ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 5ವಿಕೆಟ್ ನಷ್ಟಕ್ಕೆ 144ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.
ಸತತ ಎರಡು ಪಂದ್ಯಗಳನ್ನು ಸೋತಿರುವ ಕೊಹ್ಲಿ ಪಡೆಗಿದು ಪ್ರತಿಷ್ಠೆಯ ಪಂದ್ಯ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ 7ರನ್ ಗಳಿಸುವಷ್ಟರಲ್ಲಿ ಕೆ.ಎಲ್ ರಾಹುಲ್ (0)ವಿಕೆಟ್ ಅನ್ನು, 13 ರನ್ ದಾಖಲಿಸುವಷ್ಟರಲ್ಲಿ ಮುರುಳಿ ವಿಜಯ್ (8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರಾಹುಲ್ ಔಟಾದ ಬಳಿಕ ಬ್ಯಾಟಿಂಗ್ ಗಿಳಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮಾಜಿ ನಾಯಕ , ಕನ್ನಡಿಗ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದರು..!
2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ರಾಹುಲ್ ದ್ರಾವಿಡ್ 50ಎಸೆತ ಎದುರಿಸಿ1ರನ್ ಗಳಿಸಿದ್ದರು. ಅತಿ ಹೆಚ್ವು ಎಸೆತ ಎದುರಿಸಿ ಖಾತೆ ತೆರದ ಆಟಗಾರ ಎಂಬ ಖ್ಯಾತಿ ದ್ರಾವಿಡ್ ಅವರದ್ದಾಗಿತ್ತು.
ಇಂದು ಈ ದಾಖಲೆಯನ್ನು ಚೇತೇಶ್ವರ ಪೂಜಾರ ಅಳಿಸಿ ಹಾಕಿದ್ದಾರೆ. ಪೂಜಾರ 1 ರನ್ ಗಳಿಸಲು ಎದುರಿಸಿದ್ದು ಬರೋಬ್ಬರಿ 54 ಎಸೆತಗಳನ್ನು…!
ಇನ್ನು ಮೊದಲೆರಡು ಪಂದ್ಯಗಳಿಂದ ಹೊರಗಿದ್ದ ಉಪನಾಯಕ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ರು. 27ಎಸೆತ ಎದುರಿಸಿ ಕೇವಲ 9 ರನ್ ಗಳಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ.
ಭಾರತ ಮುರುಳಿ ವಿಜಯ್ ( 8) ಕೆ.ಎಲ್ ರಾಹುಲ್ ( 0) , ಕೊಹ್ಲಿ (54) ರಹಾನೆ ( 9) ಚೇತೇಶ್ವರ್ ಪೂಜಾರ ( 50) ವಿಕೆಟ್ ಕಳೆದುಕೊಂಡಿದೆ.
ಪಾರ್ಥಿವ್ ಪಟೇಲ್ (2) ಮತ್ತು ಹಾರ್ದಿಕ್ ಪಾಂಡ್ಯ (೦). ರನ್ ಗಳಿಸಿ ಆಡುತ್ತಿದ್ದಾರೆ.