ಈತ ಪತ್ನಿಗೆ ಗಂಡ ಎನಿಸಿಕೊಳ್ಳಲೂ ಯೋಗ್ಯನಲ್ಲ….ಕೊಲೆಗಾರ..! ಮಗಳಿಗೆ ಪ್ರೀತಿಯ ತಂದೆಯೂ ಅಲ್ಲ. ಅವಳ ಪಾಲಿಗೆ ಕಾಮುಕ…!
ಈತನ ಹೆಸರು ಮೊಹಮ್ಮದ್ ಅಬ್ದುಲ್ ಶೇಕ್. ವಯಸ್ಸು 50. ಊರು ಮುಂಬೈನ ಥಾಣೆ. ಈತ ತನ್ನ 13 ವರ್ಷದ ಮಗಳ ಮೇಲೆ ಸತತ 8 ವರ್ಷಗಳಿಂದ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಪೊಲೀಸರ ಅತಿಥಿಯಾಗಿದ್ದಾನೆ.
ಈತ ತನ್ನ ಮೊದಲ ಪತ್ನಿಗೆ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದ್ದು, ಜನವರಿ 4ರಂದು ಪಾಪಿ ತನ್ನ ಮಗಳ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದಾಗ ಪತ್ನಿ ಧೈರ್ಯ ಮಾಡಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ತನ್ನ ನಾಲ್ಕನೇ ಹೆಂಡ್ತಿಯನ್ನು ಕೊಲೆಮಾಡಿರೋದನ್ನು ಸಹ ಒಪ್ಕೊಂಡಿದ್ದಾನೆ.
ಈತ ಒಟ್ಟು 4 ಮದುವೆಯಾಗಿದ್ದು, ಇಬ್ಬರು ಬಿಟ್ಟು ಹೋಗಿದ್ದಾರೆ. ನಾಲ್ಕನೇ ಹೆಂಡ್ತಿಯನ್ನು ಕೊಲೆ ಮಾಡಿದ್ದಾನೆ. ಮೊದಲನೇ ಹೆಂಡ್ತಿ ಜೊತೆ ಐವರು ಮಕ್ಕಳೊಂದಿಗೆ ( ಎರಡನೇ ಹೆಂಡ್ತಿಯ ಇಬ್ಬರು ಮಕ್ಕಳು ಸೇರಿದಂತೆ) ವಾಸವಿದ್ದ ಎನ್ನಲಾಗಿದೆ.