ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಮುರಿದಿದ್ದಾರೆ.
ವಿಜಯ ಹಾಜಾರೆ ಟ್ರೋಫಿಯಲ್ಲಿ ಮಿಂಚಿನ ಆಟ ಆಡಿದ ಮಯಾಂಕ್ ದಾಖಲೆ ನಿರ್ಮಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ 723 ರನ್ ಕಲೆ ಹಾಕುವ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಸಚಿನ್ 2003ರ ವಿಶ್ವಕಪ್ ನಲ್ಲಿ ಒಟ್ಟು 623ರನ್ ಗಳಿಸಿದ್ದರು. ಇದರೊಂದಿಗೆ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯ ಸಚಿನ್ ಅವರದ್ದಾಗಿತ್ತು.
ಈ ಬಾರಿ ವಿಜಯ್ ಅಜಾರೆ ಟ್ರೋಫಿಯಲ್ಲಿ ಕ್ರಮವಾಗಿ 109, 84, 28, 102, 89, 140, 81 ಮತ್ತು ಇಂದು ನಡೆದ ಫೈನಲ್ ನಲ್ಲಿ 90 ರನ್ ಗಳಿಸುವುದರೊಂದಿಗೆ ಮಯಾಂಕ್ 723ರನ್ ಗಳೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ.