ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತಿರುವ ಟೀಮ್ ಇಂಡಿಯಾಕ್ಕೆ ಏಕದಿನ ಸರಣಿ ಅಗ್ನಿಪರೀಕ್ಷೆ ಇಂದಿನಿಂದ ಎದುರಾಗಲಿದೆ. 6 ಪಂದ್ಯಗಳ ಸರಣಿಯ ಮೋದಲ ಹಣಾಹಣಿ ಡರ್ಬನ್‍ನ ಕಿಂಗ್ಸ್ ಮೀಡ್ ಮೈದಾನದಲ್ಲಿ ಇಂದು ನಡೆಯಲಿದೆ.
ಸರಣಿಯನ್ನು 4-2ರಿಂದ ಗೆದ್ದರೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಂ.1 ಪಟ್ಟ ಅಲಂಕರಿಸಲಿದೆ. ಈ ಏಕದಿನ ಸರಣಿಯು 2009ರ ಐಸಿಸಿ ವಿಶ್ವಕಪ್ ನಿಟ್ಟಿನಲ್ಲೂ ಪ್ರಮುಖವಾಗಿದ್ದು ಸಿದ್ದತೆಯ ಮೊದಲ ಹೆಜ್ಜೆಯಾಗಿದೆ.
ತಂಡಗಳ ವಿವರ :
-ಭಾರತ
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಎಂ.ಎಸ್ ಧೋನಿ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.
-ದಕ್ಷಿಣ ಆಫ್ರಿಕಾ
ಫಾಪ್ ಡು ಪ್ಲೇಸಿಸ್(ನಾಯಕ), ಹಶೀಮ್ ಆಮ್ಲಾ, ಕ್ವಿಂಟನ್ ಡಿ ಕಾಕ್, ಜೆ.ಪಿ ಡ್ಯುಮಿನಿ, ಏಡನ್ ಮಕ್ರ್ರಮ್, ಇಮ್ರಾನ್ ತಾಹಿರ್, ಡೇವಿಡ್ ಮಿಲ್ಲರ್, ಮೋರ್ನೆ ಮಾರ್ಕೆಲ್, ಕ್ರಿಸ್ ಮೊರಿಸ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ಖಯೆಲಿಲೆ ಜೊಂಡೊ, ಆ್ಯಂಡಿಲ್ ಫೆಲುಕ್ವಾಯೊ, ತಬ್ರೈಜ್ ಶಮ್ಸಿ.
ಪಂದ್ಯ ಆರಂಭ : ಸಂಜೆ 4.30ಕ್ಕೆ(ಭಾರತೀಯ ಕಾಲಮಾನ)