾನದ ಬಗೆಗಿನ ಆಸಕ್ತಿ ನೋಡಿದ ಶಿಕ್ಷಕರು, ‘ವೈದ್ಯೆ’ಯಾಗು ಅಂದಿದ್ರು.
ಇಷ್ಟಕ್ಕೆ ಇವರಿಗೆ ಒಲಿದಿರೋ ಕಲೆಗಳ ಪಟ್ಟಿ ಮುಗಿಯಲ್ಲ. ಮುದ್ದು ಮೀನ ಚಿತ್ರ ಕಲಾವಿದೆ ಸಹ ಹೌದು. ಪೇಯಿಂಟಿಂಗ್, ಪೆನ್ಸಿಲ್ ಸ್ಕೆಚ್ ಗಳಲ್ಲಿ ಚಿತ್ತಾರ ಮೂಡಿಸುತ್ತಿರುತ್ತಾರೆ. ಜೊತೆಗೆ ಒಳ್ಳೆಯ ಬರಗಾರ್ತಿ ಕೂಡ…! ಕವನ, ಕಥೆಗಳನ್ನು ಬರೀತಾರೆ.ವಿಶೇಷ ಅಂದ್ರೆ ಇವುಗಳನ್ನು ಪ್ರಕಟಿಸಲೆಂದು ಬರೆಯುವುದಕ್ಕಿಂತ ಹವ್ಯಾಸವಾಗಿ ಬರೆದಿಟ್ಟುಕೊಂಡಿದ್ದಾರೆ…! ಜೊತೆಗೆ ಒಳ್ಳೆಯ ಡ್ಯಾನ್ಸರ್ ಕೂಡ ಹೌದು.
ಲೈಫ್ ನಲ್ಲಿ ಹೀಗೆ ಆಗ್ಬೇಕು, ಇದೇ ಆಗ್ಬೇಕು ಅಂತ ಕನಸುಕಂಡವರಲ್ಲ, ಕಾಣುತ್ತಿರುವವರೂ ಅಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮೆಟ್ಟಿಲುಗಳನ್ನು ಏರ್ತಿರೋ ನಿರೂಪಕಿ.
ಮುದ್ದು ಮೀನ ಅವರು ಹುಟ್ಟಿದ್ದು, ಬೆಳೆದಿದ್ದು, ವೃತ್ತಿ ಬದುಕು ಕಟ್ಟಿಕೊಂಡಿರೋದು ಎಲ್ಲವೂ ಬೆಂಗಳೂರಲ್ಲಿ. ದಿ. ಆರ್ ಸಿದ್ದಪ್ಪ ಮತ್ತು ಬಿ. ಪುಟ್ಟ ಸಿದ್ದಮ್ಮ ದಂಪತಿಯ 6 ಮಂದಿ ಮಕ್ಕಳಲ್ಲಿ ಐದನೇ ಮುದ್ದು ಮಗಳು ಮೀನ.
ಲಾಲ್‍ಬಾಗ್ ಬಳಿ ಇರೋ ವಾಸವಿ ವಿದ್ಯಾನಿಕೇತನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೀತಾರೆ. ಅದಾದ ಬಳಿಕ ಹನುಮಂತ ನಗರದಲ್ಲಿನ ಪಿಇಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ (ಬಿಕಾಂ) ಶಿಕ್ಷಣ ಪಡೆದ್ರು.
ಮೀನ ಅವ್ರು ಚಿಕ್ಕವರಿರುವಾಗ ಇವರ ಹಿರಿಯಕ್ಕನನ್ನು ತಾಯಿಯ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗುತ್ತೆ. ಮದ್ವೆಯಾದ ಮೂರು ವರ್ಷದಲ್ಲಿ ಅಕ್ಕ ವಿಧವೆ ಆಗ್ತಾರೆ. ಬಾವ ತೀರಿಕೊಳ್ಳುವಾಗ ಅಕ್ಕ ತುಂಬುಗರ್ಭಿಣಿ. ಈ ಸಾವಿನ ನೋವು ಮರೆಯುವ ಮುನ್ನವೇ 7ನೇ ತರಗತಿಯಲ್ಲಿರುವಾಗ ತಂದೆ ಹೃದಯಘಾತದಿಂದ ಕೊನೆಯುಸಿರೆಳೆಯುತ್ತಾರೆ.
