ವಿದ್ಯುತ್ ಶಾಕ್ ನಿಂದ ಹೆಣ್ಣಾನೆಯೊಂದು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಬೆಡಸಗಾಂವ ಬಳಿಯ ಕಾಳೇಬೈಲ್ ಎಂಬಲ್ಲಿ ನಡೆದಿದೆ.
ಸುಮಾರು 10ವರ್ಷ ವಯಸ್ಸಿನ ಆನೆ ಕಾಳೇಬೈಲ್ ನಲ್ಲಿ ಆಹಾರ ಸೇವಿಸುತ್ತಿದ್ದಾಗ ಹೈಟೆನ್ಶನ್ ವಿದ್ಯುತ್ ತಂತಿ ಹಸಿ ಗಿಡಕ್ಕೆ ತಾಗಿದ್ದರಿಂದ ವಿದ್ಯುತ್ ಶಾಕ್ ಹೊಡೆದು ಈ ದುರ್ಘಟನೆ ಘಟಿಸಿದೆ. ಕೆಲವೇ ದಿನಗಳ ಹಿಂದೆ ಇದೇ ಭಾಗದಲ್ಲಿ ಗರ್ಭಿಣಿ ಆನೆಯೊಂದು ಸಾವನ್ನಪ್ಪಿತು. ಈಗ ಮತ್ತೊಂದು ಆನೆ ಬಲಿಯಾಗಿದೆ.