ಫೆಬ್ರವರಿ 1ರಿಂದ ನಕಲಿ ಹೆಲ್ಮೆಟ್ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದು, ಐಎಸ್ ಐ ಮಾರ್ಕ್ ಇರೋ ಹೆಲ್ಮೆಟ್ ಅನ್ನು ಧರಿಸೋದು ಕಡ್ಡಾಯ ಎಂದು ಹೇಳಲಾಗಿತ್ತು.
ಆದರೆ , ನಕಲಿ ಹೆಲ್ಮೆಟ್ ಗಳನ್ನುಪತ್ತೆ ಕಚ್ಚೋದು ಸ್ವಲ್ಪ ಕಷ್ಟದ ಕೆಲಸವೇ ಆಗಿರೋದ್ರಿಂದ ಕಾರ್ಯಾಚರಣೆ ತಡವಾಗಲಿದೆ. ನಕಲಿ ಕಂಪನಿಗಳು ಸಹ ಐಎಸ್ ಐ ಮಾರ್ಕ್ ಅನ್ನು ಬಳಿಸಿಕೊಳ್ಳುತ್ತಿದ್ದು, ಯಾವುದು ನಕಲಿ ಹೆಲ್ಮೆಟ್ ಎಂದು ಸುಲಭದಲ್ಲಿ ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ವಿಶೇಷ ಕಾರ್ಯಾಚರಣೆ ಕಷ್ಟವಾಗಲಿದೆ.
ದ್ವಿಚಕ್ರ ವಾಹನ ಚಲಾಯಿಸುವಾಗ ಐಎಸ್ ಐ ಹೆಲ್ಮೆಟ್ ಧರಿಸೋದು ಕಡ್ಡಾಯ ಎಂಬ ನಿಯಮವುದ್ದು, ಅದನ್ನು ಹೇಗೆ ಪತ್ತೆ ಹಚ್ಚೋದು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದ್ದರಿಂದ ನಕಲಿ ಹೆಲ್ಮೆಟ್ ಬಗ್ಗೆ ಕಾರ್ಯಾಚರಣೆ ನಡೆಸುವ ಕುರಿತು ಪೊಲೀಸರಿಗೆ ಇನಷಷ್ಟು ದಿನ ಕಾಲಾವಕಾಶ ನೀಡಿರೋದಾಗಿ ಗೃಹಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.