ಮದುಮಗನಿಗೆ ಸ್ನೇಹಿತರು ಕೊಳೆತ ಟೊಮೆಟೊ, ಮೊಟ್ಟೆ ಹಾಗೂ ಸಗಣಿ ನೀರಿನ ಸ್ನಾನ ಮಾಡಿಸಿ ಕೀಟಲೆ ಮಾಡುವ ಮೂಲಕ ಸ್ನೇಹಿತರು ಸಾಕಪ್ಪ ಸಾಕು ಅನಿಸುವಂತೆ ಮಾಡಿದ್ದಾರೆ…!
ಈ ತಮಾಷೆ, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಂಟ್ವಾಳದ ರಾಯಿ ನಿವಾಸಿ ರಾಕೇಶ್ ಮದುವೆ. ಮಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಅವರ ಮದುವೆ ಸಂಭ್ರಮ ಊರು ರಾಯಿಯಲ್ಲಿ ಮನೆಮಾಡಿತ್ತು. ಫೆಬ್ರವರಿ 19ರಂದು ಮದುಮಗ ರಾಕೇಶ್ ಮೆಹಂದಿ ಶಾಸ್ತ್ರಕ್ಕೆ ತಯಾರಾಗಿದ್ದರು.
ಈ ವೇಳೆ ಬಂದ ಗೆಳೆಯರ ಬಳಗ ಕೊಳೆತ ಟೊಮೆಟೋ, ಮೊಟ್ಟೆ, ಸಗಣಿ ನೀರನ್ನು ಸುರಿದಿದ್ದಾರೆ. ನಂತರ ಮದುವೆ ದಿನ ತರಕಾರಿಗಳನ್ನು ತಂದು ಹೊರೆಕಾಣಿಯಂತೆ ನೀಡಿದ್ದಾರೆ…! ಹೀಗೆ ಸ್ನೇಹಿತರು ಕುಚೇಷ್ಠೆ ಮಾಡುತ್ತಾ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.