ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ‘ಟಗರು’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ಸಿನಿಮಾವನ್ನು ಮೆಚ್ಚಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದು ನಿಮಗೇ ಗೊತ್ತಿದೆ. ಕಿಚ್ಚನ ಟ್ವೀಟಿನ ಸಾರಾಂಶವನ್ನು ನಿನ್ನೆ ನೀವಿಲ್ಲಿ ಓದಿದ್ದೀರಿ….
ಕಿಚ್ಚ ಕೇವಲ ಟ್ಟೀಟ್ ನಲ್ಲಿ ಟಗರು ಬಗ್ಗೆ ಮಾತಾಡಿಲ್ಲ. ಸ್ವತಃ ಶಿವಣ್ಣ ಅವರೊಡನೆ ಚಿತ್ರದ ಬಗ್ಗೆ ಮಾತಾಡಿದ್ದಾರೆ.
ನಿನ್ನೆ ನಡೆದ ಟಗರು ಸಕ್ಸಸ್ ಮೀಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಸುದೀಪ್ ತಮಗೆ ಕಾಲ್ ಮಾಡಿದ್ದರ ಬಗ್ಗೆ ಹೇಳಿದರು.
ನೀವು ಈ ಎನರ್ಜಿಯನ್ನು ಎಲ್ಲಿಂದ ತರ್ತೀರಿ ಅಂತ ಸುದೀಪ್ ತಮ್ಮನ್ನು ಕೇಳಿದರು ಎಂದ ಶಿವಣ್ಣ, ಸುದೀಪ್ ಚಿತ್ರದ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಹಂಚಿಕೊಂಡರು.