ಒಂದನ್ನು ಪಡೆಯಬೇಕು ಅಂದ್ರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತೆ. ಅಂದುಕೊಂಡಿದ್ದನ್ನು ಸಾಧಿಸಲು ಹಠ, ಛಲ, ಪ್ರಯತ್ನ, ಪರಿಶ್ರಮ ಎಷ್ಟು ಮುಖ್ಯವೋ ‘ತ್ಯಾಗ’ ಕೂಡ ಅಷ್ಟೇ ಪ್ರಮುಖವಾದುದು.
ಟಿವಿ5ನ ನಿರೂಪಕ ಶಿವಶಂಕರ್ ಮಾಧ್ಯಮ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕೆಂಬ ಕಾರಣಕ್ಕೆ ಕೈತುಂಬಾ ಸಂಬಳ ಸಿಗ್ತಿದ್ದ ಕೆಲ್ಸವನ್ನು ತ್ಯಾಗ ಮಾಡಿ ಬಂದವರು.
ಮೂಲತಃ ದಾವಣಗೆರೆಯವರಾದ ಶಿವಶಂಕರ್ ಬೆಳೆದಿದ್ದು ಬೆಂಗಳೂರಲ್ಲಿ. ತಂದೆ ನಾಗೇಂದ್ರ, ತಾಯಿ ನಂಜಮ್ಮ. ಅಕ್ಕ ಮಧುಮಾಲ, ಬಾವ ಮನೋಜ್, ಅಣ್ಣ ರಾಜೇಶ್, ಅತ್ತಿಗೆ ಪುಣ್ಯ. ಸೆವೆಂತ್ ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು, ಶ್ರೀ ಕಾವೇರಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ (ಬಿಕಾಂ) ಮಾಡಿದ್ದಾರೆ ಶಿವಶಂಕರ್.
ಪತ್ರಿಕೋದ್ಯಮದಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಶಿವಶಂಕರ್ ಅವರದ್ದಾಗಿತ್ತು. ಆದರೆ, ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳ ಬಗ್ಗೆ, ಪತ್ರಕರ್ತರ ಕಷ್ಟದ ಬಗ್ಗೆ ಕೇಳಿದ್ದ ಅಪ್ಪ-ಅಮ್ಮನಿಗೆ ಶಿವಶಂಕರ್ ಪತ್ರಿಕೋದ್ಯಮ ಆಯ್ಕೆ ಮಾಡಿಕೊಳ್ಳೋದು ಇಷ್ಟವಿರ್ಲಿಲ್ಲ. ಅದಕ್ಕಾಗಿ ಬಿಕಾಂ ಮುಗಿದ ಮೇಲೆ ಖಾಸಗಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ರು.
ಸುದ್ದಿ ಚಾನಲ್ ಗಳನ್ನು ನೋಡ್ತಾ ನೋಡ್ತಾ ಶಿವಶಂಕರ್ ಅವರ ತಂದೆ-ತಾಯಿಗೆ ಮಾಧ್ಯಮ ಕ್ಷೇತ್ರ ತಾವು ಅಂದುಕೊಂಡಂತೆ ಇಲ್ಲ, ಮಗನೂ ಟಿವಿ ಚಾನಲ್ ಗಳಲ್ಲಿ ಕೆಲಸ ಮಾಡಲಿ ಎಂಬ ಆಸೆ ಹುಟ್ಟುತ್ತೆ.
ಶಿವಶಂಕರ್ ಹತ್ತಾರು ಚಾನಲ್ ಗಳಿಗೆ ಅರ್ಜಿ ಹಾಕುತ್ತಾರೆ. ಖುದ್ದಾಗಿ ಭೇಟಿ ಮಾಡಿ ಕೆಲಸ ಕೊಡುವಂತೆ ಮನವಿ ಮಾಡ್ತಾರೆ. ಆದ್ರೆ, ಪತ್ರಿಕೋದ್ಯಮ ಪದವಿ ಅಥವಾ ಅದಕ್ಕೆ ಸಂಬಂಧಿಸಿದ ಯಾವ ಹಿನ್ನೆಲೆಯೂ ಇಲ್ಲ ಅಂತಾನೋ ಏನೋ ಯಾವ ಚಾನಲ್ ನಲ್ಲೂ ಕೆಲಸ ಸಿಗಲೇ ಇಲ್ಲ. ಸುಮಾರು ಎರಡು ವರ್ಷ ಕಂಡ ಕಂಡ ಟಿವಿ ಚಾನಲ್ ಗಳನ್ನು ಅಲೆದಿದ್ದೇ ಆಯ್ತು.
ಅದು 2015 ಬಿಎನ್ ಟಿವಿ ಎಂಬ ಹೊಸ ಚಾನಲ್ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಎಂಟ್ರಿಕೊಡ್ತು. ಬಹುತೇಕ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದ ಸಂಸ್ಥೆಯಲ್ಲಿ ಶಿವಶಂಕರ್ ಅವರಿಗೂ ಕೆಲಸ ಸಿಗ್ತು. ಆದರೆ, ಈ ಹಿಂದೆ ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಸಿಗ್ತಿದ್ದ ಸಂಬಳದ ಅರ್ಧಕ್ಕಿಂತಲೂ ಕಡಿಮೆ ಸಂಬಳ…!
ಸಂಬಳದ ಹಿಂದೆ ಹೋಗಲಿಲ್ಲ. ಇಷ್ಟದ ವೃತ್ತಿಯನ್ನು ಪ್ರೀತಿಸಿ ಸಿಕ್ಕ ಅವಕಾಶದ ಬೆನ್ನ ಹತ್ತಿದ್ರು ಶಿವಶಂಕರ್. ಮನೆಯಲ್ಲಿ ಯಾವ ಖರ್ಚಿಗೂ ಶಿವು ಅವರತ್ರ ಅಪ್ಪ-ಅಮ್ಮ ದುಡ್ಡು ಕೇಳಿಲ್ಲ. ಒಂದಲ್ಲ ಒಂದು ದಿನ ಬೆಳೆದೇ ಬೆಳೀತಾನೆ. ಒಳ್ಳೆಯ ಸಂಬಳವೂ ಸಿಗುತ್ತೆ ಎಂಬ ಭರವಸೆಯೊಂದಿಗೆ ಮಗನಿಗೆ ಬೆಂಬಲವಾಗಿ ನಿಂತ್ರು ಪೋಷಕರು.
ಬಿಎನ್ ಟಿವಿಯಲ್ಲಿ ವರದಿಗಾರಿಕೆ, ಸ್ಕ್ರಿಪ್ಟ್ ಬರೆಯುವುದು, ನಿರೂಪಣೆ ಎಲ್ಲದರ ತರಬೇತಿಯೂ ಸಿಕ್ತು. ಬಿಎನ್ ಟಿವಿ ಲಾಂಚ್ ಆದಾಗ ಮೊದಲ ಬುಲೆಟಿನ್ ಓದುವ ಸದಾವಕಾಶವೂ ಶಿವಶಂಕರ್ ಅವರದ್ದಾಗಿತ್ತು…!
ಸುಮಾರು 10 ತಿಂಗಳು ಬಿಎನ್ ಟಿವಿಯಲ್ಲಿ ಕೆಲಸ ಮಾಡಿ ನಂತರ ‘ಮಯೂರ’ ವಾಹಿನಿ ಸೇರಿದ್ರು. ಬಿಎನ್ ಟಿವಿ ಬಿಡುವಾಗ ಸ್ನೇಹಿತರಾದ ಮಹೇಶ್ ಮತ್ತು ಪೂರ್ಣಿಮಾ ಬಿಕ್ಕಿ ಬಿಕ್ಕಿ ಹತ್ತಿದ್ರಂತೆ. ಇದನ್ನು ಶಿವಶಂಕರ್ ಸ್ಮರಿಸಿಕೊಳ್ತಾರೆ.
