ಇಂದಿನ ಟಾಪ್ 10 ಸುದ್ದಿಗಳು..! 11.12.2015

Date:

ಐಸಿಸ್ ಜೊತೆ ನಂಟಿನ ಶಂಕೆ : ಕಲಬುರಗಿ ವ್ಯಕ್ತಿ ಬಂಧನ

ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಕಲಬುರಗಿಯ ಮೊಹಮ್ಮದ್ ಸಿರಾಜುದ್ದೀನ್ ಎಂಬ ವ್ಯಕ್ತಿಯನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಐಒಸಿನ ಮಾರುಕಟ್ಟೆ ವಿಭಾಗದ ಅಧಿಕಾರಿ ಆಗಿರುವ ಸಿರಾಜುದ್ಧಿನ್ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದು ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಮತ್ತು ದೇಶದಲ್ಲಿ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಈತನನ್ನು ರಾಜಸ್ಥಾನದ ಉಗ್ರ ನಿಗ್ರಹ ಪಡೆ ಹಾಗೂ ವಿಶೇಷ ಕಾರ್ಯಪಡೆ ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಶಿವಾಜಿನಗರದ ಕಾರ್ಪೊರೇಟರ್ ಮಗನಿಂದ ಹಲ್ಲೆ
ಬೆಂಗಳೂರಿನ ಶಿವಾಜಿನಗರದ ಕಾಂಗ್ರೆಸ್ ಕಾರ್ಪೊರೇಟರ್ ಫರೀಧಾ ಅವರ ಪುತ್ರ ಜಮಾಮ್ ಕ್ಷುಲ್ಲಕ ಕಾರಣಕ್ಕೆ ಮೂವರಿಗೆ ಚೂರಿ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವಾಜಿನಗರದ ಸವೇರಾ ಹೋಟೆಲ್ಗೆ ಹೋದಾಗ ಜುಮಾಮ್ ನನ್ನು ಗುರಾಯಿಸಿದ್ದರಿಂದ ಆತ ತನ್ನ ಸ್ನೇಹಿತರನ್ನು ಕರೆಸಿ ಗುರಾಯಿಸಿದ ಮೂವರಿಗೆ ಇರಿದು ಪರಾರಿ ಆಗಿದ್ದಾರೆಂದು ತಿಳಿದು ಬಂದಿದೆ. ನವೆಂಬರ್ 23ರಂದೇ ಈ ಘಟನೆ ನಡೆದಿದ್ದು ಇರಿತಕ್ಕೊಳಗಾಗಿರೋ ರಾಹುಲ್, ದಿಲೀಪ್, ವಿನೋದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾಗುತ್ತಿರೋ ವ್ಯಕ್ತಿಯೊಬ್ಬನನ್ನು ಬಂಧಿಸಿರೋ ಶಿವಾಜಿನಗರ ಪೊಲೀಸರು, ತಲೆ ಮರೆಸಿಕೊಂಡಿರುವ ಜಮಾಮ್ಗೆ ಹುಡುಕಾಡುತ್ತಿದ್ದಾರೆ.

ಉಗ್ರ ಡೇವಿಡ್ ಹೆಡ್ಲಿಯನ್ನು ಕ್ಷಮಿಸಿದ ಮುಂಬೈ ಕೋರ್ಟ್..!

