ಕನ್ನಡ ಬಿಗ್ ಬಾಸ್ ಸೀಸನ್ 5 ಕೊನೆಯ ಘಟ್ಟ ತಲುಪಿದೆ. ಸಮೀರ್ ಆಚಾರ್ಯ ಇವತ್ತು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ , ಶ್ರುತಿ ಪ್ರಕಾಶ್ ನಿವೇದಿತಾ , ದಿವಾಕರ್ ಫಿನಾಲೆ ವೀಕ್ ನಲ್ಲಿ ಉಳಿದು ಕೊಂಡಿದ್ದಾರೆ.
ಚಂದನ್ ಶೆಟ್ಟಿ ಗೆಲ್ಲುವ ಸ್ಪರ್ಧಿಯಾಗಿ ಕಂಡು ಬರುತ್ತಿದ್ದಾರೆ. ಜಯರಾಂ ಕಾರ್ತಿಕ್ ಅವರು ಚಂದನ್ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಗೊಂಬೆ ಹುಡುಗಿ ನಿವೇದಿತಾ ತನ್ನದೇಯಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಶ್ರುತಿ ಪ್ರಕಾಶ್, ದಿವಾಕರ್ ಕೂಡ ಜನಮನ ಗೆದ್ದಿದ್ದಾರೆ.
ಒಟ್ಟಾರೆಯಾಗಿ ಗೆಲ್ಲುವವರು ಯಾರು ಎಂಬ ಕುತೂಹಲ ಹೆಚ್ಚಿದೆ.