ಹೀಗೆ ಚಿಕ್ಕಂದಿನಿಂದ ಸಾಕಷ್ಟು ನೋವುಗಳನ್ನು ಅನುಭವಿಸುತ್ತಾ ಬೆಳೆದವರು ಮೀನ. ಆದ್ರೆ ಯಾವತ್ತೂ ಹತಾಶರಾಗಿ ಕೂರಲಿಲ್ಲ. ಜೀವನದ ಪ್ರತಿಕ್ಷಣವನ್ನೂ ಎಂಜಾಯ್ ಮಾಡ್ತಾ ಕಾಲ ಕಳೀತಿದ್ದಾರೆ. ಆಗಿರೋದ್ರ ಬಗ್ಗೆ ಚಿಂತಿಸಿ ಈ ಕ್ಷಣ, ಈ ದಿವಸವನ್ನು ಮಿಸ್ ಮಾಡಿಕೊಳ್ಳೋದು ಇವರಿಗೆ ಇಷ್ಟವಿಲ್ಲ. ತನ್ನ ಕಣ್ಣೀರನ್ನು ಸಹ ಎಂಜಾಯ್ ಮಾಡ್ತೀನಿ ಎನ್ನುವಷ್ಟರ ಮಟ್ಟಿಗೆ ಸದಾ ಪಾಸಿಟಿವಿ ಯೋಚನೆ ಮಾಡೋ ಹುಡ್ಗಿ.
ತಂದೆ ತೀರಿಕೊಂಡ ಮೇಲೆ ತನ್ನ ಪ್ರೌಢಶಾಲಾ ದಿನಗಳಿಂದಲೇ ದುಡಿಮೆ ಹಾದಿ ಕಂಡುಕೊಂಡ ಸ್ವಾಭಿಮಾನಿ. ಚಿಕ್ಕ ಮಕ್ಕಳಿಗೆ ಟ್ಯೂಷನ್ ಮಾಡಿ, ಡ್ಯಾನ್ಸ್ ಹೇಳಿಕೊಟ್ಟು ಅಷ್ಟು ಇಷ್ಟೋ ಹಣ ಸಂಪಾದಿಸುತ್ತಿದ್ದರು.
ಡಿಗ್ರಿ ಮಾಡುವಾಗ ಫ್ರೆಂಡ್ ಒಬ್ಬರ ಸಲಹೆಯಂತೆ ಮೀಡಿಯಾದಲ್ಲಿ ಕೆಲಸ ಮಾಡಲು ಮುಂದಾಗ್ತಾರೆ. ವಿದ್ಯಾರ್ಥಿದೆಸೆಯಲ್ಲಿ ‘ಯು2’ನಲ್ಲಿ ಕೆಲಸ ಮಾಡ್ತಾರೆ.
2009-10ರಲ್ಲಿ ಡಿಗ್ರಿ ಮುಗಿಯುತ್ತಿದ್ದಂತೆ ‘ಜಿ-ಕನ್ನಡ’ದಲ್ಲಿ ಕೆಲಸ ಸಿಗುತ್ತೆ. ಅಲ್ಲೊಂದೊರ್ಷ ಕೆಲ್ಸ ಮಾಡಿ 2010-11ರಲ್ಲಿ ‘ಸಮಯ’ ಸುದ್ದಿವಾಹಿನಿ ಸೇರ್ತಾರೆ. ನಂತರ ‘ಕಸ್ತೂರಿ’, ಬಳಿಕ ‘ಜನಶ್ರಿ’ ಕಡೆಗೆ ಪಯಣ ಸಾಗುತ್ತೆ. 8 ತಿಂಗಳ ಬಳಿಕ 2014ರ ಕೊನೆಯಲ್ಲಿ ಈ-ಟಿವಿ (ಇಂದಿನ ನ್ಯೂಸ್ 18 ಕನ್ನಡ) ಕ್ಕೆ ಜಾಯಿನ್ ಆದ್ರು. ಇಲ್ಲಿಯೇ ವೃತ್ತಿ ಜರ್ನಿ ಮುಂದವರೆಸಿದ್ದಾರೆ.
ಸಿನಿಮಾ, ಜ್ಯೋತಿಷ್ಯ, ಗೇಮ್ ಶೋ, ಲೈಫ್ ಸ್ಟೈಲ್ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.
