ಕೊಹ್ಲಿಗಾಗಿ ವೆಂಗ್ ಸರ್ಕಾರ್ ಅದೆಂಥಾ ತ್ಯಾಗ ಮಾಡಿದ್ರು ಗೊತ್ತಾ…? ಅವತ್ತು ಅವರು ಈ ನಿರ್ಧಾರ ತೆಗೆದುಕೊಳ್ದೇ ಇದ್ದಿದ್ರೆ…?

Date:

ಟೀಂ ಇಂಡಿಯಾದ ನಾಯಕ , ರನ್‌ ಮಷಿನ್ , ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿಯನ್ನು ಇಡೀ ಕ್ರಿಕೆಟ್ ಜಗತ್ತೇ ಇಂದು‌ ಕೊಂಡಾಡುತ್ತಿದೆ…! ವಿರಾಟ್ ವೀರಾವೇಶಕ್ಕೆ ಎದುರಾಳಿ ತಂಡಗಳು ತಲೆಬಾಗುತ್ತಿವೆ. ವಿಶ್ವ ಶ್ರೇಷ್ಠ ಬೌಲರ್ ಗಳೂ ಸಹ ವಿರಾಟ್ ಗೆ ಬೌಲಿಂಗ್ ಮಾಡಲು ಸ್ವಲ್ಪ ಭಯ ಪಡ್ತಾರೆ…! ಇಂಥಾ ವಿರಾಟ್ ಗಾಗಿ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರ್ ಅದೆಂಥಾ ದೊಡ್ಡ ತ್ಯಾಗ ಮಾಡಿದ್ದಾರೆ ಗೊತ್ತಾ….?  ಅವರೇ ತಾವು ಅಂದು ಮಾಡಿದ ತ್ಯಾಗದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.


ಎಸ್ .ಬದರಿನಾಥ್ ಅವರ ಬದಲು ವಿರಾಟ್ ಕೊಹ್ಲಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ದಿಲೀಪ್ ವೆಂಗ್ ಸರ್ಕಾರ್ ತಮ್ಮ ವೃತ್ತಿ ಜೀವನವನ್ನೇ ತ್ಯಾಗ ಮಾಡಬೇಕಾಯಿತು…! ಹೀಗಂತ ಸ್ವತಃ ಅವರೇ ಹೇಳಿದ್ದಾರೆ.


ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, 2008ರಲ್ಲಿ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾಗ ವಿರಾಟ್ ಕೊಹ್ಲಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದೆ. ಆದರೆ , ಬಿಸಿಸಿಐನ ಖಜಾಂಚಿಯಾಗಿದ್ದ ಶ್ರೀನಿವಾಸ್ ಅವರು ತಮ್ಮ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನ , ತಮಿಳುನಾಡಿನ ಆಟಗಾರ ಎಸ್ ಬದರಿನಾಥ್ ಅವರನ್ನು ಆಯ್ಕೆ ಮಾಡಲು ಮನಸ್ಸು ಮಾಡಿದ್ದರು. ಆದ್ದರಿಂದ ತಾನು ಮುಂದೆ ಕೆಲಸ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ.


2008ರಲ್ಲಿ ಅಂಡರ್ 19ವಿಶ್ವಕಪ್ ಬಳಿಕ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ‌ ಕೈಗೊಂಡಿತ್ತು. ಆ ಪ್ರವಾಸಕ್ಕೆ ಶ್ರೀನಿವಾಸನ್ ಅವರು 29ವರ್ಷದ ಬದರಿನಾಥ್ ಅವರನ್ನು ಆಯ್ಕೆ ಮಾಡಲು ಇಚ್ಛಿಸಿದ್ದರಂತೆ.‌ಆದರೆ ವೆಂಗ್ ಸರ್ಕಾರ್ ಅವರು 19ವರ್ಷದ ವಿರಾಟ್‌ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದರು…! ಆಗ ಶ್ರೀನಿವಾಸನ್ ಅಸಮಧಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ವೆಂಗ್ ಸರ್ಕಾರ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.


ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೋಚ್ ಗ್ಯಾರಿ ಕಸ್ಟರ್ನ್ ಅವರಿಗೂ ಈ ಬಗ್ಗೆ ಸಹಮತ ಇರಲಿಲ್ಲ. ಆದರೆ ದಿಲೀಪ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರಂತೆ.

Share post:

Subscribe

spot_imgspot_img

Popular

More like this
Related

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...