ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತ ತಂಡ ಐಸಿಸ್ ಅಂಡರ್ 18 ವಿಶ್ವಕಪ್ ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ.
ಇಂದು ಕ್ವೀನ್ಸ್ ಟೌನ್ ನಲ್ಲಿ ನಡೆದ ಕ್ವಾಟರ್ ಫೈನಲ್ ಪಂದ್ಯದದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 265 ರನ್ ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಕೇವಲ 134 ರನ್ ಗಳಿಸಲಷ್ಟೇ ಶಕ್ತವಾಗಿ 131ರನ್ ಗಳಿಂದ ಸೋಲೊಪ್ಪಿಕೊಂಡಿತು.
ಇಂಡಿಯಾದ ಪರ ನಾಯಕ ಪೃಥ್ವಿ ಶಾ 40, ಶುಭ್ಮನ್ ಗಿಲ್ 86, ದೇಸಾಯ್ 34, ಅಭಿಷೇಕ್ ಶರ್ಮಾ 50ರನ್ ದಾಖಲಿಸಿದ್ದರು. ಬಾಂಗ್ಲಾ ಪರ ಕ್ವಾಜಿ ಓನಿಕ್ 3, ನಯೀಂ ಹಸನ್ ಮತ್ತು ಸೈಫ್ ಹಸನ್ ತಲಾ 2 ವಿಕೆಟ್ ಪಡೆದ್ರು.
ಬ್ಯಾಟಿಂಗ್ ನಲ್ಲಿ ಬಾಂಗ್ಲಾ ಪರ ಪಿನಕ್ ಗೋಷ್ 43, ಮೊಹಮ್ಮದ್ ನೈಮ್ 12, ಸೈಫ್ ಹಸನ್ 12 ಮತ್ತು ಆಸಿಫ್ ಹುಸೈನ್ 18 ರನ್ ಕೊಡುಗೆ ನೀಡಿದ್ರು. ಟೀಂ ಇಂಡಿಯಾದ ಪರ ನಾಗರ್ ಕೋಟಿ 3, ಶಿವಂ ಮವಿ, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದ್ರು.