26/11ರ ಮುಂಬೈ ದಾಳಿಗೆ ಉಗ್ರರಿಗೆ ವೇದಿಕೆ ನಿರ್ಮಿಸಿಕೊಟ್ಟು ಈಗ ಅಮೇರಿಕಾ ಜೈಲಿನಲ್ಲಿರುವ ಪಾಕ್ ಮೂಲದ ಲಷ್ಕರ್ ಉಗ್ರ ಡೇವಿಡ್ ಹೆಡ್ಲಿಗೆ ಮುಂಬೈನ ವಿಶೇಷ ನ್ಯಾಯಾಲಯ ಕ್ಷಮಾದಾನ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿ ಮಾಡಿದೆ.
ಅಮೆರಿಕಾದ ಜೈಲಿನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ನ್ಯಾಯಲಯದ ಮುಂದೆ ವಿಚಾರಣೆಗೆ ಹಾಜರಾದ ಡೆಡ್ಲಿ “ನಾನು ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದೆ ಎಮದು ಒಪ್ಪಿಕೊಳ್ಳುತ್ತೇನೆ. ಕೋರ್ಟ್ ನನಗೆ ಕ್ಷಮಾದಾನ ನೀಡಿದರೆ ನಾನು ಸಾಕ್ಷಿ ಹೇಳಲು ಸಿದ್ದ ಎಂದು ಹೆಡ್ಲಿ ಕೇಳಿಕೊಂಡಿದ್ದಾನೆ. ಅವನ ಶರತ್ತಿಗೆ ಒಪ್ಪಿ, ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಹೆಡ್ಲಿ ಕೋರಿಕೆಯನ್ನು ಪ್ರಾಸಿಕ್ಯೂಶನ್ ಒಪ್ಪಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ..!
ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವವರು ತಮ್ಮಿಷ್ಟದ ಊಟವನ್ನು ಮೊದಲೇ ಆರ್ಡರ್ ಮಾಡಿ ತರಿಸಿಕೊಂಡು ಎಷ್ಟು ಬೇಕೋ ಅಷ್ಟು ತಿನ್ನಬಹುದು..!
`ಆರ್ಡರ್ ಟು ಚೆಫ್’ ಹೆಸರಲ್ಲಿ ಯೋಜನೆ ಕಾರ್ಯಗತವಾಗಲಿದ್ದು, ಹೊಸ ಯೋಜನೆಗೆ ತಾಜ್ ಸಂತ್ಸ್ ಹಾಗೂ ಸ್ಕೈ ಗವರ್ನಮೆಂಟ್ ಸಹಕಾರ ಪಡೆದುಕೊಳ್ಳಲಿದೆ. ಮೊದಲಿಗೆ ಪ್ರೀಮಿಯಂ ದರ್ಜೆಯ ಪ್ರಯಾಣಿಕರಿಗೆ ಊಟ ನೀಡಲಿದೆ.
ದೆಹಲಿ-ಚಿಕಾಗೂ, ದೆಹಲಿ-ನ್ಯೂಯಾರ್ಕ್ ಹಾಗೀ ದೆಹಲಿ-ಲಂಡನ್ ಮಾರ್ಗಕ್ಕೆ ಸದ್ಯದ ಮಟ್ಟಿಗೆ ಈ ಸೇವೆ ನೀಡಲಾಗುತ್ತಿದೆ.

ರೈಫಲ್ ಶೂಟರ್ ಪುಷ್ಪಾಗೆ ಕೊನೆಗೂ ಸಿಕ್ತು ಉದ್ಯೋಗ..!
ಹಣಕಾಸು ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ಫುಡ್ ಅಂಗಡಿಯನ್ನು ತೆರೆದಿದ್ದ ರಾಜ್ಯ ಮಟ್ಟದ ರೈಫಲ್ ಶೂಟರ್ ಪುಷ್ಪಾ ಗುಪ್ತಾರಿಗೆ ಗುಜರಾತ್ ಸ್ಟೇಟ್ ಫರ್ಟಿಲೈಸರ್ ಕಂಪನಿ ಉದ್ಯೋಗ ನೀಡಲು ನಿರ್ಧರಿಸಿದೆ.
21 ವರ್ಷದ ಗುಪ್ತಾರವರು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 8 ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಆಗ್ಬೇಕೆಂಬ ಕನಸು ಕಂಡಿರುವ ಇವರು ಹಣಕಾಸಿನ ಸಮಸ್ಯೆಯಿಂದ ಕಳೆದ ವರ್ಷ ಫೆಬ್ರವರಿಯಲ್ಲಿ ಚೈನೀಸ್ ತಿನಿಸುಗಳ ಅಂಗಡಿಯನ್ನು ತೆರೆದಿದ್ದರು. ಇವರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜಿಎಸ್ಎಫ್ಸಿ ಗುಮಾಸ್ತೆ ಕೆಲಸ ನೀಡಲು ಮುಂದಾಗಿದೆ.

ಕೊಲ್ಕತ್ತಾ ಗ್ಯಾಂಗ್ ರೇಪ್ : 3 ಅತ್ಯಾಚಾರಿಗಳಿಗೆ 10 ವರ್ಷ ಜೈಲು

2012ರಲ್ಲಿ ಕೋಲ್ಕತಾದ ಪಾರ್ಕ್ ಸ್ಟ್ರೀಟ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಕೋರ್ಟ್ ತಲಾ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ಕೋಲ್ಕತಾ ಸೆಷನ್ಸ್ ಕೋರ್ಟ್, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಐಸಿಸಿ ಟಿ-20 ವಿಶ್ವಕಪ್ ಕದನ : ಐಸಿಸಿಯಿಂದ ವೇಳಾಪಟ್ಟಿ ಬಿಡುಗಡೆ

ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಯುವ ಯಾವುದೇ ಖಾತರಿ ಇಲ್ಲದಿದ್ದರೂ, ಮುಂದಿನ ವರ್ಷ ಆರಂಭಕ್ಕೆ ನಡೆಯುವ ಐಸಿಸಿ ವಿಶ್ವಕಪ್ ಟ್ವಂಟಿ-ಟ್ವಂಟಿ ಪಂದ್ಯದಲ್ಲಿ ಭಾರತ-ಪಾಕ್ ರಾಷ್ಟ್ರಗಳು ಜೊತೆಯಾಗಿ ಆಡುವುದನ್ನಂತೂ ವೀಕ್ಷಿಸುವ ಅದೃಷ್ಟ ಕ್ರಿಕೆಟ್ ಪ್ರೇಮಿಗಳಿಗಿದೆ. ಭಾರತ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆದಿವೆ. ಮಾರ್ಚ್ 19ರಂದು ಇಂಡೋ-ಪಾಕ್ ಪಂದ್ಯ ನಡೆಯಲಿದೆ. ಇನ್ನು ಗ್ರೂಪ್ ನಲ್ಲಿ ಬಲಾಡ್ಯ ತಂಡಗಳೆನಿಸಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹಾಗೂ ಅರ್ಹತಾ ಸುತ್ತಿನ ತಂಡವೊಂದು ಸ್ಥಾನ ಪಡೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಕಾರು ಬ್ಯಾನ್..?

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸುವ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಟಿ. ಎಸ್.ಠಾಕೂರ್ ನೇತೃತ್ವದ ಪೀಠ ಮುಂದಿನ ಮಂಗಳವಾರ ವಿಚಾರಣೆ ನಡೆಸಲಿದೆ.
ಫೆಡ್ ರೇಟ್ ಏರಿಕೆ ಭೀತಿ, ಷೇರು ಪೇಟೆ ಕುಸಿತ

ಮುಂದಿನ ವಾರ ಅಮೆರಿಕಾದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇಕಡಾ 0.25ರಷ್ಟು ಹೆಚ್ಚಿಸಬಹುದೆಂಬ ನಿರೀಕ್ಷೆಯನ್ನು ಆರ್ ಬಿಐ ಪ್ರಕಟಿಸಿದ್ದರಿಂದ ಬಂಡವಾಳದ ಹೊರ ಹರಿವು ಹೆಚ್ಚಬಹುದೆಂಬ ಆತಂಕದ ಕಾರಣದಿಂದಾಗಿ ಮುಂಬೈ ಷೇರು ಪೇಟೆ ಇಂದಿನ ವಹಿವಾಟು 207.89 ಅಂಕಗಳ ನಷ್ಟದೊಂದಿಗೆ, 25,044.43 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಹಿಟ್ ಅಂಡ್ ರನ್ ಪ್ರಕರಣದ ನನ್ನ ತಂದೆಯನ್ನು ಕೊಂದವರು ಯಾರು..?

ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಸಲ್ಮಾನ್ ಅಮಾಯಕ ಎಂಬುದನ್ನೂ ಕೂಡ ಒಪ್ಪಿಕೊಳ್ಳುತ್ತೇನೆ. ಹಾಗಾದರೆ ನನ್ನ ತಂದೆಯನ್ನು ಕೊಂದವರು ಯಾರು..? ಎಂದು 2002ರ ಸೆಪ್ಟೆಂಬರ್ನಲ್ಲಿ ಸಂಭವಿಸಿದ ಹಿಟ್ ಅಂಡ್ ರನ್ ಘಟನೆಯಲ್ಲಿ ಸಾವನ್ನಪ್ಪಿದ ನೂರುಲ್ಲಾ ಖಾನ್ ಅವರ ಮಗ ಫಿರೋಜ್ ಖಾನ್ ಕೇಳಿದ್ದಾರೆ. 13 ವರ್ಷಗಳ ಕಾಲ ತನಿಖೆ ನಡೆಸಿದರೂ ತನ್ನ ತಂದೆಯ ಸಾವಿಗೆ ಕಾರಣವಾದವರು ಯಾರೆಂಬುದಕ್ಕೆ ಉತ್ತರ ಸಿಗದಿರುವುದರ ಬಗ್ಗೆ ಫಿರೋಜ್ ಖಾನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...