ರಾಹುಲ್ ದ್ರಾವಿಡ್ ಹಾದಿಯಲ್ಲಿಯೇ ಅವರ ಶಿಷ್ಯರು ಹೆಜ್ಜೆ ಹಾಕುತ್ತಿದ್ದಾರೆ.ದ್ರಾವಿಡ್ ಎಂದರೆ ಕೇವಲ ಕ್ರಿಕೆಟ್ ಶಕ್ತಿ ಮಾತ್ರವಲ್ಲ. ಪ್ರಾಮಾಣಿಕತೆಗೆ ಇರುವ ಇನ್ನೊಂದು ಹೆಸರು.
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. ಫೆಬ್ರವರಿ 3 ರಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್ ನಲ್ಲಿ ಸೆಣಸಲಿದೆ.
ದ್ರಾವಿಡ್ ಶಿಷ್ಯರು ಹೀಗೆ ಉತ್ತಮ ಪ್ರದರ್ಶನ ನೀಡುತ್ತಿರುವುದರ ಜೊತೆಗೆ ಅವರ ಪ್ರಾಮಾಣಿಕತೆಯನ್ನೂ ಅಳವಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ ಭಾರತದ ಅನುಕುಲ್ ರಾಯ್ ಕೀಪರ್ ಗೆ ಕ್ಯಾಚ್ ನೀಡಿದ್ದರು. ಆದರೆ, ಅಂಪೈರ್ ಅನುಮಾನದಿಂದ ಔಟ್ ಎಂಬ ತೀರ್ಪು ನೀಡಲು ಹಿಂದೇಟು ಹಾಕಿದ್ರು.
VIDEO: From Rahul Dravid's School of Cricket.
The India U19 Head Coach played his cricket with utmost honesty and his boys displayed that quality in the semi-final against Pakistan. #U19CWC https://t.co/kKniKdMZS7
— BCCI (@BCCI) January 30, 2018
ಅಕುಲ್ ಅಂಪೈರ್ ತೀರ್ಪಿಗೆ ಕಾಯದೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು. ಆಗ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ರು…! ಇದನ್ನು ಬಿಸಿಸಿಐ ತನ್ನ ಪೇಜಿನಲ್ಲಿ ಹಂಚಿಕೊಂಡಿದೆ.