ಯು-2ನಲ್ಲಿ ‘ಶುಭಾಶಯ’, ಜೀ ಕನ್ನಡದಲ್ಲಿ ‘ನೆನೆದವರ ಮನದಲ್ಲಿ’, ಸಮಯದಲ್ಲಿ ‘ಲಾಸ್ಟ್ ಪೇಜ್’, ‘ಮಾರ್ಕೇಟ್ ಸರ್ಕ್ಯೂಟ್’, ಕಸ್ತೂರಿಯಲ್ಲಿ ‘ಲಗೋರಿ’, ‘ಪ್ರೊಡಕ್ಷನ್ ನಂ1’, ‘ನಮಸ್ತೆ ಕಸ್ತೂರಿ’, ‘ಲಕ್ಷ್ಮಿ ಕಟಾಕ್ಷ’, ‘ಸ್ಟಾರ್ ಕಿಚನ್’, ‘ಜನ್ಮಾಂತರ’, ಜನಶ್ರೀ ‘ಮಾಯಾ ಬಜಾರ್’, ‘ಸೀ ರಿಯಲ್’ ನಡೆಸಿಕೊಟ್ಟಿದ್ದನ್ನು ಸ್ಮರಿಸಬಹುದು.
ಈಗ ನ್ಯೂಸ್ 18 ನಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ‘ಸಿನಿಮಾತು’ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು, ಡಿಸ್ಕಶನ್ಸ್ ಗಳನ್ನು ನಡೆಸಿಕೊಡ್ತಿದ್ದಾರೆ. ಇಲ್ಲಿ ಇವರು ನಡೆಸಿಕೊಟ್ಟ ‘ಕಲರ್ ಫುಲ್ ಕ್ಯಾಂಪಸ್’, ‘ಪೇಜ್-3’, ‘ಲೈಫ್ ಸ್ಟೈಲ್’ ಸೂಪರ್ ಹಿಟ್ ಕಾರ್ಯಕ್ರಮಗಳು.
ಇವ್ರಿಗೆ ತರ್ಲೆ, ತಮಾಷೆ ಮಾಡೋದು ಅಂದ್ರೆ ಕಂಡಾಪಟ್ಟೆ ಇಷ್ಟ. ಯಾವಾಗ್ಲೂ ನಗ್ತಾ ನಗ್ತಿರಬೇಕು ಅನ್ನೋದು ಇವ್ರ ರೋಲ್. ಇವ್ರೇ ಹೇಳುವಂತೆ ತಿಂಡಿಪೋತಿ..! ಆದ್ರೆ, ಆರೋಗ್ಯ, ಫಿಟ್ ನೆಸ್ ಬಗ್ಗೆ ಕಾಳಜಿ ವಹಿಸೋದನ್ನ ಮರೆಯಲ್ಲ. ಆರೋಗ್ಯವೇ ಭಾಗ್ಯ. ನನ್ ಆರೋಗ್ಯ ಚೆನ್ನಾಗಿದ್ರೆ, ನನ್ನೋರನ್ನ ಚೆನ್ನಾಗಿ ನೋಡ್ಕಳ್ಬಹುದು ಅಂತಾರೆ ಮೀನ.
ಮಾಡಿದ್ದುಣ್ಣೋ ಮಾರಾಯ ಅಂತಾರೆ. ಇದನ್ನು ನಾನು ನಂಬ್ತೀನಿ. ಹಾಗಾಗಿ ಒಳ್ಳೇದನ್ನೇ ಮಾಡ್ಬೇಕು ಅನ್ನೋ ಮೀನ ಅವ್ರು, ಬಡ, ಅನಾಥ ಮಕ್ಕಳನ್ನು ದತ್ತು ತಗೊಂಡು ಅವ್ರಿಗೆ ಲೈಫ್ ಕೊಡ್ಬೇಕು ಎಂಬ ಕನಸಿಟ್ಟಿಕೊಂಡಿದ್ದಾರೆ.
ಮೀನ ಅವ್ರಿಗೆ ಫ್ರೆಂಡ್ಸ್ ಮೀನು, ಫಿಶ್, ಸೀತ ಲವ್ ಕುಶ್, ರೈನ್ ಬೋ, ಕ್ಯೂಟಿ, ಕ್ಯಾಂಡಿ, ಡಾಲ್, ವಾಂಡರ್, ಸ್ಪಾರ್ಕ್ ಹೀಗೆ ಹತ್ತಾರು ಹೆಸರುಗಳಿಂದ ಕರೀತಾರೆ.
