ಕನ್ನಡ ಬಿಗ್ ಬಾಸ್ ಸೀಸನ್ 5ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 28ರ ಸಂಜೆ 7 ಗಂಟೆಗೆ ಫಿನಾಲೆ ಪ್ರಸಾರವಾಗಲಿದೆ.
ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ಶ್ರುತಿ ಮತ್ತು ನಿವೇದಿತಾ ಗೌಡ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಚಂದನ್ ಶೆಟ್ಟಿ ಗೆಲ್ಲಲಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಅಭಿಪ್ರಾಯ ಪಡುತ್ತಿದ್ದಾರೆ. ಚಂದನ್ ಪರವಾದ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿರೋ ಐದು ಮಂದಿ ಸ್ಪರ್ಧಿಗಳು ತಮ್ಮಲ್ಲಿ ಯಾರು ಗೆಲ್ಲಬಹುದು..ಯಾರು ಯಾವ ಸ್ಥಾನ ಪಡೆಯಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ ಪ್ರಕಾರ ಜೆಕೆ ವಿನ್ನರ್. ಎರಡನೇ ಸ್ಥಾನದಲ್ಲಿ ತಾವಿರುತ್ತಾರೆ. 3, 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ದಿವಾಕರ್, ನಿವೇದಿತಾ ಮತ್ತು ಶ್ರುತಿ ಇರ್ತಾರೆ.
ಜೆಕೆ ಪ್ರಕಾರ ಚಂದನ್ ಶೆಟ್ಟಿ ವಿನ್ನರ್. ಎರಡನೇ ಸ್ಥಾನದಲ್ಲಿ ತಾವು ಇನ್ನುಳಿದಂತೆ 3 ನೇ ಸ್ಥಾನದಲ್ಲಿ ದಿವಾಕರ್, ನಾಲ್ಕನೇ ಸ್ಥಾನದಲ್ಲಿ ಶ್ರುತಿ, ಐದನೇ ಸ್ಥಾನದಲ್ಲಿ ನಿವೇದಿತಾ ಗೌಡ ಇರ್ತಾರೆ.
ದಿವಾಕರ್ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಚಂದನ್ ಶೆಟ್ಟಿ, ಎರಡನೇ ಸ್ಥಾನದಲ್ಲಿ ಜಯರಾಂ ಕಾರ್ತಿಕ್ ಇರ್ತಾರೆ. 3ನೇ ಸ್ಥಾನದಲ್ಲಿ ಶ್ರುತಿ, 4ನೇ ಸ್ಥಾನದಲ್ಲಿ ನಿವೇದಿತಾ, 5ನೇ ಸ್ಥಾನದಲ್ಲಿ ತಾನಿರುವುದಾಗಿ ದಿವಾಕರ್ ಭವಿಷ್ಯ ನುಡಿದ್ದಾರೆ.
ಶ್ರುತಿ ಪ್ರಕಾಶ್ ಅವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಜೆಕೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಚಂದನ್ ಶೆಟ್ಟಿ ರನ್ನರ್ ಅಪ್ ಆಗ್ತಾರೆ. 3ನೇ ಸ್ಥಾನ ತನ್ನದಾಗಿರುತ್ತೆ. 5ನೇ ಸ್ಥಾನ ನಿವೇದಿತಾ ಅವರದ್ದಾಗಿರುತ್ತೆ.
ನಿವೇದಿತಾ ಗೌಡ ಪ್ರಕಾರ ಚಂದನ್ ಶೆಟ್ಟಿ ವಿನ್ನರ್. ಜೆಕೆ ರನ್ನರ್ ಅಪ್. 3ನೇ ಸ್ಥಾನದಲ್ಲಿ ತಾವೇ (ನಿವೇದಿತಾ) , 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ದಿವಕಾರ್ ಹಾಗೂ ಶ್ರುತಿ ಇರ್ತಾರೆ.
ಹೀಗೆ ಚಂದನ್ ಶೆಟ್ಟಿ ಮತ್ತು ಶ್ರುತಿ ಗೌಡ ಪ್ರಕಾರ ಜೆಕೆ ವಿನ್ನರ್. ಉಳಿದ ಮೂವರು ಚಂದನ್ ಶೆಟ್ಟಿ ವಿನ್ನರ್ ಎಂದಿದ್ದಾರೆ. ಜನಾಭಿಪ್ರಾಯವು ಸಹ ಚಂದನ್ ಶೆಟ್ಟಿ ಪರವಾಗಿಯೇ ಹೆಚ್ಚು ಕೇಳಿ ಬರುತ್ತಿದೆ.