ಸಾಯಲು ಮನಸ್ಸಿರೋರು ಸಂಘ ಪರಿವಾರ ಸೇರಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸುರತ್ಕಲ್ ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ನೀಡಿದ್ದಾರೆ.
ಕಾರ್ಕಳದಲ್ಲಿ ನಡೆದ ಪ್ರತಿಭಟನೆ ವೇಳೆ ಕುಳಾಯಿ ಅವರು ತುಳುವಿನಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಾ, ಯಾರಿಗೆಲ್ಲಾ ಸಾಯಲು ಮನಸ್ಸಿದೆ ಹಾಗೂ ದುಡಿಯಲು ಮನಸ್ಸಿಲ್ಲದವರು ಸಂಘ ಪರಿವಾರ ಸೇರಿ. ಕೊಲೆ ಮಾಡಿ ಬಂದ್ರೆ ಸಾಕು ಜೈಲಿನಲ್ಲಿ ನಿಮಗೆ ಅನ್ನ ಸಿಗುತ್ತೆ ಎಂದಿದ್ದಾರೆ.