ಮಕ್ಕಳ ಜೊತೆ ಆಡೋದು, ಫ್ರೆಂಡ್ಸ್, ಫ್ಯಾಮಿಲಿ ಜೊತೆ ಕಾಲ ಕಳೆಯೋದು, ಜಡೆ ಹಾಕಿಕೊಳ್ಳೋದು, ಸೀರೆ ಉಡುಗೆ, ಡ್ಯಾನ್ಸ್, ಡಬ್ ಸ್ಮ್ಯಾಶ್ ಮೀನಗಿಷ್ಟ. ಗಾಡ್ ಗಣೇಶನ ಭಕ್ತೆ. ‘ನಾನ್ಯಾವತ್ತು ಒಂಟಿಯಾಗಿಲ್ಲ. ಗಣೇಶ ಯಾವಾಗ್ಲೂ ನನ್ ಜೊತೆ ಇರ್ತಾನೆ. ಗಣಿ ನನ್ ಬೆಸ್ಟ್ ಫ್ರೆಂಡ್. ತಪ್ಪು ಮಾಡಿದಾಗ ತಪ್ಪಾಯ್ತು ಅಂತ 21 ನಮಸ್ಕಾರ ಮಾಡ್ತೀನಿ. ಏನಾದ್ರು ಬೇಕೆನಿಸಿದಾಗ 21 ನಮಸ್ಕಾರ ಮಾಡಿ ಬೇಡ್ತೀನಿ’ ಎನ್ನುತ್ತಾರೆ.
ಇವ್ರು ‘ಸೂಪರ್ ಮಿನಿಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಇವರ ತಂಡ ಸೆಮಿಫೈನಲ್ ತಲುಪಿತ್ತು. ಈ ಕಾರ್ಯಕ್ರಮ ಮೀನ ಅವ್ರಿಗೆ ತುಂಬಾ ಇಷ್ಟವಂತೆ. ಕಸ್ತೂರಿಗೆ ಜಾಯಿನ್ ಆಗೋ ಮುಂಚೆ ‘ರಾಜಕುಮಾರಿ’ ಆ್ಯಂಕರ್ಸ್ ಸ್ಪೆಷಲ್ ನಲ್ಲಿ ಸ್ಪರ್ಧಿಸಿ ವಿಜೇತರಾಗಿದ್ರು.
ಇನ್ನು ಪ್ರತಿಯೊಬ್ಬರಿಂದಲೂ ಸ್ಪೂರ್ತಿ ಪಡೆಯುವ, ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳೋ ದೊಡ್ಡ ಗುಣ ಇವರದ್ದು.
ಸಿನಿಮಾ ರಂಗದಿಂದ ಸಾಕಷ್ಟು ಅವಕಾಶಗಳು ಬಂದಿದ್ದರೂ ಹೋಗುವ ಮನಸ್ಸು ಮಾಡದ ಮೀನ ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಸುಚಿತ್ರ ಫಿಲ್ಮ್ ಅಕಾಡೆಮಿಯಲ್ಲಿ ನಾನಾ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಸ್ಟೇಜ್ ಪ್ರೋಗ್ರಾಂಗಳ ಆ್ಯಂಕರಿಂಗ್ ಮಾಡಿದ್ದಾರೆ.
ನೀವು ಟಿವಿ ಪರದೆಯಲ್ಲಿ ಮೀನ ಅವರನ್ನು ನೋಡಿರ್ತೀರ. ಇವರ ನಿರೂಪಣೆ ಶೈಲಿ, ಸಖತ್ ಮಾತನ್ನು ಪದಗಳಲ್ಲಿ ವರ್ಣಿಸಲಾಗದು. ಇವರು ನಡೆಸಿಕೊಡೋ ಕಾರ್ಯಕ್ರಮಗಳಲ್ಲಿ ಒಂದಕ್ಕಿಂತ ಇನ್ನೊಂದರಲ್ಲಿ ವಿಭಿನ್ನ ನಿರೂಪಣಾ ಶೈಲಿ ಇರುತ್ತೆ. ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಹಿಡಿತ ಇರೋ ಇವರು ಎಲ್ಲಾ ಭಾಷೆಗಳನ್ನು ಕಲಿಬೇಕೆಂಬ ಆಸೆ ಹೊಂದಿದ್ದಾರೆ.
