ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಪುರಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳೆರಡೂ ಅಧಿಕಾರಯುತ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿವೆ.
ನಿನ್ನೆ ಕೇಪ್ ಟೌನ್ ನಲ್ಲಿ ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದ ಗೆಲುವಿನೊಂದಿಗೆ ಭಾರತ ಮಹಿಳೆಯರು ಆತಿಥೇಯ ದ. ಆಫ್ರಿಕಾವನ್ನು 54 ರನ್ ಗಳ ಅಂತರದಲ್ಲಿ ಬಗ್ಗು ಬಡಿದು 3-1ರಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡಿತು. ಇದು 5 ಪಂದ್ಯಗಳ ಟಿ20 ಸರಣಿಯಾಗಿತ್ತು. 4ನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಮಹಿಳಾ ಕ್ರಿಕೆಟ್ ಪಂದ್ಯದ ನಂತರ ಇದೇ ಮೈದಾನದಲ್ಲಿ ನಡೆದ ಪುರುಷರ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 7 ರನ್ ಗಳ ಜಯದೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡಿತು.
ಭಾರತ ಮಹಿಳಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಭಾರತ ಪುರುಷರ ತಂಡ 6 ಪಂದ್ಯಗಳ ಏಕದಿನ ಸರಣಿಯನ್ನು 5-1ರಿಂದ ಗೆದ್ದಿತ್ತು. ಈಗ ಎರಡೂ ತಂಡಗಳು ಟಿ20ಸರಣಿಯನ್ನೂ ಗೆದ್ದಿವೆ.








