150ಕೆಜಿ ತೂಕದ ದೈತ್ಯ ಮೀನೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದ್ದು, ಇದರ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಮೂರ್ ಪಾರ್ಕ್ ಬೀಚಿನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ ಈ ದೈತ್ಯ ಮೀನನ್ನು ಕಂಡುಹಿಡಿದಿದ್ದಾರೆ. ಮೀನುಗಾರಿಕೆ ಕೆಲಸ ಮಾಡುತ್ತಿರುವ ಲಿಂಡ್ಹೋಮ್ ಇಂಥಾ ಮೀನನ್ನು ನಾನು ಕಂಡಿರಲಿಲ್ಲ ಎಂದಿದ್ದಾರೆ.
ಇದು ಕಾಡ್ ಜಾತಿಯ ಮೀನು ಆಗಿರಬಹುದು ಎಂದು ಊಹಿಸಲಾಗಿದೆ. ಇದನ್ನು ಟ್ರಿಪ್ಲೆಟೈಲ್ ಎಂದು ಸಹ ಕೆಲವರು ಹೆಸರಿಸಿದ್ದಾರೆ.