ಸುಳ್ಳು ಹೇಳೋದು, ಹೇಳೋರು ಇವ್ರಿಗೆ ಇಷ್ಟವಾಗಲ್ಲ. ಇವರ ಪ್ರಕಾರ ಜಗತ್ತೇ ಒಂದು ಬಿಗ್ ಬಾಸ್ ಮನೆ, ಮೇಲಿರೋ ದೇವ್ರೇ ಬಿಗ್ ಬಾಸ್. ದೇವರ ಅಣತಿಯಂತೆ ನಡೆಯೋದು ಎಲ್ಲವಂತೆ…! ಮನುಜರ ಬಾಳಿದು ಸಂತೆ…! ಯಾಕೆ ಮಾಡ್ಬೇಕು ಚಿಂತೆ…! ಬಾಳಿರಿ ನಿಶ್ಚಿಂತೆಯಂತೆ….ಎಂದು ಹೇಳ್ತಾರೆ.
ಕ್ರಿಯೇಟಿವ್ ಫೀಲ್ಡ್ ಅಂದ್ರೆ ಪ್ರೀತಿ. ಕ್ರಿಯೇಟಿವ್ ಜನರನ್ನು ಪ್ರೀತಿಸ್ತಾರೆ. ಟೈಮ್ ವೇಸ್ಟ್ ಮಾಡೋದು ಅಂದ್ರೆ ಆಗಲ್ಲ. ಏನಾದ್ರೂ ಮಾಡ್ತಿರಬೇಕು. ಸುಮ್ನೆ ಕೂರಬಾರದು. ಗಾಸಿಪ್, ರೂಮರ್ಸ್ ಕ್ರಿಯೇಟ್ ಮಾಡೋರ್ ಕಂಡ್ರೆ ಇವ್ರಿಗೆ ನಗು ಬರುತ್ತೆ…! ನಗು ಬಿಟ್ರೆ ಬೇರೆ ಯಾವ ರೀತಿಯ ಪ್ರತಿಕ್ರಿಯೆ ಕೊಡೋದು ಇವ್ರಿಗಿಷ್ಟವಿಲ್ಲ. ಒಳ್ಳೆ ವ್ಯಕ್ತಿಗಳು ಯಾವತ್ತೂ ಹಿಂದಿಂದ ಮಾತಾಡಲ್ಲ. ಹಾಗಾಗಿ ಹಿಂದಿಂದ ಮಾತಾಡೋ ಕೆಟ್ ಜನರ ಬಗ್ಗೆ ತಲೆ ಕೆಡಿಸಿಕೊಳ್ಳೋ ಜಾಯಮಾನ ಇವ್ರದ್ದಲ್ಲ.
ಫನ್ ಮಾಡ್ತಾ, ಬೆಸ್ಟ್ ಫ್ರೆಂಡ್ಸ್ ನ ಗೋಳ್‍ಉಯ್ಕೋಳೋದು ಇವ್ರ ಅಭ್ಯಾಸ. ಸುಜಿತ್ ಕುಮಾರ್, ಧನುಷ್ ಮೀನ ಅವ್ರ ಬೆಸ್ಟೀಸ್.
ಮೀನ ಅವ್ರಿಗೆ ಮದುವೆ ಬಗ್ಗೆನೂ ಸಾಕಷ್ಟು ಕನಸುಗಳಿವೆ. ಇವ್ರಿಗೆ ರಾಮನ ತರದ ಹುಡ್ಗ ಸಿಗದೇ ಇದ್ರೂ ಪರವಾಗಿಲ್ಲಂತೆ. ಬೇರೆಯವರ ಭಾವನೆಗಳೊಡನೆ ಆಡದ ಹುಡ್ಗ ಬೇಕಂತೆ. ನೋಡೋಕೆ ಫಿಟ್ ಇರಬೇಕಂತೆ. ಎಲ್ಲಾ ಹುಡ್ಗೀರು ಅವ್ನ ಹಿಂದೆ ಹೋದ್ರೆ, ಅವ್ನು ಇವ್ರ ಹಿಂದೆ ಬರಬೇಕಂತೆ. ಒಳ್ಳೆ ಕ್ಯಾರೆಕ್ಟರ್ ಇರೋ ಅಪರಂಜಿ ಹುಡುಗ ಬೇಕಂತೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