ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಅವರ ಅಭಿನಯದ ಚೊಚ್ಚಲ ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿ ತಯಾರಿ ನಡೀತಿದೆ.
ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಅಭಿಷೇಕ್ ಪಾದಾರ್ಪಣೆಯ ಸಿನಿಮಾಕ್ಕೆ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂದು ಹೇಳಲಾಗಿತ್ತು.
ಇದೀಗ ಬದಲಾದ ಸನ್ನಿವೇಶದಲ್ಲಿ ಪವನ್ ಒಡೆಯರ್ ಬದಲಿಗೆ ಚೇತನ್ ನಿರ್ದೇಶಿಸುತ್ತಾರೆ ಎಂದು ಸಂದೇಶ್ ಪ್ರೊಡಕ್ಷನ್ ಸ್ಪಷ್ಟಪಡಿಸಿದೆ.
ಚೇತನ್ ಅನೇಕ ಸಿನಿಮಾಗಳಿಗೆ ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಹುದ್ದೂರ್ ಮತ್ತು ಭರ್ಜರಿ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾಕ್ಕೆ ಸಂಭಾಷಣೆ ಬರೀತಿದ್ದಾರೆ.