ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ದೇವಿ ವಿಗ್ರಹಕ್ಕೆ ಚೂಡಿದಾರ್ ತೊಡಿಸಿದ್ದಕ್ಕೆ ಇಬ್ಬರು ಅರ್ಚಕರು ಅಮಾನತುಗೊಂಡಿದ್ದಾರೆ.
ಸುಮಾರು 1ಸಾವಿರ ವರ್ಷಗಳ ಇತಿಹಾಸವಿರುವ ಮಯೂರನಾಥ ಸ್ಚಾಮಿ ದೇವಾಲಯದ ಅಬಯಂಬೈಗೈ ದೇವತೆ ವಿಗ್ರಹಕ್ಕೆ ಸೀರೆ ಅಲಂಕಾರವನ್ನು ಮಾತ್ರ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅರ್ಚಕರಿಬ್ಬರು ಚೂಡಿದಾರ್ ತೊಡಿಸಿದ್ದರು. ಆದ್ದರಿಂದ ಆಡಳಿತ ಮಂಡಳಿ ಆ ಇಬ್ಬರು ಅರ್ಚಕರನ್ನು ಅಮಾನತುಗೊಳಿಸಿದೆ.