ಭೂಲೋಕದಲ್ಲಿ ಶಿವ-ಪಾರ್ವತಿ ಮದುವೆಯಾಗಿದೆ. ಅದೂ ನಮ್ಮ ಬೆಂಗಳೂರಲ್ಲೇ…!
ಆಶ್ಚರ್ಯ ಆಗ್ತಿದೆ ಅಲ್ವಾ..? ಹ್ಞೂಂ, ಹಾಗಂತ ಶಿವ ಮತ್ತು ಪಾರ್ವತಿ ನಮ್ ಬೆಂಗಳೂರಿಗೆ ಬಂದಿಲ್ಲ. ಅವರ ವೇಷ ಧರಿಸಿ ನವ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ…!
ಈ ವಿಶೇಷ ಮದ್ವೆಗೆ ಸಾಕ್ಷಿಯಾಗಿದ್ದು ಬನ್ನೇರುಘಟ್ಟ…ವಧು ಕುಸುಮಾ ಪಾರ್ವತಿ ವೇಷದಲ್ಲಿ, ವರ ಲಕ್ಷ್ಮೀಶ್ ಶಿವನ ವೇಷದಲ್ಲಿ ಮದುವೆಯಾದ್ರು.
ಇವರ ಮದುವೆ ಮಾಡಿಸಿದ ಪುರೋಹಿತ ಋಷಿ ವೇಷವನ್ನು, ಹತ್ತಿರದ ಸಂಬಂಧಿಕರು ಬ್ರಹ್ಮ, ವಿಷ್ಣು, ಗಣೇಶ, ನಾರದ ಮತ್ತಿತರ ದೇವಾನು ದೇವತೆಗಳ ವೇಷ ಧರಿಸಿದ್ದರು.
ಲಕ್ಷ್ಮೀಶ್ ಅವರದ್ದು ಅರ್ಚಕರ ಕುಟುಂಬ. ಕಾಲಬೈರವೇಶ್ವರನ ಭಕ್ತರು. ತಂದೆಗೆ ತನ್ನ ಮಗನ ಮದುವೆಗೆ ಶಿವ ಪಾರ್ವತಿ ಕಲ್ಯಾಣದಂತೆ ಮಾಡ್ಬೇಕೆಂಬ ಆಸೆ…ಅದರಂತೆ ಮದುವೆ ಮಾಡಿದ್ದಾರೆ.