ಬೆಂಗಳೂರು ಸೇಫ್ ಆಗಿರೋದು ಇನ್ನೊಂದು ದಿನ ಮಾತ್ರ…! ನಾಳೆ (ಭಾನುವಾರ) ಬಳಿಕ ಬೆಂಗಳೂರು ಅನ್ನೋದು ಇರುತ್ತೋ ಇಲ್ವೋ…? ಹೀಗಂತ ಯಾವ ವಿಜ್ಞಾನಿಯೂ ಅಲ್ಲ…ಅರ್ಚಕರೊಬ್ಬರು ನೀಡಿದ ಹೇಳಿಕೆ…!ಹೌದು ,ಮಾರ್ಚ್ 11ರಂದು (ನಾಳೆ) ಬೆಂಗಳೂರಲ್ಲಿ ಭೂಕಂಪ ಆಗಲಿದೆ.
ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಗೋಪಾಲಯ್ಯ ಎಂಬುವವರು ಈ ಭವಿಷ್ಯ ನುಡಿದಿದ್ದಾರೆ. ಗೋಪಾಲಯ್ಯ ಅವರ ಕನಸಿನಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿ ಬೆಂಗಳೂರು ಭೂಕಂಪಕ್ಕೆ ತತ್ತಾಗಲಿದೆ ಎಂದು ಹೇಳಿದ್ದಾರಂತೆ...!
1993ರಿಂದಲೂ ಸ್ವಾಮಿ ಕನಲ್ಲಿ ಈ ವಿಷಯವನ್ನು ಹೇಳಿದ್ದು, ಇದೇ 2018ರ ಮಾರ್ಚ್ 11ರಲ್ಲಿ ಭೂಕಂಪ ಆಗಲಿದೆ ಎಂದು ವೆಂಕಟೇಶ್ವರ ಸ್ವಾಮಿ ಹೇಳಿದ್ದಾರೆ. ಇದನ್ನು ಪ್ರಚಾರ ಮಾಡಲು ಸ್ವಾಮಿಯೇ ತಿಳಿಸಿದ್ದಾರೆ ಎಂದು ಗೋಪಾಲಯ್ಯ ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಹೇಳಿಕೆ. ಪಬ್ಲಿಸಿಟಿಗಾಗಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಖಾಸಗಿವಾಹಿನಿಯೊಂದು ಇದನ್ನು ಸುದ್ದಿಯಾಗಿ ಪ್ರಸಾರ ಮಾಡಿದ್ದು ವೀಡಿಯೋ ವೈರಲ್ ಆಗಿದೆ.