ಇಂದು ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ…!
ಸೌರವ್ಯೂಹದಲ್ಲಿ ಚಂದ್ರ ಚೋದ್ಯ ಸಂಭವಿಸಲಿದ್ದು, 152 ವರ್ಷಗಳ ಬಳಿಕ ಮೊದಲ ಬಾರಿಗೆ ಸೂಪರ್ ಮೂನ್, ಬ್ಲಡ್ ಮೂನ್, ಬ್ಲೂ ಮೂನ್ ಒಟ್ಟೊಟ್ಟಿಗೆ ಗೋಚರವಾಗ್ತಿದೆ.

ಈ ರಕ್ತಚಂದಿರ ಗ್ರಹಣದಿಂದಾಗಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ದರ್ಶನಕಲ ನಿಷೇಧಿಸಲಾಗಿದ್ದು, ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ.

ತಿರುಪತಿಯಲ್ಲಿ ರಾತ್ರಿ 9.30 ಬಳಿಕವೇ ತಿಮ್ಮಪ್ಪನ ದರ್ಶನಕ್ಕೆ ಅವಕಾಶ.ಧರ್ಮಸ್ಥಳದಲ್ಲಿ ಮಧ್ಯಾಹ್ನ 2.30ರಿಂದ ದರ್ಶನಕ್ಕೆ ತಡೆ ಇದ್ದು, ರಾತ್ರಿ 9.30ರಿಂದ 10.30ರವರೆಗೆ ಭಕ್ತರಿಗೆ ಮಂಜುನಾಥನ ದರ್ಶನ ಸಿಗಲಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 9 ಗಂಟೆಗೆ ದರ್ಶನ ಅವಕಾಶ ನಿಲ್ಲಿಸಿದ್ದು, ರಾತ್ರಿ 8.30 ರ ವರೆಗೆ ಅವಕಾಶ ಇರಲ್ಲ.

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಬೆಯ ಬಂದನ ಮಾಡಲಾಗಿದ್ದು, ಗ್ರಹಣ ಮುಗಿದ ಮೇಲೆ ಹೋಮ ಕೈಗೊಳ್ಳಲಾಗುತ್ತದೆ.
ಇಂತಹದ್ದೇ ವಿಸ್ಮಯ 1866 ಮಾರ್ಚ್ 31ರಂದು ಸಂಭಿಸಿತ್ತಂತೆ. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೆ ನಡೆದಿತ್ತು. ಇಂದು ಚಂದ್ರ ಎಂದಿಗಿಂತ ದೊಡ್ಡದಾಗಿ ಗೋಚರಿಸುತ್ತಾನೆ.


