ಬಾಲಿವುಡ್ ನಟಿ ಸನ್ನಿಲಿಯೋನ್ ಈಗ ಮತ್ತಿಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. ಕಳೆದ ವರ್ಷ ಹೆಣ್ಣುಮಗುವೊಂದನ್ನು ದತ್ತುಪಡೆದಿದ್ದ ಸನ್ನಿ ಲಿಯೋನ್ ಮತ್ತು ವೆಬರ್ ದಂಪತಿ ಇದೀಗ ಮತ್ತೆ ಇಬ್ಬರು ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ.
ಅಶೆರ್ ಸಿಂಗ್ ವೆಬರ್ ಮತ್ತು ನೋವಾಸಿಂಗ್ ವೆಬರ್ ಸನ್ನಿ ಕುಟುಂಬ ಸೇರಿದ ಮಕ್ಕಳು. ಇದು ದೇವರಿಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನು ಹೊಂದೋ ಅವಕಾಶ ಸಿಗುತ್ತೆ ಅಂತ ಅಂದುಕೊಂಡಿರ್ಲಿಲ್ಲ. ನಮಗೆ ತುಂಬಾ ಖುಷಿ ಆಗಿದೆ. ನಮ್ಮ ಜೀವನದಲ್ಲಿ ಮೂರು ಪವಾಡಗಳನ್ನು ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬದ ಸಂಪೂರ್ಣವಾಗಿದೆ ಎಂದಿದ್ದಾರೆ ಸನ್ನಿಲಿಯೋನ್.
ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್ ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋಗಿದ್ದೆವು. ಬಾಡಿಗೆ ತಾಯಿಯ ಮೂಲಕ ಅಶೆರ್ ಮತ್ತು ನೋವಾ ಜನಿಸಿದ್ದಾರೆ ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.
Say Hello to Noah and Asher Weber !!! #family @SunnyLeone :))))????❤️. The next chapter of life !!! Karen, Nisha , Noah , Asher Me pic.twitter.com/NymfNfSRoH
— Daniel Weber (@DanielWeber99) March 5, 2018