ಐಪಿಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ತಮ್ಮ ಮಗ 118 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

2013ರಲ್ಲಿ ತಮ್ಮ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಾಗ ಮಗ ಅನಂತ್ ಗೆ ಟ್ರೋಫಿ ಸ್ವೀಕರಿಸಲು ನೀತಾ ಹೇಳಿದ್ದರಂತೆ. ಆಗ ಸೋಶಿಯಲ್ ಮೀಡಿಯಾದಲ್ಲಿ ಮಗ ಅನಂತ ಅವರ ತೂಕದ ಬಗ್ಗೆ ಟ್ರೋಲ್ ಗಳಾಗಿದ್ದವು…!

ಇದಾದ ನಂತರ ನೀತಾ ಅವರ ಬಳಿ ಬಂದ ಅನಂತ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳುವುದಾಗಿ ಹೇಳಿದ್ದರು. ಅವರ ಇಷ್ಟಕ್ಕೆ ನೀತಾ ಸಮ್ಮತಿ ಸೂಚಿಸಿದ್ದರು.

ಅನಂತ್ ಅವರು ಸುಮಾರು 500ದಿನಗಳ ಕಾಲ ಜಾಮ್ ನಗರದಲ್ಲಿ ಉಳಿದುಕೊಂಡಿದ್ದು ಪ್ರತಿನಿತ್ಯ 23 ಕಿಮೀ ನಡೆಯುವ ಮುಖೇನ ನೈಸರ್ಗಿಕವಾಗಿ ತೂಕ ಇಳಿಸಿಕೊಂಡಿದ್ದಾರೆ ಎಂದು ನೀತಾ ಖಾಸಗಿ ಮಾಧ್ಯಮದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.