ಶಿವಶಂಕರ್ ನಡೆಸಿಕೊಡ್ತಿದ್ದ ‘ಸುದ್ದಿ ಸ್ಪೋಟ’ ಯಶಸ್ವಿ ಕಾರ್ಯಕ್ರವಾಗಿತ್ತು. ಆರ್ ಟಿ ಒ ದಿನಕ್ಕೆ ಸುಮಾರು 1 ಸಾವಿರ ಡ್ರೈವಿಂಗ್ ಲೈಸೆನ್ಸ್ ನ ನೀಡುತ್ತಿರೋದ್ರ ಬಗ್ಗೆ ಮಾಡಿದ್ದ ಸುದ್ದಿ ಒಳ್ಳೆಯ ಹೆಸ್ರನ್ನು ತಂದುಕೊಡ್ತು. ಆರ್ ಟಿ ಒ ಒಬ್ಬರು ಮಯೂರ ಆಫೀಸ್ ಗೆ ಬಂದು ತಮ್ಮಿಂದಾದ ತಪ್ಪನ್ನು ತಿದ್ದಿಕೊಳ್ಳೋದಾಗಿ ಹೇಳಿದ್ರು. ಶಿವಶಂಕರ್ ಅವರನ್ನು ಭೇಟಿ ಮಾಡಿ ನಿಮ್ಮಿಂದ ನಮ್ಮ ತಪ್ಪಿನ ಅರಿವಾಗಿದೆ ಇನ್ಮುಂದೆ ಹೀಗಾಗದು ಎಂದು ಹೇಳಿದ್ದರಂತೆ…!
ಮಯೂರದಲ್ಲೊಂದು 10 ತಿಂಗಳು ಕೆಲಸ ಮಾಡಿದ ಬಳಿಕ `ಟಿವಿ5’ ಬಾಗಿಲು ತೆರೆಯಿತು. ಇಲ್ಲಿ ನ್ಯೂಸ್ ರೀಡರ್ ಆಗಿ ಕೆಲಸ ನಿರ್ವಹಿಸ್ತಿದ್ದಾರೆ. ಆಗಾಗಾ ರಿಪೋರ್ಟಿಂಗ್ ಗೆ ಫೀಲ್ಡ್ ಗೂ ಇಳಿತ್ತಿದ್ದಾರೆ.
ಹೆಚ್ಚಾಗಿ ನ್ಯಾಷನಲ್ ನ್ಯೂಸ್ ಚಾನಲ್ ಗಳನ್ನು ನೋಡುವ ಶಿವಶಂಕರ್ ಪ್ರತಿಯೊಬ್ಬ ನಿರೂಪಕರ ಪ್ರೆಸೆಂಟೇಷನ್ ಸ್ಟೈಲ್ ಅನ್ನು ಗಮನಿಸುತ್ತಿರುತ್ತಾರೆ. ಅವರುಗಳಿಂದ ಕಲಿಯುವುದನ್ನು, ತಾನು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದನ್ನು ಮಾಡ್ತಿರ್ತಾರೆ. ಇತಿಹಾಸ ಓದುವುದು ಶಿವಶಂಕರ್ ಅವರಿಗಿಷ್ಟ. ಎಲ್ಲಾ ಧರ್ಮಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಕಾಲೇಜು ದಿನಗಳಲ್ಲಿ ಚರ್ಚಾ ಸ್ಪರ್ಧೆ, ಭಾಷಣದಲ್ಲಿ ಭಾಗವಹಿಸುತ್ತಿದ್ದ ಶಿವಶಂಕರ್ ಅವರಿಗೆ ಸ್ನೇಹಿತರು, ಉಪನ್ಯಾಸಕರು ನೀನು ಪತ್ರಕರ್ತನಾಗಬಹುದು ಅಂತ ಹೇಳುತ್ತಿದ್ದರು. ಆದರೆ, ಅದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಧಾರವಾಹಿ, ಸಿನಿಮಾಗಳಿಂದ ಅವಕಾಶಗಳು ಬರುತ್ತಿವೆ ಆದರೆ, ಪತ್ರಿಕೋದ್ಯಮದ ಕಡೆಯೇ ಹೆಚ್ಚು ಗಮನಹರಿಸಿರುವ ಇವರು ಒಬ್ಬ ಪರಿಪೂರ್ಣ ಪತ್ರಕರ್ತನಾಗಿ ಬೆಳೆಯಬೇಕು ಎಂಬ ಕನಸಿನೊಂದಿಗೆ ಪಯಣ ಮುಂದುವರೆಸಿದ್ದಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ
67) 22 ಜನವರಿ 2018 : ಪ್ರಜ್ವಲ ಹೊರನಾಡು
ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
68) 25 ಜನವರಿ 2018 : ಮಂಜುನಾಥ್ ದಾವಣಗೆರೆ
ಜನವರಿ 26 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
69) 27 ಜನವರಿ 2018 : ರಕ್ಷತ್ ಶೆಟ್ಟಿ
70) 28 ಜನವರಿ 2018 : ಶಿವಶಂಕರ್