ಬೆಂಗಳೂರಿಗರಿಗೆ ಡಬಲ್ ಸಂಕಷ್ಟ ಎದುರಾಗಿದೆ…! ಒಂದೆಡೆ ಮೆಟ್ರೋ ಸ್ಥಗಿತ. ಇನ್ನೊಂದೆಡೆ ಅರ್ಧ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹೌದು, ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ರಾತ್ರಿ 11ಗಂಟೆವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ತುರ್ತು ಟ್ರ್ಯಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.

ಆರ್ ವಿ ರಸ್ತೆ ಸ್ಟೇಷನ್ ನಿಂದ ಯೆಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತವಾಗಲಿದ್ದು, ಜೆಪಿ ನಗರ ಹಾಗೂ ಬನಶಂಕರಿ ಕಡೆಗೆ ಪ್ರಯಾಣಿಸುವವರಿಗೆ ಮೆಟ್ರೋ ಸೇವೆ ಇರಲ್ಲ. ಮೆಟ್ರೋ ಸೇವೆ ಇಲ್ಲದ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಇನ್ನೊಂದೆಡೆ ಇಂದಿನಿಂದ 5 ದಿನಗಳ ಕಾಲ ಅಂದರೆ, ಫೆಬ್ರವರಿ 28ರವೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸರ್ಜಾಪುರ , ಎಚ್.ಎಸ್ ಆರ್ ಲೇಔಟ್, ಬೊಮ್ಮನಹಳ್ಳಿ, ಹೊಸೂರು ರೋಡ್ , ಐಟಿಐ ಲೇಔಟ್ , ಬೆಳ್ಳಂದೂರು ಮೊದಲಾದ ಭಾಗಗಳು ಸೇರಿದಂತೆ ಅರ್ಧ ಬೆಂಗಳೂರಿಗೆ ವಿದ್ಯುತ್ ವ್ಯತ್ಯಯವಾಗಲಿದೆ…!







