ವಿಶ್ವ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಯುವಪಡೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದು, ಈ ಗೆಲುವಿನ ಸಂಭ್ರಮ ಇನ್ನೂ ದೇಶದಾದ್ಯಂತ ಮನೆಮಾಡಿದೆ.
ಭಾರತಕ್ಕೆ ನಾಲ್ಕನೇ ಅಂಡರ್ 19 ವಿಶ್ವಕಪ್ ತಂದುಕೊಟ್ಟ ಗುರು ದ್ರಾವಿಡ್ ಗೆಲುವಿನ ಸಂಭ್ರಮದಿಂದಾಚೆಗೆ ಬೇಜಾರಿನಲ್ಲಿದ್ದಾರೆ. ಕಾರಣ ಬಹುಮಾನ..!
ಹೌದು, ವಿಶ್ವ ವಿಜೇತ ಟೀಂ ಇಂಡಿಯಾಕ್ಕೆ ಬಿಸಿಸಿಐ ಬಹುಮಾನ ಘೋಷಿಸಿದೆ. ಈ ಬಹುಮಾನ ವಿಚಾರವಾಗಿ ರಾಹುಲ್ ಬೇಸರಗೊಂಡಿದ್ದಾರೆ. ಜೊತೆಗೆ ಬಿಸಿಸಿಐಯನ್ನು ಪ್ರಶ್ನಿಸಿದ್ದಾರೆ ಸಹ.
ವಿಜೇತ ತಂಡದ ಕೋಚ್ ಆಗಿರುವ ದ್ರಾವಿಡ್ ಅವರಿಗೆ 50 ಲಕ್ಷ ರೂ, ಸಹಾಯಕ ಸಿಬ್ಬಂದಿಗೆ 20ಲಕ್ಷ ರೂ ಮತ್ತು ಆಟಗಾರರಿಗೆ 30ಲಕ್ಷ ರೂ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
ಎಲ್ಲರೂ ಸಮಾನ ಶ್ರಮವಹಿಸಿರುವುದರಿಂದ ಎಲ್ಲಾ ಸಿಬ್ಬಂದಿಗೂ ಒಂದೇ ರೀತಿಯ ಬಹುಮಾನ ನೀಡಬೇಕು ಎಂಬುದು ದ್ರಾವಿಡ್ ಬಯಕೆಯಾಗಿದೆ.