ಪತಿ ಇಲ್ಲದ ವೇಳೆ ಮಾವನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಸೊಸೆ ಆತನನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಪಿಲಿಬಿಟ್ ನಲ್ಲಿ ನಡೆದಿದೆ.
ಮಗ ಕೆಲಸಕ್ಕೆ ಹೋದಾಗ ತನ್ನ 26 ವರ್ಷದ ಸೊಸೆಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಪಾಪಿ ಮಾವ ಕೊಲೆಯಾದವ.
ಮಗ ಕೆಲಸಕ್ಕೆ ಹೋದಾಗ ಶುಕ್ರವಾರ ಮತ್ತು ಶನಿವಾರ ಎರಡು ದಿನ ಸತತವಾಗಿ ಮಾವ ಸೊಸೆ ಮೇಲೆ ಅತ್ಯಾಚಾರ ಎಸಗಿದ್ದಾನೆ .
ಭಾನುವಾರ ತಂದೆ ತನ್ನ ಪತ್ನಿಯ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡ ಮಗ ಕುಪಿತಗೊಂಡಿದ್ದಾನೆ. ಈ ವೇಳೆ ಸೊಸೆ ಮಾವನಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಪತಿಯೂ ಆಕೆಗೆ ಸಾಥ್ ನೀಡಿದ್ದು, ಕೊಲೆಯ ಬಳಿಕ ಪತಿ-ಪತ್ನಿ ಇಬ್ಬರೂ ಮಾಧೋತಂದ ಪೊಲೀಸರಿಗೆ ಶರಣಾಗಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.