ಹೌದು ನಾಳೆ ಬಹಿರಂಗವಾಗಲಿದೆ ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ. ಹೀಗಂತ ರಿಯಲ್ ಸ್ಟಾರ್ ಉಪೇಂದ್ರ ಅವರೇ ಟ್ವೀಟ್ ಮಾಡಿದ್ದಾರೆ…!
ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಉಪ್ಪಿಯ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಲ್ಲಿ ಬಿರುಕು ಉಂಟಾಗಿದೆ. ಪಕ್ಷ ಕಟ್ಟಿದ ಉಪೇಂದ್ರ ಅವರೇ ಪಕ್ಷದಿಂದ ಹೊರಬರುವ ಲಕ್ಷಣಗಳು ಕಂಡು ಬರುತ್ತಿವೆ.
ಪಕ್ಷದ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಎದುರಾಗಿದ್ದು ಉಪ್ಪಿ ಚುನಾವಣೆಗೆ ಮುನ್ನವೇ ಕೆಪಿಜೆಪಿ ತ್ಯಜಿಸಲಿದ್ದಾರೆ ಎನ್ನಲಾಗುತ್ತಿದೆ.
ಉಪ್ಪಿ ಬಿಜೆಪಿ ಸೇರಿಕೊಳ್ಳುತ್ತಾರೆ. ಬಿಜೆಪಿ ನಾಯಕರೊಂದಿಗೆ ಮಾತಾನಾಡಿದ್ದು ಪಕ್ಷ ಸೇರೋದು ಬಹುತೇಕ ಖಚಿತ ಎಂಬ ಸುದ್ದಿ ಹೊರಬಂದಿದೆ.
ನಾಳೆ ಉಪ್ಪಿ ಈ ಬಗ್ಗೆ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಲಿದ್ದಾರೆ. ಇಂದು ಟ್ವೀಟ್ ನಲ್ಲಿ ಉಪ್ಪಿ ‘ ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6ನೇ ತಾರೀಖು ಬಹಿರಂಗವಾಗುತ್ತದೆ. ದಯವಿಟ್ಟು ಕಾದು ನೋಡಿ’ ಎಂದಿದ್ದಾರೆ.
ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ. ಉಪೇಂದ್ರ.
— Upendra (@nimmaupendra) March 3, 2018